ಪಾವಗಡ :

      ಕಟಾವಿಗೆ ಬಂದಿರುವ ಬಾಳೆಗೆ ಕೊರೊನ ವೈರಸ್‍ನಿಂದ ಸ್ಥಗಿತವಾದ ಮಾರುಕಟ್ಟೆಯಿಂದ ಕಾಯಿಯ ಬಾರಕ್ಕೆ ಗಿಡಗಳೇ ಮುರಿದು ಬಿದ್ದಿರಿರುವ ಆಮಾನವೀಯ ಘಟನೆ ಬೆಳಕಿಗೆ ಬಂದಿದೆ.

      ತಾಲೂಕಿನ ಕಣಿವೇನ ಹಳ್ಳಿ ಗ್ರಾಮದ ಬಳಿ ರೈತ ಅಂಜನೇಯಲು ಎಂಬುವವರು 6 ಎಕರೆ ಪ್ರದೇಶದಲ್ಲಿ 7500 ಬಾಳೆ ಗಿಡಗಳನ್ನು ಹಾಕಿದ್ದರು, ಕಟಾವಿಗೆ ಬಂದಿರುವ ಬಾಳೆಗೆ ವ್ಯಾಪಾರಸ್ಥರಿಲ್ಲದೆ ಮಾರುಕಟ್ಟೆ ಇಲ್ಲದೆ ಸ್ಥಗಿತವಾದ ಕಾರಣ ಸುಮಾರು 2 ಸಾವಿರಕ್ಕೂ ಹೆಚ್ಚು ಗಿಡಗಳು ಹಣ್ಣಿನ ಬಾರದಿಂದ ಮುರಿದು ಬಿದ್ದಿವೆ.

      ಇದೇ ವೇಳೆ ರೈತ ಮುಖಂಡರಾದ ರಾಮಲಿಂಗರೆಡ್ಡಿ ಮಾತನಾಡಿ ಅಂಜನೇಯಲು ಎಂಬ ರೈತ 6 ಎಕರೆ ಭೂಮಿಯಲ್ಲಿ 7500 ಬಾಳೆ ಗಿಡಗಳನ್ನು ಬೆಳೆದಿದ್ದು, ಕಟಾವಿಗೆ ಬಂದಾ ಕಾಯಿಗೆ ಕೊರೊನ ವೈರಸ್ ಹಿನ್ನೆಲೆ ಮಾರುಕಟ್ಟೆ, ವ್ಯಾಪಾರ ವಹಿವಾಟು ನಿಂತ ಕಾರಣ ಬಾಳೆ ಮಾರಾಟವಾಗದೆ ಕಾಯಿಯ ಬಾರಕ್ಕೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಿಡಗಳು ಮುರಿದು ಬಿದ್ದಿದ್ದು ಇದರಿಂದ ರೈತನಿಗೆ ಸುಮಾರು 15 ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದ್ದು, ಕೈಸಾಲ ಸೇರಿದಂತೆ ಸುಮಾರು 8 ಲಕ್ಷಕ್ಕೂ ಹೆಚ್ಚು ಬಾಳೆ ಬೆಳೆಸಲು ವೆಚ್ಚ ತಗುಲಿದ್ದು, ಸಂಕಷ್ಟಕ್ಕೆ ಸಿಲುಕಿದ ರೈತನ ನೆರವಿಗೆ ಸರ್ಕಾರ ದಾವಿಸಿ ಸೂಕ್ತ ಪರಿಹಾರ ನೀಡಬೇಕೆಂದು ಓತ್ತಾಯಿಸಿದರು.

      ಹೆಲ್ಪ್ ಸೊಸೈಟಿ ಅದ್ಯಕ್ಷರಾದ ಮಾನಂ ಶಶಿಕಿರಣ್ ಮಾತನಾಡಿ ಲಕ್ಷಾಂತರ ರೂಪಾಯಿ ಸಾಮ ಮಾಡಿ ಸಂಮೃದ್ದವಾಗಿ ಬೆಳೆಸಿದ್ದ ಬಾಳೆ ತೋಟ ಮಾರಾಟವಿಲ್ಲದೆ ಕಾಯಿಯ ಬಾರಕ್ಕೆ ಗಿಡಗಳು ಮುರಿದು ಬಿದ್ದಿವೆ, ಕೊರೊನ ವೈರಸ್ ಸಮಸ್ಯೆಯಿಂದ ತಾಲೂಕಿನಲ್ಲಿ ಕಲ್ಲಂಗಡಿ, ದಾಳಿಂಬೆ, ಟಮೋಟ, ತರಕಾರಿ ಬಾಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ರೈತರು ಬೆಳೆದಾ ಬೆಳೆಗಳನ್ನು ಸರ್ಕಾರ ಖರೀದಿ ಮಾಡಿ ರೈತರ ನೇರವಿಗೆ ದಾವಿಸಬೇಕಾದ ಅಗತ್ಯವಿದೆ ಎಂದಾ ಅವರು ರೈತ ಅಂಜನೇಯಲುರವರಿಗೆ ಸೂಕ್ತ ಪರಿಹಾರ ನೀಡುವಂತೆ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

(Visited 38 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp