ತಿಪಟೂರು:
ತುಮಕೂರು ಮತ್ತು ತಿಪಟೂರು ಅಬಕಾರಿ ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಗರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ರೂ 2.10 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ.ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕ್ಯಾತನಾಯಕನಹಳ್ಳಿಯ ಗೋಪಾಲ ಬಿನ್ ರಂಗಯ್ಯ ಮತ್ತು ದಬ್ಬಗುಂಟೆ ಗ್ರಾಮದ ಕಾಂತರಾಜು ಬಿನ್ ಕರಿಯಪ್ಪ ಎಂಬುವವರ ಬಳಿ 300 ಗ್ರಾಂ ಗಾಂಜಾ, ಒಂದು ಆಟೊ ರಿಕ್ಷಾ ದಸ್ತಗಿರಿ ಮಾಡಿ, ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ದಿನಾಂಕ:20-11-2019ರ ಇನ್ನೊಂದು ಪ್ರಕರಣದಲ್ಲಿ ತಿಪಟೂರು ತಾಲ್ಲೂಕು ನಾಗತಿಹಳ್ಳಿ ಗ್ರಾಮದ ನಾಗರತ್ನ.ಎನ್.ಎಸ್. ಕೋಂ ಪರಮೇಶ ಎಂಬುವವರಿಂದ 500 ಗ್ರಾಂ ಗಾಂಜಾ ಮತ್ತು ಒಂದು ದ್ವಿಚಕ್ರವಾಹನ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ.
ಎರಡೂ ಪ್ರಕರಣಗಳಿಮದ ಜಪ್ತಿಪಡಿಸಿದ ವಸ್ತುಗಳ ಅಂದಾಜು ಮೌಲ್ಯ ಸುಮಾರಿ 2,10,000/- ರೂ ಗಳಾಗಿದ್ದು ಈ ಹಿಂದೆಯೂ ಸಹ ತಾಲ್ಲೂಕಿನಲ್ಲಿ ಸಾಕಷ್ಟು ದಾಳಿಗಳನ್ನು ನಡೆಸಿ 10ಜನ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕರು ಗಾಂಜ ಹಾಗೂ ಇತರೆ ಮಾದಕ ವಸ್ತುಗಳನ್ನು ಮಾರುವವರ ಬಗ್ಗೆ ಮಾಹಿತಿ ನೀಡಿ ತಿಪಟೂರನ್ನು ಗಾಂಜಾ ಮತ್ತು ಮಾದಕ ವಸ್ತು ರಹಿತ ತಾಲ್ಲೂಕನ್ನು ಮಾಡಲು ಸಹಕರಿಸಬೇಕೆಂದು ಕೋರಿದರು.
ಕಾರ್ಯಾಚರಣೆಯಲ್ಲಿ ಅಬಕಾರಿ ಡಿವೈಎಸ್ಪಿ ನಾರಾಯಣನಾಯ್ಕ, ಅಬಕಾರಿ ನಿರೀಕ್ಷರಾದ ಕೆ.ಟಿ.ವಿಜಯಕುಮಾರ್, ಅರುಣಕುಮಾರ್.ಎಂ.ಜೆ., ಅಬಕಾರಿ ಉಪನಿರೀಕ್ಷಕರಾದ ಗಂಗರಾಜು, ರಾಮಲಿಂಗಯ್ಯ, ನಾಗರಾಜು, ಪೂಜಾ ಲಮಣಿ ರಾಮು, ಅಬಕಾರಿ ಇಲಾಖೆಯ ರಕ್ಷಕರಾದ ಪ್ರಸನ್ನ ಎಸ್., ಸ್ವಾಮಿ ಜಿ.ಆರ್., ಮುಸ್ತಾಫ, ರೇವಣ್ಣ, ಕೇಶವ, ರವಿ, ಕೃಷ್ಣಮೂರ್ತಿ, ಮಲ್ಲಿಕಾರ್ಜುನ ಪಾಲ್ಗೊಂಡಿದ್ದರು.