ತುಮಕೂರು:

      ಗುಬ್ಬಿ ತಾಲ್ಲೂಕು ಕಸಬಾ ಹೋಬಳಿ ತಿಪ್ಪೂರು ಗ್ರಾಮದಲ್ಲಿ ತೆಂಗು ಹಾಗೂ ಅಡಿಕೆ ಮರಗಳನ್ನು ಕಡಿದು ತಹಶೀಲ್ದಾರರ ಮೌಖಿಕ ಆದೇಶವನ್ನು ಮೀರಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದರಿಂದ ಅಮ್ಮನಘಟ್ಟ ವೃತ್ತದ ಗ್ರಾಮ ಲೆಕ್ಕಿಗ ಮುರುಳಿ ಅವರನ್ನು ಜಿಲ್ಲಾಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರ ಡಾ: ಕೆ. ರಾಕೇಶ್ ಕುಮಾರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದ್ದಾರೆ.

      ತಿಪ್ಪೂರು ಗ್ರಾಮದ ಶ್ರೀ ಉಡುಸಲಮ್ಮ ದೇವರ ಜಾತ್ರಾ ಮಹೋತ್ಸವವು ಮಾರ್ಚ್ 12 ರಿಂದ 14ರವರೆಗೆ ನಡೆಯಲಿರುವುದರಿಂದ ಜಾತ್ರೆಗೆ ಸುಮಾರು 5 ಸಾವಿರ ಜನ ಸೇರುವ ನಿರೀಕ್ಷೆ ಇದ್ದುದರಿಂದ ದೇವಸ್ಥಾನದ ಧಾರ್ಮಿಕ ಸಮಾರಂಭ/ ಉತ್ಸವ/ ರಥೋತ್ಸವ/ ಮುತ್ತಿನ ಪಲ್ಲಕ್ಕಿ ನಡೆಯುತ್ತಿದ್ದು, ವಾಹನಗಳ ನಿಲುಗಡೆಗೆ ಸ್ಥಳಾವಕಾಶಕ್ಕಾಗಿ ಕೇವಲ ಸಣ್ಣ ಗಿಡಗಳನ್ನು ತೆರವುಗೊಳಿಸಿ ಜಾತ್ರೆಗೆ ಅನುವು ಮಾಡಿಕೊಡಲು ತಹಶೀಲ್ದಾರರು ಮೌಖಿಕವಾಗಿ ಮುರುಳಿ ಅವರಿಗೆ ಆದೇಶ ನೀಡಿದ್ದರೂ ಗ್ರಾಮ ಲೆಕ್ಕಿಗ ಮುರುಳಿ ಅವರು ತಿಪ್ಪೂರು ಗ್ರಾಮದ ಸರ್ವೆ ನಂಬರ್ 113ರ 5-18 ಗುಂಟೆ ಜಮೀನಿನಲ್ಲಿರುವ 25 ತೆಂಗು ಹಾಗೂ 75 ಅಡಿಕೆ ಮರಗಳನ್ನು ಕಡಿದು ಆದೇಶವನ್ನು ಮೀರಿರುವುದು ಸ್ಥಳ ಪರಿಶೀಲನೆಯಿಂದ ದೃಢಪಟ್ಟಿದೆ ಎಂದು ತುಮಕೂರು ಉಪವಿಭಾಗಾಧಿಕಾರಿ ವರದಿ ನೀಡಿದ್ದರು. 

(Visited 39 times, 1 visits today)