ತುಮಕೂರು :
ನಗರದ ಸಿದ್ದಿವಿನಾಯಕ ಮಾರುಕಟ್ಟೆ ಮುಂಭಾಗ ಕಳೆದ 10-15 ವರ್ಷಗಳಿಂದ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳನ್ನು ಸ್ಮಾರ್ಟ್‍ಸಿಟಿ ಕಾಮಗಾರಿಯಿಂದ ಅಲ್ಲಿಂದ ತೆರವುಗೊಳಿಸಿದ್ದು, ಹಣ್ಣಿನ ವ್ಯಾಪಾರಿಗಳಿಗಾಗಿ ಶಾಸಕ ಜ್ಯೋತಿಗಣೇಶ್ ಹಾಗೂ ಆಯುಕ್ತರಾದ ಭೂಬಾಲನ್ ಸೇರಿ ಹಳೇ ಸಿದ್ದಿವಿನಾಯಕ ಮಾರುಕಟ್ಟೆ ಮುಂಭಾಗ ತಾತ್ಕಾಲಿಕವಾಗಿ ವ್ಯಾಪಾರ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ.
ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳಾಂತರವಾದ ನಂತರ ಪಕ್ಕದಲ್ಲಿಯೇ ಮಿನಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿಗಳು ವಹಿವಾಟು ಮಾಡುತ್ತಿದ್ದು, ಈಗ ಹಣ್ಣು ಹಾಗೂ ಹೂವಿನ ವ್ಯಾಪಾರಿಗಳು ವ್ಯಾಪಾರ ಮಾಡಲು ಅಡ್ಡಿಯುಂಟು ಮಾಡುತ್ತಿದ್ದು, ಮಿನಿ ಮಾರುಕಟ್ಟೆಗೆ ತೆರಳುವ ಗೇಟ್ ಬಾಗಿಲು ಹಾಕಿ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ತರಕಾರಿ ವ್ಯಾಪಾರಿಗಳಂತೆ ಹಣ್ಣು ಮತ್ತು ಹೂವು ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು, ವ್ಯಾಪಾರ ಮಾಡದೇ ಜೀವನ ನಡೆಸುವುದು ಕಷ್ಟವಾಗಿದ್ದು, ತರಕಾರಿ ವ್ಯಾಪಾರಿಗಳು ಶಾಸಕರು ಹಾಗೂ ಪಾಲಿಕೆ ಆಯುಕ್ತರು ಜಾಗ ನಿಗದಿ ಮಾಡಿದ್ದರು ಸಹ ಈ ರೀತಿ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಫ್ರೂಟ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಖುದ್ದೂಸ್ ಅಹಮದ್ ಅಳಲು ತೋಡಿಕೊಂಡರು
ಈ ವೇಳೆ ಲಕ್ಷ್ಮಮ್ಮ, ನಾಸೀರ್, ಗೋವಿಂದ, ಲೋಕಮ್ಮ, ಶಿವಮ್ಮ, ರಾಜಣ್ಣ, ಅನ್ಸರ್, ಪಾಚಲಾಲ್ ಸೇರಿದಂತೆ ಇತರರಿದ್ದರು.