ಗುಬ್ಬಿ :
ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಹೇಳಿಕೊಡುವ ದೈಹಿಕ ಶಿಕ್ಷಕಿ ಅಕ್ತರ್‍ತಾಜ್‍ರವರ ನಿರ್ಲಕ್ಷ್ಯತನದಿಂದ ದೇಶವೇ ಕೈಮುಗಿಯುವಂತಹ ರಾಷ್ಟ್ರಧ್ವಜವನ್ನು ಗೆದ್ದಲು ಹಿಡಿಸಿ ಕಸಪೊರಕೆಯ ಮಧ್ಯದಲ್ಲಿ ಬಿಸಾಕಿರುವುದು ಇವರ ರಾಷ್ಟ್ರಪ್ರೇಮವನ್ನು ಎತ್ತಿ ಹಿಡಿಯುತ್ತದೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗವಿದ್ದು, ಸುಮಾರು 800-1000 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು ಸಾಕಷ್ಟು ನುರಿತ ಉಪಾಧ್ಯಾಯರುಗಳಿದ್ದು ಇವರ ಮೇಲ್ವಿಚಾರಣೆಗೆ ಉಪಪ್ರಾಂಶುಪಾಲೆ ಭವ್ಯರವರು ಈ ಎಲ್ಲಾ ಉಸ್ತುವಾರಿಗಳನ್ನು ನೋಡಿಕೊಳ್ಳುತ್ತಿದ್ದು ದೈಹಿಕ ಶಿಕ್ಷಕಿಯನ್ನು ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳಲಾಗದೆ ರಾಷ್ಟ್ರಧ್ವಜವನ್ನು ತನ್ನ ಕೊಠಡಿಯಲ್ಲಿ ಭದ್ರವಾಗಿ ಇರಿಸಿಬೇಕಾದಂತಹ ದೈಹಿಕ ಶಿಕ್ಷಕಿ ಅಕ್ತರ್‍ತಾಜ್‍ರವರು ಕಸ ಗುಡಿಸುವ ಪೊರಕೆಗಳ ನಡುವೆ ಹಾಗೂ ಗೆದ್ದಲು ಹುಳು ಬಿದ್ದ ರಾಷ್ಟ್ರಧ್ವಜವನ್ನು ಕಲಿಯುವ ಮಕ್ಕಳು ತಿರುಗಾಡುವ ಜಾಗದಲ್ಲೇ ಅಸಡ್ಡೆಯಿಂದ ಎಸೆದಿದ್ದು ಇಡೀ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಎಷ್ಟು ಸಮಂಜಸ.
ಈ ಬಗ್ಗೆ ಉಪಪ್ರಾಂಶುಪಾಲರರನ್ನು ಕೊಠಡಿಗೆ ವಸ್ತುಸ್ಥಿತಿಯನ್ನು ತೋರಿಸಿದಾಗ ಹಾರಿಕೆಯ ಉತ್ತರ ನೀಡಿ ಹಾಳಾಗಿದೆ ಎಂಬ ಅಭಿಪ್ರಾಯ ಸೂಚಿಸಿ ತಮ್ಮ ಕೊಠಡಿಗೆ ತೆರಳಿರುವುದು ಈಕೆಯ ರಾಷ್ಟ್ರಪ್ರೇಮಕ್ಕೆ ಹಿಡಿದ ಕೈಗನ್ನಡಿ. ಈ ಬಗ್ಗೆ ಮೇಲಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದುನೋಡುವಂತಹ ರಾಷ್ಟ್ರಭಕ್ತರಲ್ಲಿ ಮೂಡಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸ್ಪಷ್ಟನೆ :
ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ವೆಂಕಟೇಶಯ್ಯನವರು ಇದರ ಬಗ್ಗೆ ಪ್ರತಿಕ್ರಿಯಿಸಿ ನಾನು ರಜೆಯ ಮೇಲೆ ಇರುವುದರಿಂದ ಸರಿಯಾದ ಮಾಹಿತಿ ಇಲ್ಲದ ಕಾರಣ ನಮ್ಮ ಇಲಾಖೆಯ ಇ.ಸಿ.ಓ, ಬಿ.ಆರ್.ಸಿ, ಸಿ.ಆರ್.ಪಿ ಇವರನ್ನು ಸ್ಥಳಪರಿಶೀಲನೆಗೆ ಕಳುಹಿಸಿದ್ದು ವರದಿ ನೀಡಿದ ನಂತರ ತಪಿತಸ್ಥರ ವಿರುದ್ಧ ಮೇಲಧಿಕಾರಿಗಳ ಆದೇಶದ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.