ತುಮಕೂರು :
ಯೂನಿಸೆಫ್ ವತಿಯಿಂದ ಹೈದರಾಬಾದ್‍ನಲ್ಲಿ 2019ರ ಡಿಸೆಂಬರ್ 18 ರಿಂದ 20ರವರೆಗೆ ದಕ್ಷಿಣ ಭಾರತ ರಾಜ್ಯ(ತೆಲಂಗಾಣ, ಕರ್ನಾಟಕ, ಆಂದ್ರಪ್ರದೇಶ)ಗಳಿಗಾಗಿ ಆಯೋಜಿಸಲಾಗಿದ್ದ 6ನೇ ವರ್ಷದ ನೀರು, ನೈರ್ಮಲ್ಯ ಮತ್ತು ಶುಚಿತ್ವ ಸಮಾವೇಶದಲ್ಲಿ ತುಮಕೂರು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ರಾಜ್ಯಪಾಲ ತಮಿಳ್‍ಸೇ ಸೌಂದರ್‍ರಾಜನ್ ಅವರು ಜಿಲ್ಲೆಯನ್ನು ಅಭಿನಂದಿಸಿ ಪ್ರಶಂಸನಾ ಪತ್ರವನ್ನು ನೀಡಿದ್ದಾರೆ.
ಸಮಾವೇಶದಲ್ಲಿ ಸ್ವಚ್ಛ ಭಾರತ ಮಿಷನ್(ಗ್ರಾ) ಜಿಲ್ಲಾ ನೋಡಲ್ ಅಧಿಕಾರಿಯಾದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಬಸನಗೌಡ ಅವರು ಸ್ವೀಕರಿಸಿದ ಪ್ರಶಂಸನಾ ಪತ್ರವನ್ನು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಇಂದು ಹಸ್ತಾಂತರಿಸಿದರು.
(Visited 13 times, 1 visits today)