ಮಧುಗಿರಿ :
ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ ಹಾಗೂ ಯುವತಿ ಆದ್ರ್ರಾ ರನ್ನು ಕೂಡಲೇ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ, ಕನ್ನಡ ಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ಹಾಗೂ ಎನ್ ಆರ್ ಸಿ ವಿರುದ್ದ ನಡೆಯುತ್ತಿದ್ದ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಹಿನ್ನಲೆಯಲ್ಲಿ ನಮ್ಮ ದೇಶದ ಐಕ್ಯತೆಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ. ತಕ್ಷಣ ಇಬ್ಬರನ್ನು ನಮ್ಮ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ, ದೇಶ ದ್ರೋಹಿ ಕೃತ್ಯಗಳಲ್ಲಿ ಭಾಗಿಯಾದವರನ್ನು ಕಠಿಣ ಶಿಕ್ಷೆಗೆ ಶೀಘ್ರವಾಗಿ ಒಳಪಡಿಸಬೇಕೆಂದು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಎಂ.ಆರ್.ಜಗನ್ನಾಥ್, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಚಿ.ಸೂ.ಕೃಷ್ಣಮೂರ್ತಿ, ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ, ವರದಾಯಿನಿ ಸೇವಾಟ್ರಸ್ಟ್ ಅಧ್ಯಕ್ಷೆ ಗಾಯಿತ್ರಿ ನಾರಾಯಣ್, ಸಂಸ್ಕಾರ ಭಾರತಿ ಸಮಿತಿಯ ಸಹನಾ, ಶಾರದಮ್ಮ, ಕಜಾವೇ ಅಧ್ಯಕ್ಷ ರಾಘವೇಂದ್ರ, ಎಬಿವಿಪಿ ಸಂಚಾಲಕ ರಮೇಶ್, ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಮ್ಮ , ಬಜರಂಗದಳ ಅಧ್ಯಕ್ಷ ಶಮಂತ್, ಬಿಜೆಪಿ ಮುಖಂಡರಾದ ಆದಿಶೇಷಗುಪ್ತ, ಎಂ.ಸುರೇಶ್, ವಿಜಯಾ, ಪುಷ್ಪಾ, ಕಲ್ಪನಾ, ವಿಶಾಲಕ್ಷ್ಮಮ್ಮ , ಸುಶೀಲಾ, ಲತಾ, ಬಸವರಾಜು, ನಾಗರಾಜು, ಎಂ.ಎಸ್.ರಘುನಾಥ್, ಯತೀಶ್ ಹಾಗೂ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.