ಕೊರಟಗೆರೆ:
ತಾಲ್ಲೂಕಿನ ವಡ್ಡಗೆರೆ ಗ್ರಾ.ಪಂ ವ್ಯಾಪ್ತಿಯ ಚೀಲಗಾನಗಳ್ಳಿ ಗ್ರಾಮದ ಕೆರೆ ಅಂಗಳದಲ್ಲಿ ವಾಸವಾಗಿದ್ದ ಬಿಹಾರದ ವಲಸಿಗರಿಗೆ ಉಚಿತ ಆಹಾರ ಹಾಗೂ ಮಾಸ್ಕ್ ಗಳನ್ನು ಫ್ರೇಂಡ್ಸ್ ಗ್ರೂಪ್‍ನವರು ವಿತರಿಸಿದರು.
ಚೀಲಗಾನಹಳ್ಲಿ ಗ್ರಾಮದ ಅಂಗವಾಡಿ ಕಾರ್ಯಕರ್ತೆ ರಾಜಲಕ್ಷ್ಮೀಯವರಿಂದ ಮಾಹಿತಿ ಪಡೆದ ಎ.ಎಸ್. ಐ ಯೋಗೇಶ್ ರವರ ಸಿಬ್ಬಂದಿ ವರ್ಗ ಆಹಾರವಿಲ್ಲದೆ ಮರುಗುತ್ತಿದ್ದ ಬಿಹಾರದಿಂದ ಸೀಮೆಜಾಲಿ ಮರಗಳನ್ನು ಕಡಿದು ಸುಟ್ಟು ಇಜ್ಜಿಲನ್ನು ಮಾಡುವ ಕೆಲಸಕ್ಕಾಗಿ ಬಂದಿದ್ದ ವಲಸಿಗರ ಕುಟುಂಬಕ್ಕೆ ಫ್ರೇಂಡ್ಸ್ ಗ್ರೂಪ್ ಹಾಗೂ ಜಗ್ಗೇಶ್ ಅಭಿಮಾನಿ ಬಳಗದ ಸಹಯೋಗದೊಂದಿಗೆ ಹಸಿದ ಜೀವಗಳಿಗೆ ಊಟ ನೀಡುವಂತಹ ಕೆಲಸ ಮಾಡಿರುವುದು ಶ್ಲಾಘನೀಯವಾಗಿದೆ.
ಇಡೀ ವಿಶ್ವವೇ ಮಾಹಾಮಾರಿ ಕೊರೊನಾ ವೈರೆಸ್ ಮಾರಕ ರೋಗಕ್ಕೆ ನಲುಗಿ ಹೋಗಿರುವ ಸಂಧರ್ಭದಲ್ಲಿ ಕೊರಟಗೆರೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ದಿನಂಪ್ರತಿ ಉಚಿತ ಅನ್ನ ಪ್ರಸಾದ ವಿತರಿಸುತ್ತಿರುವ ಫ್ರೆಂಡ್ಸ್ ಗ್ರೂಪ್ ಈ ಪರಿಸ್ಥಿತಿ ತಿಳಿದ ತಕ್ಷಣ ಆ ಬಡಕುಟುಂಬಗಳಿಗೆ ಅನ್ನ ನೀಡುವ ಕೆಲಸ ಮಾಡಿದೆ.
ಸುಮಾರು 40-50 ಜನ ಕೆಲಸ ಅರಸಿ ಬಿಹಾರದಿಂದ ಬಂದಿದ್ದ ಕೂಲಿ ಕಾರ್ಮಿಕರು ಊಟವಿಲ್ಲ ಪಾರಾದಡುತ್ತಿದ್ದರು ಕೊಡ ಕೆಲಸ ಮಾಡಿಸಿಕೊಂಡ ವ್ಯಕ್ತಿಯೂ ಇವರ ಸಹಾಯಕ್ಕೆ ಬಾರದೇ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ ಎನ್ನಲಾಗಿದೆ.
ಭಾರತದಲ್ಲಿ ಲಾಕ್ ಡೌನ್ ಇರುವ ಕಾರಣ ತಮ್ಮ ತಮ್ಮ ಊರುಗಳಿಗೆ ಹೋಗಲಾರದೆ ದಿನಗಟ್ಟಲೇ ಹಸಿವಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ತ್ವರಿತವಾಗಿ ತಾಲ್ಲೂಕು ಆಡಳಿತ ಇವರ ನೆರವಿಗೆ ಬಂದು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ಜನಸಾಮಾನ್ಯರಲ್ಲಿ ಕೇಳಿ ಬಂದ ಮಾತು.