ತುಮಕೂರು :

      ಇತಿಹಾಸ ಪ್ರಸಿದ್ದ ಗೂಳೂರು ಮಹಾಗಣಪತಿ ದೇವಾಲಯಲ್ಲಿಸೋಮವಾರಮಹಾಗಣಪತಿ ಸ್ಥಿರಬಿಂಬ ಪ್ರತಿಷ್ಠಾಪನೆÀ ಮತ್ತು ಕಳಸ ಪ್ರತಿಷ್ಠಾಪನ ಮಹೋತ್ಸವಅದ್ಧೂರಿಯಾಗಿ ನೆರವೇರಿತು.

      ಶಿಲಾಗ್ರಹದ ಪ್ರರಿಷ್ಠಾಪನೆಯು ಜ.26 ರ ಭಾನುವಾರ ಮತ್ತು 27 ರ ಸೋಮವಾರಗ್ರಾಮದ ಹದಿನೆಂಟು ಕೋಮಿನ ಜನಾಂಗದವರು ಸೇರಿದಂತೆ ವಿವಿಧ ಗಣ್ಯವ್ಯಕ್ತಿಗಳು ಹಾಗೂ ಪೂಜ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರವೇರಿತು.

      ಜ.26ರ ಭಾನುವಾರ ಸಂಜೆ 4.25 ಗಂಟೆಗೆ ದೀಪಾರಾಧನೆ ವಾಸ್ತುಹೋಮ ಸೇರಿದಂತೆ ವಿವಿಧ ವಿಧಿವಿಧಾನಗಳು ನಡೆದು 6.30 ಗಂಟೆಗೆನೂತನ ಬಿಂಬಕ್ಕೆ ಜಲಾಧಿವಾಸ ಮತ್ತುಕ್ಷೀರಾಧಿವಾಸ ಮಹಾಮಂಗಳಾರತಿ ನೆರವೇರಿಸಲಾಯಿತು. ಸೋಮವಾರ ಬೆಳಿಗ್ಗೆ 5.30ಕ್ಕೆ ಗೋಪುರ ಕಳಶ ಸ್ಥಾಪನೆ ಮತ್ತು 8 ಗಂಟೆಗೆ ನವಗ್ರಹ ಹೋಮ, ಪ್ರತಿಷ್ಠಾಂಗ ಹೋಮ, 12 ಗಂಟೆಗೆಕುಂಭಾಭಿಷೇಕ ನಡೆಸಲಾಯಿತು.ನಂತರ ವೇದಿಕೆ ಕಾರ್ಯಕ್ರಮಗಳು ನಡೆಯಿತು.

      ಮೆರವಣಿಗೆ; ಭಾನುವಾರಗ್ರಾಮದರಾಜ ಬೀದಿಗಳಲ್ಲಿ ವಿಗ್ರಹವನ್ನುಗಣಪತಿರಥದ ಮೇಲೆ ಮೆರವಣಿಗೆ ಮಾಡಲಾಯಿತು.ಈ ವೇಳೆ ಮಹಿಳೆಯರು ಕಳಸ ಹೊತ್ತು ಸಾಗಿದರು.ಕುಂಭ ಮೇಳದೊಂದಿಗೆ ಡಂಖವಾದ್ಯ, ವೀರಗಾಸೆ, ನಂದಿಧ್ವಜ, ವೀರಗಾಸೆ ಸೇರಿದಂತೆ ಜಾನಪದ ಕಲಾ ತಂಡಗಳ ಜತೆಗೆ ಗ್ರಾಮದ ಹದಿನೆಂಟು ಕೋಮಿನ ಜನರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಗಣಪತಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಯಿತು. ಬಳಿಕ ಸೋಮವಾರ ಬೆಳಗ್ಗೆ ವಿಧಿ-ವಿಧಾನಗಳ ಮೂಲಕ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಸ್ಥಿರಬಿಂಬ ಪ್ರತಿಷ್ಠಾಪನೆ ಮತ್ತು ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ತುಮಕೂರಿನ ಶ್ರೀ ರಾಮಕೃಷ್ಣ ವೀರೇಶಾನಂದಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿವೀರೇಶಾನಂದ ಸ್ಬಾಮೀಜಿ, ಹೀರೆಮಠದ ಡಾ.ಶಿವನಂದ ಶಿವಾಚಾರ್ಯಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ತುಮಕೂರು ಶಾಖಾ ಮಠದ ಶ್ರೀ ಮಂಳನಾಥಸ್ವಾಮೀಜಿ, ಜಂಗಮ ಮಠದ ಶ್ರೀಗಂಗಾಧರ ಸ್ವಾಮೀಜಿ,ಮಹಾಲಕ್ಷ್ಮಿಪೀಠದ ಜಾನಾನಂದಪುರಿ ಸ್ವಾಮೀಜಿ,ಆಧಿಜಾಂಬವ ಶಾಖಾ ಮಠದ ಶ್ರೀ ಷಡಕ್ಷರಿ ಮುನಿಸ್ವಾಮೀಜಿ, ಭಾಗವಹಿಸಿದ್ದರು.

(Visited 21 times, 1 visits today)