ಕೊರಟಗೆರೆ:
ಪಟ್ಟಣದ ಗೊಂದಿಹಳ್ಳಿ ರಸ್ತೆ ಗಿರಿನಗರದಲ್ಲಿ ಸುಮಾರು 20 ದಿನಗಳಿಂದಲು ಚಿರತೆಯೊಂದು ಕಂಡುಬಂದಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ,
ಹಾಗು ಈ ಭಾಗದ ಪ್ರದೇಶದಲ್ಲಿ ಅಂಗನವಾಡಿ ಕೇಂದ್ರ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಿದ್ದು ಚಿಕ್ಕಮಕ್ಕಳು, ವಿದ್ಯಾರ್ಥಿಗಳು, ಹೆಣ್ಣು ಮಕ್ಕಳು, ವೃದ್ಧರು ಹಾಗು ರೈತರುಗಳು ದಿನನಿತ್ಯ ಸಂಚರಿಸುವ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಇಲ್ಲಿನ ವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ ಅಲ್ಲದೆ ಶಾಲೆಯ ಸುತ್ತಮುತ್ತಲಿನ ಪ್ರದೇಶವು ಕಲ್ಲು ಬಂಡೆ, ಗುಟ್ಟೆ ಮತ್ತು ಪೊದೆಗಳಿಂದ ಕೂಡಿದ್ದುಇಲ್ಲಿನ ಹಲವು ಮನೆಗಳು ನಿರ್ಜನ ಪ್ರದೇಶಗಳಲ್ಲಿ ಇರುವುದರಿಮದ ಚಿರತೆಯಿಂದ ಪ್ರಾಣದ ಅಪಾಯ ಸಂಭವವಿದ್ದು, ಇತ್ತೀಚೆಗೆ ತುಮಕೂರು ತಾಲ್ಲೂಕಿನಲ್ಲಿ 3 ಪುಟ್ಟ ಮಕ್ಕಳು ಚಿರತೆಗೆ ಬಲಿಯಾಗಿರುವುದರಿಂದ ಗುರುವಾರದಂದು ಆ ವಾರ್ಡಿನ ನಿವಾಸಿಗಳು ಹಾಗು ಮಾಜಿ ಪ.ಪಂ ಉಪಾಧ್ಯಕ್ಷರು ಹಾಗು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ಸಂಚಾಲಕರು, ತುಮಕೂರು ಜಿಲ್ಲೆ ಸಾಮಾಜಿಕ ಹೋರಾಟಗಾರರಾದ ನಯಾಜ್ ಅಹಮದ್ ಮತ್ತು ಗಿರಿನಗರ ಗೊಂದಿಹಳ್ಳಿ ರಸ್ತೆ ನಿವಾಸಿಗಳಾದ ನಾಯಕ ನಂಜಪ್ಪ, ಆಷಾಂಸಾಬ್, ವೆಂಕಟರವಣಪ್ಪ, ಭಾಷಾಸಾಬ್, ರಂಗನಾಥ್, ರಮೇಶ್, ರಾಮಚಂದ್ರಪ್ಪ, ದಾದಾಪಿರ್, ಯೂಸಿನ್ಸಾಬ್, ಸೇರಿದಂತೆ ಅನೇಕ ನಿವಾಸಿಗಳು ಚಿರತೆ ಹಿಡಿಯಲು ತಾಲ್ಲೂಕು ದಂಡಾಧಿಕಾರಿಗಳು ಹಾಗು ತಹಶೀಲ್ದಾರ್ ಗೆ ಮತ್ತು ಕೊರಟಗೆರೆ ವಲಯ ಅರಣ್ಯಾಧಿಕಾರಿಗಳಿಗೆ ಪತ್ರದ ಮುಖಾಂತರ ಮನವಿಯನ್ನು ಸಲ್ಲಿಸಿದರು.