ಪಾವಗಡ :
ಒರಿಸ್ಸಾದಲ್ಲಿನ ಸುಮಾರು 500 ಜನ ಕುಷ್ಠ ರೋಗಿಗಳನ್ನು ದತ್ತು ಪಡೆದು ಸುಮಾರು 15 ಲಕ್ಷ ವ್ಯಚ್ಚದಲ್ಲಿ ಅವರಿಗೆ ನೇರವು ನೀಡಲಾಗುತ್ತಿದೆ ಎಂದು ಶ್ರೀರಾಮಕೃಷ್ಣ ಗ್ರಾಮಾಂತರ ಆರೋಗ್ಯದ ಅದ್ಯಕ್ಷರಾದ ಜಪಾನಂದಾ ಸ್ವಾಮಿಜಿ ತಿಳಿಸಿದ್ದಾರೆ.
ಪಟ್ಟಣದ ಶ್ರೀರಾಮಕೃಷ್ಣ ಸೇವಾಶ್ರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ ಒರಿಸ್ಸಾದಲ್ಲಿನ ಸುಮಾರು 500 ಜನ ಕುಷ್ಠರೋಗಿಗಳನ್ನು ದತ್ತು ಪಡೆದಿದ್ದು ಅವರ ಯೋಗಕ್ಷೇಮಕ್ಕಾಗಿ ಅವರ ಭವಿಷ್ಯಕ್ಕೆ ಕತ್ತಲು ಕವಿಯಭಾರದು ಎಂಬ ಧ್ಯೇಯದಿಂದ ಸ್ವಾಮಿ ವಿವೇಕನಂದರ ಆಶಯದಂತೆ ನೊಂದವರ ಪರವಾಗಿ ನಿಂತು ಅವರ ಸೇವೆ ಮಾಡಬೇಕು ಎಂಬ ಸಂಕಲ್ಪದಿಂದ ಶ್ರೀರಾಮಕೃಷ್ಣ ಸೇವಾಶ್ರಮ ಮತ್ತು ಇನ್ಪೋಸ್ಸಿಸ್ ಸಹಯೋಗದಲ್ಲಿ ಸಮರ್ಪಣಾ ತಂಡದ ಸಹಕಾರದಿಂದ 15 ಲಕ್ಷ ವ್ಯಚ್ಚದಲ್ಲಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಒರಿಸ್ಸಾದಲ್ಲಿನ ಎರಡು ಕಾಲೋನಿಗಳನ್ನು ದತ್ತು ಪಡೆದಿದ್ದು ಅಲ್ಲಿ ಪನಿ ಬಿರುಗಾಳಿಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದ್ದ ಕುಷ್ಠ ರೋಗಿಗಳ ವಾಸಸ್ಥಳಗಳು ಶಿಥಿಲವಾಗಿದ್ದು ಜೀವನ ನಡೆಸುವುದು ಕೂಡ ಅವರಿಗೆ ಕಷ್ಠವಾಗಿ ಅಲ್ಲಿನ ಚಳಿಗೆ ನರಕಯಾತನೆ ಅನುಭವಿಸುತ್ತಿರುವವರ ನೇರವಿಗೆ ದಾವಿಸಿ ಬೆಡ್‍ಶೀಟ್, ಕಂಬಳಿ, ಟವಲ್, ಸೀರೆ, ಸ್ಪೇಟರ್, ಲುಂಗಿ ಸೇರಿದಂತೆ ಹಲವು ಉಡುಪುಗಳನ್ನು ನೀಡಲಾಗುತ್ತಿದೆ ಎಂದರು.
ಜನವರಿ 28 ರಂದು ನಡೆಯಲಿರುವ ಹುತಾತ್ಮರ ಧಿನಾಚರಣೆಯ ಪ್ರಯುಕ್ತ ಒರಿಸ್ಸಾದ ಪುರಿಯಲ್ಲಿನ ಕುಷ್ಠ ರೋಗಿಗಳ ಪುನರ್ವಸತಿ ಕೇಂದ್ರದಲ್ಲಿ ನಾಲ್ಕು ದಿನಗಳು ಈಸೇವ ಕಾರ್ಯ ನಡೆಯಲಿದ್ದು, ನಂತರ ಬಿಹಾರ್,ಜಾರ್ಕಾಂಡ್,ಮದ್ಯಪ್ರದೇಶದಲ್ಲಿನ ಕುಷ್ಠರೋಗಿಗಳ ಕೇಂದ್ರದಲ್ಲಿ ಸೇವಾ ಕಾರ್ಯ ನಡೆಯಲಿದೆ ಎಂದು ಜಪಾನಂದಾ ಸ್ವಾಮಿಜಿ ತಿಳಿಸಿದರು.