ತುಮಕೂರು :
ತಾಲೂಕಿನ ಇತಿಹಾಸ ಪ್ರಸಿದ್ದ ಗೂಳೂರು ಮಹಾಗಣಪತಿ ದೇವಾಲಯಲ್ಲಿ ಮಹಾಗಣಪತಿ ಸ್ಥಿರಬಿಂಬ ಪ್ರತಿಷ್ಠಾಪನೆÀ ಮತ್ತು ಕಳಸ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಿಲಾಗ್ರಹದ ಪ್ರರಿಷ್ಠಾಪನೆಯು ಜ.26 ರ ಭಾನುವಾರ ಮತ್ತು 27 ರ ಸೋಮವಾರ ಗ್ರಾಮದ ಹದಿನೆಂಟು ಕೋಮಿನ ಜನಾಂಗದವರು ಸೇರಿದಂತೆ ವಿವಿಧ ಗಣ್ಯವೆಕ್ತಿಗಳು ಹಾಗೂ ಪೂಜ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರವೇರಲಿದೆ
26 ರ ಭಾನುವಾರ ಸಂಜೆ 4.25 ಕ್ಕೆ ದೀಪಾರಾಧನೆ ವಾಸ್ತುಹೋಮ ಸೇರಿದಂತೆ ವಿವಿಧ ವಿಧಿವಿಧಾನಗಳು ನಡೆದು 6.30 ಕ್ಕೆ ನೂತನ ಬಿಂಬಕ್ಕೆ ಜಲಾಧಿವಾಸ ಮತ್ತು ಕ್ಷೀರಾಧಿವಾಸ ಮಹಾಮಂಗಳಾರತಿ ನಡೆಯಲಿದೆ.
27 ರ ಸೋಮವಾರ ಬೆಳಿಗ್ಗೆ 5.30ಕ್ಕೆ ಗೋಪುರ ಕಳಶ ಸ್ಥಾಪನೆ ಮತ್ತು 8 ಗಂಟೆಗೆ ನವಗ್ರಹ ಹೋಮ, ಪ್ರತಿಷ್ಠಾಂಗ ಹೋಮಾ, 12 ಗಂಟೆಗೆ ಕುಂಭಾಭಿಷೇಕ ನಡೆಯಯಲ್ಲಿದ್ದು ನಂತರ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ.
ವಿಶೇಷ ಆಹ್ವಾನಿತರು ಸ್ಥಿರಬಿಂಬ ಪ್ರತಿಷ್ಠಾಪನೆÀ ಮತ್ತು ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ರಾಮಕೃಷ್ಣ ವೀರೇಶಾನಂದ ಆಶ್ರಮದ ಶ್ರೀ ವೀರೇಶಾನಂದ ಸ್ಬಾಮೀಜಿ, ಹೀರೆಮಠದ ಡಾ.ಶಿವನಂದ ಶಿವಾಚಾರ್ಯಸ್ವಾಮೀಜಿ,ಆದಿಚುಂಚನಗಿರಿ ಮಹಾ ಸಂಸ್ಥಾನ ತುಮಕೂರು ಶಾಖಾ ಮಠದ ಶ್ರೀ ಮಂಳನಾಥಸ್ವಾಮೀಜಿ, ಜಂಗಮ ಮಠದ ಶ್ರೀಗಂಗಾಧರ ಸ್ವಾಮೀಜಿ,ಮಹಾಲಕ್ಷ್ಮಿ ಪೀಠದ ಜಾÐನಾನಂದಪುರಿ ಸ್ವಾಮೀಜಿ,ಆಧಿಜಾಂಬವ ಶಾಖಾ ಮಠದ ಶ್ರಿ ಷಡಕ್ಷರಿಮುನಿಸ್ವಾಮೀಜಿ ಹಾಗೂ ಗ್ರಾಮದ ಎಲ್ಲಾ ಚುನಾಯಿತ ಸದಸ್ಯರು ಭಾಗವಹಿಸುವರು.