ಕೊರಟಗೆರೆ:
ತಾಲ್ಲೂಕಿನ ಬೊಮ್ಮಲ ದೇವಿಪುರ ಪಂಚಾಯ್ತಿ ಕಂಪ್ಯೂಟರ್ ಆಪರೇಟರ್ ಹರೀಶ್ 4000 ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಬೊಮ್ಮಲ ದೇವಿಪುರದ ವಾಸಿ ದತ್ತಾತ್ರೇಯ ಎನ್ನುವರು ಬಸವ ವಸತಿ ಯೋಜನೆಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ನೀಡಿದ ಗ್ಹಣದಿಂದ ಮನೆ ಕಟ್ಟುತ್ತಿದ್ದು ಮನೆಯ ಕಾಮಗಾರಿ ಪೂರ್ಣಗೊಂಡಿದ್ದು ಅಂತಿಮ ಬಿಲ್ಲು ಪಾವತಿಯಾಗ ಬೇಕಿರುವ ಹಿನ್ನೆಲೆಯಲ್ಲಿ ಮನೆಯ ಕಟ್ಟಡ ಪೂರ್ಣಗೊಂಡ ಪೋಟೋ ಮತ್ತು ಮಾಹಿತಿಯನ್ನು ಆನ್ಲೈನ್ ಅಪ್ಲೋಡ್ ಮಾಡಲು 10000 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದು ಮೊದಲ ಕಂತು 5000 ನಗದು ಹಣವನ್ನು ನೀಡಿದ್ದು ಉಳಿಕೆ ಹಣಕ್ಕೆ ಒತ್ತಾಯಿಸಿದ್ದು ನೊಂದ ಅರ್ಜಿದಾರ ದತ್ತಾತ್ರೇಯ ರವರು ತುಮಕೂರು ಭ್ರಷ್ಟಾಚಾರ ನಿಗ್ರ ದಳದ ಉಪಾಧೀಕ್ಷಕರಾದ ಬಿ.ಉಮಾಶಂಕರ್ ರವರನ್ನು ಬೇಟಿಯಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ದೂರು ನೀಡಿದ್ದು ದೂರನ್ನಾಧರಿಸಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಹರೀಶ್ ರವರಿಗೆ ಎರಡನೆಯ ಬಾಪ್ತು 4000 ಲಂಚದ ಹಣ ಕೊಡುವಾಗ ಭ್ರಷ್ಟಾಚಾರ ನಿಗ್ರಹ ದಳದ ಇನ್ಸ್ಪೆಕ್ಟರ್ ಸುನೀಲ್ ಲಂಚದ ಹಣದ ಸಮೇತ ಆರೋಪಿ ಹರೀಶ್ ರವರನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ಇನ್ ಸ್ಪೆಕ್ಟರ್ ಹಾಗೂ ಸಿಬ್ಬಂಧಿಗಳು ಭಾಗಿಯಾಗಿದ್ದಾರೆ.