ತುಮಕೂರು :
ಬಡವರ ಬಾಗಿಲು ಎನ್ನುವ ವಿನೂತನ ಕಾರ್ಯವನ್ನು ತುಮಕೂರು ಗ್ರಾಮಾಂತರ ಪಿಎಸೈ ಲಕ್ಷ್ಮಯ್ಯರವರು ಕಾರ್ಯರೂಪಕ್ಕೆ ತಂದಿದ್ದು ಹೆಗ್ಗೆರೆ ಬಸ್ ನಿಲ್ದಾಣದ ಬಳಿ ಇಂದು ಬೆಳಿಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ವಂಶಿಕೃಷ್ಣರವರು ಲೋಕಾರ್ಪಣೆ ಮಾಡಿದರು.
ಜನರಿಂದ ಜನರಿಗಾಗಿ ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಹಣ್ಣು ತರಕಾರಿ ಹ್ಯಾಂಡ್ ಸ್ಯಾನಿಟೈಸರ್ ಹೀಗೆ ಹಲವಾರು ವಸ್ತುಗಳನ್ನು ಇಲ್ಲಿ ಇರಿಸಲಾಗುತ್ತದೆ. ದಾನ ಮಾಡಲಿಚ್ಚಿಸುವವರು ಬಡವರ ಬಾಗಿಲು ಸ್ಥಳಕ್ಕೆ ತಂದು ಇಟ್ಟರೆ ಅಗತ್ಯವಿರುವ ಕಡು ಬಡವರು ಬಂದು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಅನ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ಕಾರ್ಯಕ್ರಮ ನಮ್ಮ ತುಮಕೂರು ಜಿಲ್ಲೆಯಲ್ಲಿ ಅದೂ ತುಮಕೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯರೂಪಕ್ಕೆ ಬಂದಿರುವುದು ವಿಶೇಷವಾಗಿದೆ.
ಪಿಎಸೈ ಲಕ್ಷ್ಮಯ್ಯ ರವರ ವಿಶೇಷ ಆಲೋಚನೆಯನ್ನು ಪೋಲಿಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣರವರು ಅನುಮತಿ ನೀಡಿ ಅದು ಕಾರ್ಯರೂಪಕ್ಕೆ ತರಲು ಪ್ರೇರೇಪಿಸಿದ್ದಾರೆ ಸ್ವತಃ ಅವರೇ ಬಂದು ಲೋಕಾರ್ಪಣೆ ಮಾಡಿ ಇದೀಗ ಅಭಿನಂದಿಸಿದ್ದಾರೆ.
ಸ್ಥಳೀಯರ ನೆರವಿನೊಂದಿಗೆ ಮತ್ತು ಗ್ರಾಮಾಂತರ ಪಿಎಸೈ ತಮ್ಮ ಸ್ವಂತ ಹಣವನ್ನು ಜೊಡಿಸಿ ಬಡವರ ಬಾಗಿಲು ವಿಶೇಷ ಕಾರ್ಯಮ ಚಾಲನೆಗೆ ಪಾತ್ರರಾಗಿದ್ದಾರೆ.