ತುಮಕೂರು:

      ಪ್ರಸಕ್ತ ವರ್ಷದ ಪೂರ್ವ ಮುಂಗಾರು ಈಗಾಗಲೇ ಪ್ರಾರಂಭವಾಗಿದ್ದು, 23.91 ಮಿ.ಮೀ ವಾಡಿಕೆ ಮಳೆಯಾಗಬೇಕಾಗಿದ್ದು, 30.68 ಮಿ.ಮೀ ಮಳೆಯಾಗಿರುತ್ತದೆ. ರೈತರು ಭೂಮಿ ಉಳುಮೆ ಕಾರ್ಯದಲ್ಲಿ ನಿರತರಾಗಿದ್ದು, ಬಿತ್ತನೆಗೆ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ.

ಪ್ರಸಕ್ತ ವರ್ಷ 381300 ಹೆ. ಬಿತ್ತನೆ ಕ್ಷೇತ್ರದ ಗುರಿ ಹೊಂದಲಾಗಿದ್ದು, ಇದರಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು-12000 ಹೆ, ಉದ್ದು-900 ಹೆ, ಅಲಸಂದೆ-5600 ಹೆ. ಬಿತ್ತನೆ ಕ್ಷೇತ್ರದ ಗುರಿ ಹೊಂದಲಾಗಿದ್ದು, ಚಿಕ್ಕನಾಯ್ಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣೆಗಲ್, ಗುಬ್ಬಿ, ತುಮಕೂರು ಮತ್ತು ಶಿರಾ ತಾಲ್ಲೂಕಗಳಲ್ಲಿ ಬಿತ್ತನೆಯಾಗುತ್ತದೆ.

      ಸದರಿ ತಾಲ್ಲೂಕಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಪೂರ್ವ ಮುಂಗಾರು ಬೆಳೆಗಳಾದ ಹೆಸರು–358.80 ಕ್ವಿಂ, ಉದ್ದು–2.00 ಕ್ವಿಂ, ಅಲಸಂದೆ–71.40 ಕ್ವಿಂ ಮತ್ತು ಹೈ.ಜೋಳ–5.40 ಕ್ವಿಂ. ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ. ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ದಾಸ್ತಾನು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.

      ಜೋಳ ಪ್ರಮಾಣಿತ ಪೂರ್ಣ ದರ(ಪ್ರತಿ ಕೆ.ಜಿ.ಗೆ) 65 ರೂ., ಸಾಮಾನ್ಯದವರಿಗೆ 30ರಷ್ಟು ಪರಿಶಿಷ್ಟ/ಪಂಗಡದವರಿಗೆ 45 ರೂ., ತೊಗರಿ ಪ್ರಮಾಣಿತ ಪೂರ್ಣ ದರ(ಪ್ರತಿ ಕೆ.ಜಿ.ಗೆ) 75 ರೂ., ಸಾಮಾನ್ಯದವರಿಗೆ 25ರಷ್ಟು ಪರಿಶಿಷ್ಟ/ಪಂಗಡದವರಿಗೆ 37.5 ರೂ., ಉದ್ದು ಪ್ರಮಾಣಿತ ಪೂರ್ಣ ದರ(ಪ್ರತಿ ಕೆ.ಜಿ.ಗೆ) 101 ರೂ., ಸಾಮಾನ್ಯದವರಿಗೆ 25ರಷ್ಟು ಪರಿಶಿಷ್ಟ/ಪಂಗಡದವರಿಗೆ 37.5 ರೂ., ಹೆಸರು ಪ್ರಮಾಣಿತ ಪೂರ್ಣ ದರ(ಪ್ರತಿ ಕೆ.ಜಿ.ಗೆ) 97.5 ರೂ., ಸಾಮಾನ್ಯದವರಿಗೆ 25ರಷ್ಟು ಪರಿಶಿಷ್ಟ/ಪಂಗಡದವರಿಗೆ 37.5 ರೂ., ಅಲಸಂದೆ ಪ್ರಮಾಣಿತ ಪೂರ್ಣ ದರ(ಪ್ರತಿ ಕೆ.ಜಿ.ಗೆ) 85 ರೂ., ಸಾಮಾನ್ಯದವರಿಗೆ 25ರಷ್ಟು ಪರಿಶಿಷ್ಟ/ಪಂಗಡದವರಿಗೆ 37.5 ರೂ., ಸಹಾಯಧನ ನೀಡಲಾಗುವುದು. ಜಿಲ್ಲೆಯ ರೈತ ಭಾಂದವರು ಇದರ ಸದುಪಯೋಗ ಪಡೆಯಬಹುದಾಗಿದೆ.

ವಿಶೇಷ ಸೂಚನೆ:

       ಪ್ರಮಾಣಿತ ಬಿತ್ತನೆ ಬೀಜಗಳನ್ನು ವಿತರಿಸುವಾಗ ಸ್ವಪರಾಗಸ್ಪರ್ಶಿ (ಹೈಬ್ರೀಡ್ ತಳಿಗಳ ಹೊರತುಪಡಿಸಿ) ಬೆಳೆಗಳಲ್ಲಿ ಬೀಜ ಬದಲಿಕೆ ಅನುಪಾತದನ್ವಯ ಒಮ್ಮೆ ಬಿತ್ತನೆ ಬೀಜಗಳನ್ನು ವಿತರಿಸಿದ ರೈತರಿಗೆ ಮುಂದಿನ ಮೂರು ವರ್ಷಗಳ ಬಳಿಕ ಅದೇ ಬೆಳೆ / ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು. ಆದುದರಿಂದ ರೈತಬಾಂಧವರು ಪ್ರಸಕ್ತ ಸಾಲಿನಲ್ಲಿ ಬೆಳೆಯುವ ಬೆಳೆಯಲ್ಲಿ ಬಿತ್ತನೆ ಬೀಜಕೋಸ್ಕರ ತಮ್ಮಲ್ಲೆ ಬೀಜಗಳನ್ನು ದಾಸ್ತಾನುಮಾಡಿಕೊಳ್ಳಲು ಕೋರಿದೆ.

      ಹೆಚ್ಚಿನ ವಿವರಗಳಿಗೆ / ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆ ಜಂಟಿ ನಿದೇರ್ಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

(Visited 13 times, 1 visits today)