ತುಮಕೂರು:
ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಇತ್ತೀಚೆಗೆ ಜರುಗಿದದ “9ನೇ ಆವೃತ್ತಿ ಸ್ಮಾರ್ಟ್ ಸಿಟಿ ಎಕ್ಸ್ಪೋ ವಲ್ರ್ಡ್ ಕಾಂಗ್ರೆಸ್ 2019 ಮೇಳ”ದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಗರಗಳನ್ನು ಸಬಲೀಕರಣಗೊಳಿಸಲು ಹಾಗೂ ಪ್ರಪಂಚದ ವಿವಿಧ ನಗರಗಳ ಆವಿಷ್ಕಾರಗಳನ್ನು ಸಂಗ್ರಹಿಸಲು ನವೆಂಬರ್ 19 ರಿಂದ ಮೂರು ದಿನಗಳ ಕಾಲ ಈ ಮೇಳವನ್ನು ಆಯೋಜಿಸಲಾಗಿತ್ತು. ಸಾಮಾಜಿಕ ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಪಾಲುದಾರಿಕೆಗಳನ್ನು ಸ್ಥಾಪಿಸಲು ಹಾಗೂ ವ್ಯಾಪಾರದ ಅವಕಾಶಗಳನ್ನು ಗುರುತಿಸುವ ಮೂಲಕ ಈವೆಂಟ್ ನಗರ ಮತ್ತು ಆ ನಗರಗಳ ನಾಗರಿಕರಿಗೆ ವಿಶ್ವಾದ್ಯಂತ ಉತ್ತಮ ಭವಿಷ್ಯವನ್ನು ಸೃಷ್ಟಿಸಲು ಈ ಮೇಳ ಪ್ರಯೋಜನವಾಯಿತು.
ಮೇಳದಲ್ಲಿ ಹಲವಾರು ಮುಂಚೂಣಿಯ ದೇಶ/ವಿದೇಶಿ ಬ್ರಾಂಡ್, ಸ್ಮಾರ್ಟ್ ಸಿಟಿ, ಸ್ಮಾರ್ಟ್ ಸಾರಿಗೆ, ಸ್ಮಾರ್ಟ್ ಎನರ್ಜಿ, ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ), ಅತ್ಯಾಧುನಿಕ ಲ್ಯಾಪ್ ಟಾಪ್, ಸ್ಕ್ಯಾನರ್, ಹಾರ್ಡ್ ಡಿಸ್ಕ್, ಸ್ಮಾರ್ಟ್ ಹೆಲ್ತ್ ಕೇರ್ ಉತ್ಪನ್ನಗಳು, ಸ್ಮಾರ್ಟ್-ಲೈಫ್ ಸಾಧನ, ಗೋಡೆ ಅಲಂಕಾರಿಕ ವಸ್ತು, ರೀಡಿಂಗ್ ದೀಪ, ರೌಟರ್ ಸೇರಿದಂತೆ ನವೀನ ಸಂಶೋಧನೆ/ ಗುಣಮಟ್ಟ/ ವಿನ್ಯಾಸ/ ಸ್ಮಾರ್ಟ್-ಲೈಫ್ ಸಾಧನಗಳ ಉತ್ಪನ್ನಗಳನ್ನು ಪ್ರದರ್ಶಿಗಳು ಉದ್ಯಮಗಳು ಭಾಗವಹಿಸಿದ್ದವು.
ಇದಲ್ಲದೆ ಮೇಳದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಸ್ಥಾಪಿಸಲಾಗಿದ್ದ ಇಂಡಿಯನ್ ಪೆವಿಲಿಯನ್ನಲ್ಲಿ ಪಾಲುದಾರಿಕೆ ಮತ್ತು ಬ್ರಾಂಡ್ ನಿರ್ಮಾಣದ ಮೂಲಕ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆ ವತಿಯಿಂದ ಪ್ರತ್ಯೇಕ ಮಳಿಗೆಯನ್ನು ತೆರೆಯಲಾಗಿತ್ತು. ಮಳಿಗೆಯಲ್ಲಿ ತುಮಕೂರಿನಲ್ಲಿ ಕೈಗೊಂಡಿರುವ ನಗರಾಭಿವೃದ್ಧಿ ಮತ್ತು ಮುಂದೆ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯ ಚಟುವಟಿಕೆ ಕುರಿತು ಮಾಹಿತಿ ನೀಡಲಾಯಿತಲ್ಲದೆ ಇತರ ಸ್ಮಾರ್ಟ್ ಸಿಟಿಗಳು, ಹೊಸ ಕೈಗಾರಿಕೆಗಳು, ತಜ್ಞರು ಹಾಗೂ ಪ್ರಪಂಚದ ಇತರ ಮಧ್ಯಸ್ಥಗಾರರೊಂದಿಗೆ ಸಂವಹನ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಹೊಸ ಕಲ್ಪನೆಗಳು ಮತ್ತು ಆವಿಷ್ಕಾರಗಳನ್ನು ವಿನಿಮಯ ಮಾಡಿಕೊಳ್ಳಲು, ಹೊಸ ಉತ್ಪನ್ನಗಳು ಮತ್ತು ಮಾದರಿಗಳ ಬಗ್ಗೆ ತಿಳಿಯಲು ಇದೊಂದು ಉತ್ತಮ ವೇದಕೆಯಾಗಿತ್ತು.
ಮೇಳದಲ್ಲಿ Inclusive and sharing cities ಎಂಬ ವಿಷಯ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷೆ ಡಾ|| ಶಾಲಿನಿ ರಜನೀಶ್ ಭಾಗವಹಿಸಿದ್ದರು. ಅರ್ಬನ್ ಎನ್ವಿರಾನ್ಮೆಂಟ್, ಡಿಜಿಟಲ್ ಟ್ರಾನ್ಸ್ಫಾರ್ಮೇಶನ್, ಮೊಬಿಲಿಟಿ, ಗವರ್ನಾನ್ಸ್ & ಫೈನಾನ್ಸ್, ಇನ್‍ಕ್ಲೂಸಿವ್ ಮತ್ತು ಶೇರಿಂಗ್ ಸಿಟೀಸ್, ಸ್ಮಾರ್ಟ್ ಸಿಟೀಸ್ ಮತ್ತು ಇನ್ನೋವೇಶನ್ ನೆಟ್‍ವರ್ಕ್‍ಗಳ ನಡುವಿನ ಅನುಭವಗಳ ವಿನಿಮಯ, ಸ್ಮಾರ್ಟ್ ಮೊಬಿಲಿಟಿ ಮುನ್ಸೂಚನೆ, ಲಾಜಿಸ್ಟಿಕ್ ವಲಯವನ್ನು ಸುಧಾರಿಸುವ ವಿಧಾನ, ತಡೆರಹಿತ ಇಂಟರ್ಮೋಡಲ್ ಚಲನಶೀಲತೆಯ ಭರವಸೆಯನ್ನು ರಿಯಾಲಿಟಿ ಮಾಡುವ, ಸ್ಮಾರ್ಟ್ ಪೆÇೀಟ್ರ್ಸ್ ಪಿಯರ್ಸ್ ಆಫ್ ದಿ ಫ್ಯೂಚರ್ ಎಂಬ ವಿಷಯಗಳ ಬಗ್ಗೆ ಚರ್ಚಿಸಲಾಯಿತಲ್ಲದೆ ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಡಾ|| ಶಾಲಿನಿ ರಜನೀಶ್ ಅವರೊಂದಿಗೆ ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಯ್ ವಿ, ಐ.ಟಿ ಅಧಿಕಾರಿ ಕುಮಾರಿ ದತ್ತ ಸ್ಮೀತಾ ಭಾಗವಹಿಸಿದ್ದರು.