ತುಮಕೂರು:

      ವಿದ್ಯಾರ್ಥಿಗಳೇ ಪ್ರದರ್ಶಿಸಿದ ಯಕ್ಷಗಾನ ‘ಏಕಾದಶಿ ದೇವಿ ಮಹಾತ್ಮೆ’ ಹಾಗೂ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ‘ಗದಾಯುದ್ಧ’ ತುಮಕೂರಿನ ಕಲಾರಸಿಕರ ಮೆಚ್ಚುಗೆಗೆ ಪಾತ್ರವಾದವು. ನಗರದ ‘ಯಕ್ಷದೀವಿಗೆ’ಯ ನೇತೃತ್ವದಲ್ಲಿ ನಡೆದ ಐದು ಗಂಟೆಗಳ ಸುದೀರ್ಘ ಯಕ್ಷಗಾನ ಪ್ರದರ್ಶನವು ಪ್ರೇಕ್ಷಕರ ಮನರಂಜಿಸಿತು.

      ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಕ್ಷಿಣ ಕನ್ನಡ ಮಿತ್ರವೃಂದ ಹಾಗೂ ಯಕ್ಷದೀವಿಗೆಯ ಸಹಕಾರದೊಂದಿಗೆ ಎಸ್.ಎಸ್.ಪುರಂನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಿದ ಒಂದು ದಿನದ ವಿಚಾರ ಸಂಕಿರಣದ ಅಂಗವಾಗಿ ಎರಡು ಯಕ್ಷಗಾನ ಪ್ರದರ್ಶನಗಳು ನಡೆದವು.

      ಯಕ್ಷದೀವಿಗೆಯ ಅಧ್ಯಕ್ಷೆ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆಯವರಿಂದ ತರಬೇತಿ ಪಡೆದ ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಬಣ್ಣಹಚ್ಚಿ ಗೆಜ್ಜೆ ತೊಟ್ಟು ‘ಏಕಾದಶಿ ದೇವಿ ಮಹಾತ್ಮೆ’ ಎಂಬ ಯಕ್ಷಗಾನವನ್ನು ಪ್ರದರ್ಶಿಸಿದರು. ಮಾರುತಿ ವಿದ್ಯಾಕೇಂದ್ರ, ಬಿಷಪ್ ಸಾರ್ಜೆಂಟ್ ಶಾಲೆ, ಶ್ರೀ ಗುರುಕುಲ್, ಚೇತನ ವಿದ್ಯಾಮಂದಿರ, ವಿದ್ಯಾವಾಹಿನಿ ಕಾಲೇಜು, ಶ್ರೀಚೈತನ್ಯ ಟೆಕ್ನೋ ಸ್ಕೂಲ್, ಎಚ್‍ಎಂಎಸ್ ಐಟಿ, ತುಮಕೂರು ವಿಶ್ವವಿದ್ಯಾನಿಲಯ ಮೊದಲಾದ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

      ಪ್ರಮೋದಿನಿ ಎನ್. ಆಚಾರ್ಯ (ದೇವೇಂದ್ರ), ಸಂವೃತ ಶರ್ಮಾ (ಅಗ್ನಿ), ಜನ್ಯ ಟಿ.ಜೆ. (ವರುಣ), ಲಹರಿ ಟಿ.ಜೆ. (ನಾಡೀಜಂಘ), ನಿಶಾಂತ್ ಓಂಕಾರ್ (ಮಂತ್ರಿ), ದೇವದೂತ (ಕಿರಣ್), ಧನುಷ್ ಓಂಕಾರ್ (ಗರುಡ), ನಾಗಮಣಿ (ಮೇಘಮುಖಿ), ಪೃಥ್ವಿಚಂದ್ರ ಪೆರುವಡಿ (ಮುರಾಸುರ), ಇಂಚರ (ಈಶ್ವರ), ಸಾತ್ವಿಕ ನಾರಾಯಣ ಭಟ್ ಕೆ. (ವಿಷ್ಣು), ಖುಷಿ ಶರ್ಮಾ (ದೇವಿ) ಹಾಗೂ ವೈಭವ್ (ರಕ್ಕಸದೂತ) ಅಭಿನಯಿಸಿದ್ದರು.

      ಹವ್ಯಾಸಿ ಕಲಾವಿದರಿಂದ ನಡೆದ ‘ಗದಾಯುದ್ಧ’ ಪ್ರಸಂಗದಲ್ಲಿ ಆರತಿ ಪಟ್ರಮೆ (ಕೌರವ), ಶಶಾಂಕ ಅರ್ನಾಡಿ (ಭೀಮ), ಉಜಿರೆ ಅಶೋಕ ಭಟ್ (ಸಂಜಯ), ತೇಜಸ್ವಿ ಎಂ. ಭಟ್ (ಅಶ್ವತ್ಥಾಮ), ಸಿಬಂತಿ ಪದ್ಮನಾಭ (ಬೇಹಿನಚರ), ಗಣರಾಜ ಕುಂಬ್ಳೆ (ಧರ್ಮರಾಯ), ಪ್ರೇಮಾ ಹೆಗಡೆ (ಅರ್ಜುನ), ವಿಜಯಶಂಕರ್ (ನಕುಲ), ಹೇಮಲತ ಎಂ.ಎಸ್. (ಸಹದೇವ), ಡಾ. ವಾಹಿನಿ ಅರವಿಂದ್ (ಕೃಷ್ಣ) ಹಾಗೂ ಈಶ್ವರಚಂದ್ರ ನಿಡ್ಲೆ (ಬಲರಾಮ) ಭಾಗವಹಿಸಿದ್ದರು.
ಹಿಮ್ಮೇಳ ಕಲಾವಿದರಾಗಿ ಪುರುಷೋತ್ತಮ ಭಟ್ ನಿಡುವಜೆ, ಅರ್ಜುನ್ ರಾವ್ ಕೋರ್ಡೇಲ್, ವೇಣು ಮಾಂಬಾಡಿ, ಶ್ರೀಶರಾವ್ ನಿಡ್ಲೆ, ಅಕ್ಷಯರಾವ್ ವಿಟ್ಲ ಹಾಗೂ ಮುರಳಿ ಬಾಯಾಡಿ ಸಹಕರಿಸಿದರು.

(Visited 28 times, 1 visits today)