ಚಿಕ್ಕನಾಯಕನಹಳ್ಳಿ :
ನಾವು ನಮಗೋಸ್ಕರ ಬದುಕಿದಾಗ ಅದು ಶ್ರೇಷ್ಟವಲ್ಲ .ಸಮಾಜಕ್ಕಾಗಿ ಬದುಕಿದಾಗ ಮಾತ್ರಶ್ರೇಷ್ಟ ಎಂದು ಕಾನೂನು ಸಚಿವಜೆ.ಸಿ.ಮಾಧುಸ್ವಾಮಿ ನುಡಿದರು.
ತಾಲೂಕಿನ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿ ಕುಪ್ಪೂರು ಪತ್ತಿನ ಸಹಕಾರಿ ಬ್ಯಾಂಕ್ ಎಲ್ಲಾ ರೀತಿಯಲ್ಲಿ ಒಳ್ಳೆಯ ಸೌಲಭ್ಯವನ್ನು ಪಡೆದಿದೆ.ಇಲ್ಲಿನ ಯುವಜನಾಂಗ ಸಮರ್ಥವಾಗಿ ಕೆಲಸ ಮಾಡಿ ಉತ್ತಮ ಸಾಧನೆ ಮಾಡಿದ್ದಾರೆ. ಅವಧಿ ಮುಗಿದ ಮೇಲೂ ಸಹ ದಾಖಲೆಗಳನ್ನು ಪಡೆದು ರೈತರ ಸಾಲಮನ್ನಾ ಮಾಡಿಸಿದ್ದೇನೆ ಎಂದರು.ತಾಲೂಕಿನಲ್ಲಿ ರೈತರಿಗೆ ಹೆಚ್ಚಿನ ಮುಂಗಡ ನೀಡಿರುವ ಪ್ರಥಮ ಬ್ಯಾಂಕ್ ಇದಾಗಿದೆ ಎಂದರು.
ಚುರುಕುಗೊಂಡ ತಾಲೂಕು ಆಡಳಿತಃತಾಲೂಕಿನ ರೈತರು ಕಂದಾಯ ದಾಖಲೆಗಳನ್ನು ಪಡೆಯಲು ಪರದಾಡುವುದನ್ನು ತಪ್ಪಿಸಲು,ಕಂದಾಯ ಅದಾಲತ್,ಪವತಿವಾರಸು ಖಾತೆ ಆಂದೋಲನ,ಕಂದಾಯ ಅದಾಲತ್,ಭೂ ದಾಖಲಾತಿ ತಿದ್ದುಪಡಿ,ಬಗರ್ ಹುಕುಂ ಪ್ರಕರಣಗಳ ಖಾತೆಗಳ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ತಾಲೂಕು ಆಡಳಿತವನ್ನು ಚುರುಗೊಳಿಸಿದ್ದೇನೆ ಎಂದರು.
ಹೊಸಖಾತೆದಾರರಿಗೆ ಸಾಲದ ಆಧ್ಯತೆಃ
ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿ ಮೂಲಕ ಹೊಸದಾಗಿ ಖಾತೆ ಪಹಣಿ ಮಾಡಿಸಿಕೊಂಡಿರುವ 5 ಎಕರೆ ಒಳಗೆ ಜಮೀನು ಹೊಂದಿರುವ ರೈತರಿಗೆ ಸಾಲ ನೀಡಿಕೆಯಲ್ಲಿ ಆಧ್ಯತೆಯನ್ನು ನೀಡುವಂತೆ ಸಂಘಗಳಿಗೆ ತಿಳಿಸಲಾಗಿದೆ.1757 ಕೋಟಿ ಪಿಕಾರ್ಡ್(ಪಿಎಲ್‍ಡಿ) ಬ್ಯಾಂಕ್‍ಗಳ ಸುಸ್ತಿ ಸಾಲವನ್ನು ರದ್ದುಮಾಡಿಸಿ,ಹೊಸದಾಗಿ 480 ಕೋಟಿರೂಗಳನ್ನು ಅನುದಾನ ನೀಡಲಾಗಿದೆ,ಇದರಲ್ಲಿ ಪ್ರತಿ ಬ್ಯಾಂಕಿಗೆ 1ರಿಂದ 2 ಕೋಟಿ ಅಲಾಟ್‍ಮೆಂಟ್ ಸಿಗಲಿದೆ.ಸರ್ಕಾರದ ಮಟ್ಟದಲ್ಲಿ ಪಿಕಾರ್ಡ್ ಬ್ಯಾಂಕಿನಲ್ಲಿರುವ ರೈತರ ಸಾಲದ ಬಡ್ಡಿ ಮತ್ತು ಸುಸ್ತಿ ಬಡ್ಡಿ ಮನ್ನಾ ಮಾಡಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ತಿಳಿಸಿದರು.
ಬಿಎಸ್‍ವೈಗೆ ಅಭಾರಿಃ
ಇದುವರೆಗು ಹೇಮಾವತಿ ನಾಲೆಯಲ್ಲಿ ಕೇವಲ 1200 ಕ್ಯೂಸೆಕ್ಸ್ ಮಾತ್ರ ನೀರು ಹರಿಯುವ ಅವಕಾಶವಿತ್ತು.ಇದರಿಂದ ತುಮಕೂರು ಜಿಲ್ಲೆಯ ಪಾಲಿನ ಸಂಪೂರ್ಣ ನೀರನ್ನು ಪಡೆಯಲು ಸಾಧ್ಯವಾಗಿರಲಿಲ್ಲ.ಮುಖ್ಯಮಂತ್ರಿಗಳಿಗೆ ಈ ವಿಚಾರವನ್ನು ಮನವರಿಕೆ ಮಾಡಿದಾಗ 0ಯಿಂದ 70 ಕಿ.ಮೀ.ವರಗೆ ನಾಲೆ ಅಗಲೀಕರಣಕ್ಕಾಗಿ480 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆ.ಈಗ ಎರಡು ಪಟ್ಟು ಅಂದರೆ 2400 ಕ್ಯೂಸೆಕ್ಸ್ ನೀರಿನ ಹರಿವು ಸಾಧ್ಯವಾಗುತ್ತದೆ.ಮುಂದೆ 70 ರಿಂದ 160 ಕಿ.ಮೀ.ವರಗೆ 560 ಕೋಟಿ ರೂಗಳ ವೆಚ್ಚದಲ್ಲಿ ನಾಲೆ ಅಗಲೀಕರಣವನ್ನು ಕೈಗೆತ್ತಿಕೊಳ್ಳಲಾಗುತ್ತದೆ.ಇದರಿಂದ ನೀರು ವೇಗವಾಗಿ ಹರಿದು ಬರುವುದರಿಂದ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲು ಸಹಕಾರಿಯಾಗುತ್ತದೆ.ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಡಬ ಕೆರೆ ಒಂದನ್ನು ಬಿಟ್ಟು ಉಳಿದ ಎಲ್ಲಾ ಕೆರೆಗಳನ್ನು ತುಂಬಿಸಲಾಗಿದೆ.