ಚಿಕ್ಕನಾಯಕನಹಳ್ಳಿ:

       ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 11.11.2018 ರ ರಾತ್ರಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿ ಗ್ರಾಮದ ಗಂಗಾಧರಯ್ಯನನ್ನು ಯಾರೋ ಹತ್ಯೆ ಮಾಡಿ, ಶವವನ್ನು ಕಿಬ್ಬನಹಳ್ಳಿ ಹೋಬಳಿಯ ಅಯ್ಯನಪಾಳ್ಯದ ರಸ್ತೆಯ ಬದಿಯಲ್ಲಿ ತಂದುಹಾಕಿರುವ ಕುರಿತು ಮೃತ ಗಂಗಾಧರಯ್ಯನ ಅಣ್ಣನ ಮಗ ಸಂದೀಪ್ ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರ ಸಂಬಂಧ ಪ್ರಕರಣದ ತನಿಖೆಯನ್ನು ನಡೆಸಿದಾಗ, ಕೊಲೆಗೈದ ದುಷ್ಕರ್ಮಿಗಳನ್ನು ಪತ್ತೆ ಮಾಡಲಾಗಿದ್ದು, ಕೊಲೆಗೈದ ಆರೋಪಿಗಳು ಮೃತ ಗಂಗಾಧರಯ್ಯನವರ ಪತ್ನಿ ಶಾಂತಮ್ಮ, ಗುಬ್ಬಿ ತಾಲ್ಲೂಕು ಅಡಗೂರು ಎ.ಎನ್.ಮಂಜುನಾಥ್, ಅಡಗೂರಿನ ಎ.ಹೆಚ್.ಕೃಷ್ಣಪ್ಪ, ತುರುವೇಕೆರೆ ತಾಲ್ಲೂಕಿನ ರಾಮಡಿಹಳ್ಳಿಯ ವಿ.ಜ್ಞಾನೇಶ್ ಎಂಬುವವರು ಹತ್ಯೆಗೈದು ಕಿಬ್ಬನಹಳ್ಳಿ ಪೊಲೀಸ್ ಠಾಣಾ ಸರಹದ್ದಿಗೆ ತಂದು ಹಾಕಿದ್ದಾರೆಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.

https://www.benkiyabale.com/2018/11/12/%E0%B2%86%E0%B2%B8%E0%B3%8D%E0%B2%A4%E0%B2%BF-%E0%B2%B5%E0%B2%BF%E0%B2%9A%E0%B2%BE%E0%B2%B0-%E0%B2%AE%E0%B3%82%E0%B2%B5%E0%B2%B0%E0%B3%81-%E0%B2%B9%E0%B3%86%E0%B2%82%E0%B2%A1%E0%B2%A4%E0%B2%BF/

      ಹತ್ಯೆಯಾದ ಗಂಗಾಧರಯ್ಯನಿಗೆ ಮೊದಲ ಪತ್ನಿ ಶಾಂತಮ್ಮಳಿದ್ದರೂ ಸಹಾ ವಿಧವೆಯೊಬ್ಬಳೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದು, ಆಕೆಯನ್ನು ತನ್ನ ಮನೆಯಲ್ಲೇ ತಂದಿಟ್ಟುಕೊಂಡಿದ್ದರ ಹಿನ್ನೆಲೆಯಲ್ಲಿ ಮೊದಲ ಪತ್ನಿ ಶಾಂತಮ್ಮ ತನ್ನ ಗಂಡ ಅನ್ಯಳೊಂದಿಗೆ ಅನೈತಿಕ ಸಂಬಂಧ ಹೊಂದಿರುವ ವಿಚಾರದಿಂದ ಬೇಸತ್ತು ತನ್ನ ಗಂಡನನ್ನು ಹತ್ಯೆಮಾಡಲು ಸಂಚು ರೂಪಿಸಿ ತನ್ನ ಸಂಬಂಧಿಗಳೊಂದಿಗೆ ಕೈಜೋಡಿಸಿ ರಾತ್ರಿ 10 ರ ಸಮಯದಲ್ಲಿ ತನ್ನ ಮನೆಯಲ್ಲೇ ಹತ್ಯೆ ಮಾಡಿ, ಯಾರಿಗೂ ಅನುಮಾನ ಬರಬಾರದೆಂದು ಹತ್ಯೆಯಾದ ಶವವನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸಿ ಅಯ್ಯನಪಾಳ್ಯ ರಸ್ತೆಯಲ್ಲಿರುವ ಸೇತುವೆಯ ಬಳಿ ತಂದು ಬಿಸಾಕಿದ್ದು, ಸತ್ತ ವ್ಯಕ್ತಿ ಆಯತಪ್ಪಿ ಸೇತುವೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆಂದು ನಂಬಿಸುವ ಹುನ್ನಾರದಲ್ಲಿದ್ದರು, ಆದರೆ ಪ್ರಕರಣ ಹೊಸ ತಿರುವು ಪಡೆದು, ಅಪಘಾತದ ಬದಲು ಹತ್ಯೆಯ ರೂಪ ಪಡೆದಿತ್ತು. ವಿಷಯ ತಿಳಿದು ಕಿಬ್ಬನಹಳ್ಳಿ ಪಿಎಸ್‍ಐ ರಾಮಪ್ರಸಾದ್, ತಿಪಟೂರು ಗ್ರಾಮಾಂತರ ಸಿಪಿಐ ಜಿ.ಕೃಷ್ಣರಾಜು ಈ ಪ್ರಕರಣವನ್ನ 24 ಗಂಟೆಯೊಳಗಾಗಿ ಬೇದಿಸಿರುತ್ತಾರೆ. 

      ತಂಡದ ನೇತೃತ್ವವನ್ನ ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್ ರವರು ನಿರ್ವಹಿಸಿದ್ದು, ಎಸ್‍ಪಿ ದಿವ್ಯಾ ಗೋಪಿನಾಥ್ ಈ ತನಿಖಾ ತಂಡವನ್ನು ಪ್ರಶಂಸಿರುತ್ತಾರೆ.

(Visited 98 times, 1 visits today)