ಕೊರಟಗೆರೆ :
ತುಮಕೂರು ಕೆ.ಎಂ.ಎಫ್ ನಿಂದ ಉದ್ಘಾಟನೆಗೊಂಡ ಘಟಕಗಳನ್ನು ಮತ್ತೆ ಉದ್ಘಾಟಿಸಿ, ಆಹ್ವಾನ ಪತ್ರಿಕೆಗಳಲ್ಲಿ ಸರ್ಕಾರದ ನಿಯಮದ ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಕುರಂಕೋಟೆ ಮತ್ತು ಬೆಂಡೋಣೆ ಗ್ರಾವiಗಳಲ್ಲಿ ನೂತನ ಬಿ.ಎಂ.ಸಿ ಕಟ್ಟಡಗಳನ್ನು ಉದ್ಘಾಟನಾ ಸಮಾರಂಭವನ್ನು ನ.6 ರಂದು ಕಾರ್ಯಕ್ರಮ ನಡೆಸುವ ಮುಖಾಂತರ ಉದ್ಘಾಟಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹಾಲು ಉತ್ಪಾದಕರ ಸಂಘದ ಅದ್ಯಕ್ಷರನ್ನೊಳಗೊಂಡು ಕೆಲ ನಿರ್ದೇಶಕರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆದರೆ ತಾಲ್ಲೂಕಿನಲ್ಲಿ ಈ ಹಿಂದೆಯೇ ಸೆ.6. 2018 ರಂದು 6 ಗ್ರಾಮಗಳಲ್ಲಿ ಬಿ.ಎಂ.ಸಿ ಘಟಕಗಳ ಉದ್ಘಾಟನೆಯನ್ನು ತಾಲ್ಲೂಕಿನ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಸಮೂಹಿಕವಾಗಿ ಉದ್ಘಾಟನಾ ಸಮಾರಂಭ ನಡೆದಿತ್ತು. ಹಾಲು ಉತ್ಪಾದಕರ ಸಂಘಗಳಲ್ಲಿ ಆರ್ಥಿಕ ಸ್ಥಿತಿ ಉಳಿಸುವ ನಿಟ್ಟಿನಲ್ಲಿ ಆರೂ ಕಡೆ ಸಮಾರಂಭ ಮಾಡದೆ ವಿದ್ಯುಕ್ತವಾಗಿ ಒಂದು ಕಡೆ ಮಾಡಲಾಗಿತ್ತು. ಆದರೆ ತಾಲ್ಲೂಕಿನ ಕುರಂಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ಹಿಂದೆ ಉದ್ಘಾಟನೆಯಾಗಿದ್ದ ಘಟಕವನ್ನೆ ಮತ್ತೊಂದು ಸಾರಿ ಸಂಘದ ಖರ್ಚಿನಲ್ಲಿ ಮಾಡಿ ರೈತರಿಗೆ ಹೊರೆ ಮಾಡಲಾಗಿದೆ ಎಂದು ಗ್ರಾಮಸ್ಥರು ಮತ್ತು ಕೆಲ ಹಾಲು ಉತ್ಪಾದಕರು ಆರೋಪಿಸಿದ್ದಾರೆ.
ಕುರಂಕೋಟೆ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಹ್ವಾನ ಪತ್ರಿಕೆಯಲ್ಲಿ ಸರ್ಕಾರದ ಶಿಷ್ಟಾಚಾರ ಪಾಲಿಸದೇ ಸರ್ಕಾರಕ್ಕೂ ಸಂಘಕ್ಕೂ ಸಂಭಂದವೇ ಇಲ್ಲ ತಾನೇ ಸರ್ವಾಧಿಕಾರಿಯಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿ ಹಂಚಿ ತನಗೆ ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟಾರೆ ಇದರ ತಪ್ಪು ಒಪ್ಪುಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲ ಗ್ರಾಮಸ್ಥರು ಮತ್ತು ಹಾಲು ಉತ್ಪಾದಕರು ಆಗ್ರಹಿಸಿದ್ದಾರೆ.
– ಈಶ್ವರಪ್ಪ ನಿರ್ದೇಶಕರು ಕೆ.ಎಂ.ಎಫ್.
ಕೊರಟಗೆರೆ ಈ ಹಿಂದೆ ಕೆ.ಎಂ.ಎಫ್ ಯಿಂದ ತಾಲ್ಲೂಕಿನಲ್ಲಿ 6ಕಡೆ ಬಿ.ಎಂ.ಸಿ ಘಟಕ ಉದ್ಘಾಟನೆಯಾಗಿದ್ದರೂ 4 ಕಡೆ ಕಟ್ಟಡ ನಿರ್ಮಾಣ ಹಂತದಲ್ಲಿತ್ತು, ಕುರಂಕೋಟೆ ಮತ್ತು ಬೆಂಡೋಣೆಯಲ್ಲಿ ಆ ಸಮಯದಲ್ಲಿ ಕಟ್ಟಡದ ನಿರ್ಮಾಣವೇ ಆಗಿರಲಿಲ್ಲ, ಕಟ್ಟಡಗಳನ್ನು ನಿರ್ಮಾಣ ಮಾಡಿ ಉದ್ಘಾಟಿಸಿದ್ದೇವೆ. ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ನನಗೆ ತಿಳಿದಿಲ್ಲ-
– ಕೊಂಡವಾಡಿ ಚಂದ್ರಶೇಖರ್. ನಿರ್ದೇಶಕರು ಕೆ.ಎಂ.ಎಫ್
ಕುರಂಕೋಟೆ ಮತ್ತು ಬೆಂಡೋಣೇ ಗ್ರಾಮಗಳಲ್ಲಿ ಈ ಹಿಂದೆಯೇ ಬಿ.ಎಂ.ಸಿ ಘಟಕಗಳನ್ನು ಕ್ಯಾಮೇನಹಳ್ಳಿ ಗ್ರಾಮದಲ್ಲಿ ಸಾಮೂಹಿಕವಾಗಿ ಉದ್ಘಾಟಿಸಲಾಗಿತ್ತು, ಹಾಲು ಉತ್ಪಾದಕರಿಗೆ ಹೊರೆಯಾಗದಂತೆ ಈ ಘಟಕಗಳನ್ನು ಒಂದು ಕಡೆ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಉದ್ಘಾಟಿಸಲಾಗಿತ್ತು. ನ.6 ರಂದು ಪುನಃ ಅದೇ ಉದ್ಘಾಟನೆಗೆ ಕಾರ್ಯಕ್ರಮ ಮಾಡಿರುವುದು ಹಾಲು ಉತ್ಪಾದಕರಿಗೆ ಆರ್ಥಿಕ ಹೊರೆ ಬೀಳುತ್ತದೆ.