ಕೊರಟಗೆರೆ:
ಗಡಿಭಾಗದ ತಾಲೂಕು ಗೌರಿಬಿದನೂರು ನಗರದಲ್ಲಿ 10ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೊಂಕು ಹರಡಿರುವ ಹಿನ್ನಲೆ ಕೊರಟಗೆರೆ ತಾಲೂಕಿಗೆ ಸಂಪರ್ಕ ಕಲ್ಪಿಸುವ 10ಕಡೆಯಿಂದಲೂ ನಾಕಾಬಂಧಿ ಹಾಕಲಾಗಿದೆ. ಪೊಲೀಸ್, ಕಂದಾಯ, ಆರೋಗ್ಯ ಮತ್ತು ಗ್ರಾಪಂಯ ಸಿಬ್ಬಂದಿಗಳಿಂದ ಸಾರ್ವಜನಿಕರ ತೀರ್ವ ತಪಾಸಣೆ ನಡೆಯುತ್ತೀದ್ದು ಕೊರಟಗೆರೆ ಕ್ಷೇತ್ರದ 8ದಿಕ್ಕುಗಳ ರಸ್ತೆಗಳನ್ನು ಬಂದೊಬಸ್ತ್ ಮಾಡಲಾಗಿದೆ.
ಗೌರಿಬಿದನೂರಿನಿಂದ ಕೊರಟಗೆರೆಗೆ ಆಗಮಿಸುವ ಕಾಶಾಪುರದ ಬಳಿ, ಅಲ್ಲಿಪುರದಿಂದ- ಅಕ್ಕಾಜಿಹಳ್ಳಿ ಮೂಲಕ ಹೊಳವನಹಳ್ಳಿ, ದೊಡ್ಡಬಳ್ಳಾಪುರದಿಂದ- ಕೋಳಾಲ, ಬೆಂಗಳೂರಿನಿಂದ-ಕಾಲೋನಿ, ಮಧುಗಿರಿ-ತುಮಕೂರು-ಶಿರಾದಿಂದ-ತೋವಿನಕೆರೆ, ಮಧುಗಿರಿಯಿಂದ-ದಾಸರಹಳ್ಳಿ ಬಳಿ ಮತ್ತು ತುಮಕೂರಿನಿಂದ-ಜಂಪೇನಹಳ್ಳಿ ಮೂಲಕ ಕೊರಟಗೆರೆ ಪಟ್ಟಣಕ್ಕೆ ಆಗಮಿಸುವ 8ದಿಕ್ಕುಗಳಿಗೆ ಕಟ್ಟುನಿಟ್ಟಿನ ನಾಕಬಂದಿ ಹಾಕಲಾಗಿದೆ.
ಕೊರಟಗೆರೆಯ ಹೊಳವನಹಳ್ಳಿ, ಕೋಳಾಲ, ಚನ್ನರಾಯನದುರ್ಗ ಮತ್ತು ಕಸಬಾ ಹೋಬಳಿಯ 100ಕ್ಕೂ ಹೆಚ್ಚು ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಹೊರಗಿನವರು ಯಾರು ಬರದಂತೆ ನಿರ್ಭಂದ ಹಾಕಿಕೊಂಡು ರಸ್ತೆಗೆ ಬೇಲಿ ಹಾಕಿದ್ದಾರೆ. ಪ್ರಧಾನ ಮಂತ್ರಿಯ ಲಾಕ್‍ಡೌನ್ ಆದೇಶವನ್ನು ಪಾಲಿಸುತ್ತೇವೆ ಎಂಬ ನಾಮಫಲಕ ಹಾಕಿಕೊಂಡು ನಮ್ಮ ಗ್ರಾಮಕ್ಕೆ ಬರಲು ನಮ್ಮದೇ ಪರವಾನಗಿ ಪಡೆಯಿರಿ ಎಂಬುದಾಗಿ ಸಹ ಜಾಗೃತಿ ಮೂಡಿರುವ ಪ್ರಯತ್ನ ಮಾಡಿದ್ದಾರೆ.
ಕೊರಟಗೆರೆ ಕಂದಾಯ, ಪೊಲೀಸ್, ಆರೋಗ್ಯ, ತಾಪಂ, ಗ್ರಾಪಂ, ಪಪಂ ಅಧಿಕಾರಿವರ್ಗ ಕೊರಟಗೆರೆ ಕ್ಷೇತ್ರದ 8ದಿಕ್ಕಿನಲ್ಲಿಯು ದಿನದ 24ಗಂಟೆಯು ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಲಾಕ್‍ಡೌನ್ ಆದೇಶವನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಪ್ರಚಾರದೊಂದಿಗೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿ ಕೊರೊನಾ ವೈರೆಸ್ ಹರಡುವಿಕೆಗೆ ಕಡಿವಾಣ ಹಾಕಲು ಮುಂದಾಗಿರುವುದು ವಿಶೇಷವಾಗಿದೆ.
18 ಜನ ರಾತ್ರೋರಾತ್ರಿ ಆಗಮನ:
ಕೊರಟಗೆರೆ ಪಟ್ಟಣ ಮತ್ತು ಹೊಳವನಹಳ್ಳಿ ಗ್ರಾಮಕ್ಕೆ ಶನಿವಾರ ರಾತ್ರಿ ಏಕಾಏಕಿ ಗೌರಿಬಿದನೂರು, ಅಲ್ಲಿಪುರ ಮತ್ತು ಚಿಕ್ಕಬಳ್ಳಾಪುರ ಮೂಲಕ 16ಕ್ಕೂ ಹೆಚ್ಚು ಜನರ ಆಗಮಿಸಿರುವ ಮಾಹಿತಿ ಪಡೆದ ತಹಶೀಲ್ದಾರ್ ಮತ್ತು ಸಿಪಿಐ ಸ್ಥಳಕ್ಕೆ ಬೇಟಿ ಆರೋಗ್ಯ ಇಲಾಖೆಯಿಂದ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಅಷ್ಟು ಜನರನ್ನು ವಾಹನಗಳ ಮೂಲಕ ಮತ್ತೇ ಅವರ ಮನೆಗಳಿಗೆ ಕಳುಹಿಸಿರುವ ಘಟನೆ ನಡೆದಿದೆ.
ಪೊಲೀಸರ ಮೇಲೆ ಹಲ್ಲೆಗೆ ಯತ್ನ:
ಗೌರಿಬಿದನೂರು ಮತ್ತು ಅಲ್ಲಿಪುರದಿಂದ ಹೊಳವನಹಳ್ಳಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಗಳ ಪತ್ತೆಗೆ ಹೋದ ಪೊಲೀಸ್ ಪೇದೆ ಮೇಲೆ ಯುವಕರ ತಂಡವೊಂದು ಹಲ್ಲೆಗೆ ಯತ್ನಿಸಿದ್ದಾರೆ. ಲಾಕ್‍ಡೌನ್‍ಗೆ ಗೌರವಿಸದ ಯುವಕರ ತಂಡ ಹಗಲಿನಲ್ಲಿ ರಾಜಾರೋಷವಾಗಿ ತಿರುಗಾಟ ಪ್ರಶ್ನಿಸುವ ಸಿಬ್ಬಂಧಿಗಳ ಮೇಲೆ ಯುವಕರ ಅವಾಶ್ಚ ಶಬ್ದಗಳಿಂದ ನಿಂದಿಸುವುದು ಕಂಡುಬಂದಿದೆ. ಗಡಿಭಾಗದ ಮೂಲಕ ಆಗಮಿಸುವ ಅಪರಿಚಿತರ ಮೇಲೆ ಕಂದಾಯ ಮತ್ತು ಪೊಲೀಸ್ ಇಲಾಖೆ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
ಕೊರೊನಾ ಸೊಂಕು ತಡೆಯಲು ಭಾರತ ಸರಕಾರದ 21ದಿನಗಳ ಲಾಕ್‍ಡೌನ್ ಆದೇಶವನ್ನು ಪ್ರತಿಯೊಬ್ಬ ಪ್ರಜೆಯು ಗೌರವಿಸಬೇಕು. ಕೂಲಿಕಾರ್ಮಿಕ, ನಿರ್ಗತಿಕರು ಮತ್ತು ಬಿಕ್ಷುಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ದಿನಸಿ ಸಾಮಾನು ಮತ್ತು ತರಕಾರಿ ಖರಿದಿಸಲು ಅವಕಾಶ ಕಲ್ಪಿಸಲಾಗಿದೆ. ಅನಗತ್ಯ ತಿರುಗಾಟ ಮತ್ತು ಅಪರಿಚಿತ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ.
– ಗೋವಿಂದರಾಜು. ತಹಶೀಲ್ದಾರ್. ಕೊರಟಗೆರೆ
ಕೊರಟಗೆರೆ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ 8ದಿಕ್ಕಿನಲ್ಲಿಯು ನಾಕಬಂಧಿ ಹಾಕಲಾಗಿದೆ. ಅನಗತ್ಯ ತಿರುಗಾಟ ಮತ್ತು ಅಪರಿಚಿತ ವ್ಯಕ್ತಿಗಳ ಬಗ್ಗೆ ಕ್ರಮಕ್ಕೆ ಈಗಾಗಲೇ ಸೂಚಿಸಲಾಗಿದೆ. ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಯುವಕರು ಮನೆಯಲ್ಲಿ ಇರದಿದ್ದರೇ ನಾವು ಮನೆ ಬಳಿ ಬರುತ್ತೇವೆ. ಆರೋಗ್ಯ ತುರ್ತು ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
– ನಧಾಪ್. ಸಿಪಿಐ. ಕೊರಟಗೆರೆ