ಕೊರಟಗೆರೆ:
ಸಂಜೀವಿನಿ ತಾಣ ಮತ್ತು ಸಾಧುಸಂತರ ತಪೋಭೂಮಿ ಎಂದೇ ಪ್ರಸಿದ್ದಿ ಪಡೆದಿರುವ ಸಿದ್ದರಬೇಟ್ಟದ ಶ್ರೀಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಕಾರ್ತಿಕ ಮಾಸದ ಲಕ್ಷದಿಪೋತ್ಸವ ಕಾರ್ಯಕ್ರಮವನ್ನು ಡಿ.3ರ ಸೋಮವಾರ ಏರ್ಪಡಿಸಲಾಗಿದೆ ಎಂದು ಸಿದ್ದರಬೇಟ್ಟ ಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೇಟ್ಟ ಕ್ಷೇತ್ರದ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಲಕ್ಷದಿಪೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ದಿವ್ಯಾ ಸಾನಿಧ್ಯ ವಹಿಸಿ ಮಾತನಾಡಿದರು.
ಸಿದ್ದರಬೇಟ್ಟ ಪುಣ್ಯಕ್ಷೇತ್ರದಲ್ಲಿ ನಡೆಯುವ ಲಕ್ಷದಿಪೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಸಾವಿರಾರು ಭಕ್ತಾಧಿಗಳು ಬರುವ ನೀರಿಕ್ಷೆ ಇದೆ. ಪ್ರವಾಸಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಿಲಾಗಿದೆ. ಕಾರ್ಯಕ್ರಮ ಯಶಸ್ವಿಗಾಗಿ ಸ್ಥಳೀಯ ಮುಖಂಡರು ಮತ್ತು ಭಕ್ತಾಧಿಗಳ ಸಹಕಾರ ಅಗತ್ಯವಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದರು.
ತಹಶೀಲ್ದಾರ್ ನಾಗರಾಜು ಮಾತನಾಡಿ ಮುಜರಾಯಿ ಇಲಾಖೆ ಮತ್ತು ಭಕ್ತರ ಸಹಕಾರದಿಂದ ಪ್ರತಿವರ್ಷದಂತೆ ಲಕ್ಷದಿಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಯಶಸ್ವಿಗಾಗಿ ತಾಲೂಕು ಆಡಳಿತ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಸ್ಥಳೀಯ ಗ್ರಾಪಂ, ಅರಣ್ಯ ಇಲಾಖೆ, ಬೆಸ್ಕಾಂ ಮತ್ತು ಶ್ರೀಮಠದ ಸಹಕಾರ ಅಗತ್ಯವಾಗಿದೆ. ಅಧಿಕಾರಿ ವರ್ಗ ತಮಗೆ ಸೂಚಿಸಿರುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹ:-
ಸಂಜೀವಿನಿ ತಾಣ ಸಿದ್ದರಬೇಟ್ಟ ಕ್ಷೇತ್ರದಲ್ಲಿ ಕತ್ತಲು ಕವಿದಿದೆ. ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಚತೆ ಮಾಯವಾಗಿದೆ. ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಮಂಡೆ ತೆಗೆಯುವ ಭಕ್ತರಿಗೆ ನೀರಿನ ವ್ಯವಸ್ಥೆ ಮರೀಚಿಕೆ ಆಗಿದೆ. ಕೆರೆ ಕಟ್ಟೆಯ ನೀರಿನಲ್ಲಿ ಸ್ನಾನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ಹೊರರಾಜ್ಯದಿಂದ ಪ್ರವಾಸಕ್ಕಾಗಿ ಬರುವ ಸಾವಿರಾರು ಭಕ್ತರ ಪಾಡು ಕೇಳುವವರು ಇಲ್ಲದಾಗಿದೆ ಎಂದು ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪುಣ್ಯಭೂಮಿ ಈಗ ಮರುಭೂಮಿ:- ಮುಜರಾಯಿ ಇಲಾಖೆ ಖಜಾನೆಯಲ್ಲಿ ಸಿದ್ದರಬೇಟ್ಟದ 2ಕೋಟಿ ಹಣ ಭದ್ರವಾಗಿದೆ. ಕ್ಷೇತ್ರದ ಅಭಿವೃದ್ದಿಗಾಗಿ ಸರಕಾರದಿಂದ ಬಿಡುಗಡೆ ಆದ 2ಕೋಟಿ ಹಣ ಅಧಿಕಾರಿಗಳ ನಿರ್ಲಕ್ಷದಿಂದ ಸರಕಾರದ ಖಜಾನೆಗೆ ಹಿಂದಕ್ಕೆ ಹೋಗಿದೆ. ಚುನಾವಣೆ ವೇಳೆ ಕಾರ್ಯಕ್ರಮ ಆಯೋಜನೆಗೆ ಮಾತ್ರ ಕ್ಷೇತ್ರವನ್ನು ರಾಜಕೀಯ ವರ್ಗ ಬಳಸಿಕೊಂಡು ಈಗ ಮರೆತಿರುವುದು ದುರದುಷ್ಟಕರ. ಬೇಟ್ಟ ಹತ್ತುವ ಭಕ್ತಾರ ಗೋಳು ಕೇಳೊರೇ ಇಲ್ಲದಾಗಿದೆ. ಮಾನ್ಯ ಜಿಲ್ಲಾಧಿಕಾರಿ ಕ್ಷೇತ್ರಕ್ಕೆ ಒಮ್ಮೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯ ಭಕ್ತರು ಒತ್ತಾಯ ಮಾಡಿದರು.
ಪೂರ್ವಭಾವಿ ಸಭೆಯಲ್ಲಿ ಇಓ ಶಿವಪ್ರಕಾಶ್, ಪಿಡಿಓ ನವ್ಯಾ, ಕಂದಾಯ ಇಲಾಖೆಯ ಕೃಷ್ಣಪ್ಪ, ರಮೇಶ್, ಪಾರುಪತ್ತೇದಾರ್ ವೀರಮಲ್ಲಯ್ಯ, ಅರ್ಚಕ ಲೊಕೇಶ್‍ರಾಧ್ಯ, ಮಹೇಶ್, ಮುಖಂಡರಾದ ನಂಜುಂಡಸ್ವಾಮಿ, ರತ್ನಾಕರ, ಹುಲಿರಾಮಯ್ಯ, ಗಿರೀಶ್, ಪ್ರದೀಪ್, ಹನುಮೇಶ್, ನಾಗರಾಜು, ಹನುಮಂತರಾಜು, ಸುರೇಶ್, ಶಿವಲಿಂಗಯ್ಯ, ರಘುನಂದನ್, ಶಿವಾನಂದ, ರಮೇಶ್ ಸೇರಿದಂತೆ ಇತರರು ಇದ್ದರು.
ಸಿದ್ದರಬೇಟ್ಟ ಕ್ಷೇತ್ರದಲ್ಲಿ ಕಳೆದ 6ವರ್ಷದಿಂದ ಶೌಚಾಲಯ, ಕುಡಿಯುವ ನೀರಿನ ತೊಟ್ಟಿ ಮತ್ತು ಚಿಂದಿ ಕಸವನ್ನು ಆಯ್ದು ಸ್ವಚ್ಚತೆಯ ಕೆಲಸ ಮಾಡುತ್ತೀದ್ದೆನೆ. ಭಕ್ತಾಧಿಗಳು ನೀಡುವ ಐದು, ಹತ್ತು ರೂ ಹಣದಿಂದಲೇ ಜೀವನ ಸಾಗಿಸಬೇಕು. ಮುಜರಾಯಿ ಇಲಾಖೆಯಿಂದ ಕೂಲಿ ಕೊಡುವುದಾಗಿ ಆಶ್ವಾಸನೆ ಮಾತ್ರ ನೀಡುತ್ತಾರೆ. ನನಗೆ ಇಲ್ಲಿಯವರೇಗೆ ಒಂದು ಪೈಸೆಯೂ ನೀಡಿಲ್ಲ.
-ದೇವರಾಜಮ್ಮ. ಸ್ವಚ್ಚತೆ ಮಾಡುವ ಮಹಿಳೆ. ಸಿದ್ದರಬೇಟ್ಟ.
ಮುಜರಾಯಿ ಇಲಾಖೆಯ ಖರ್ಚು ವೆಚ್ಚದ ಲೆಕ್ಕಾ ಪರಿಶೋಧನೆಯಲ್ಲಿ 60ಲಕ್ಷದ ಲೋಪದೋಷ ಆಗಿದೆ. ಕಳೆದ ಎರಡು ವರ್ಷದಿಂದ ದೇವಾಲಯಕ್ಕೆ ಸುಣ್ಣಬಣ್ಣ ಬಳೆದಿರುವ ಹಣವನ್ನು ನೀಡಿಲ್ಲ. ಖರ್ಚು ವೆಚ್ಚ ಮತ್ತು ಚರಾಸ್ಥಿ, ಸ್ಥಿರಾಸ್ಥಿಯ ಮಾಹಿತಿ ಕೇಳಿದರೇ ಅಧಿಕಾರಿ ವರ್ಗ ಉಡಾಫೆ ಉತ್ತರ ನೀಡುತ್ತಾರೆ. ಪುಣ್ಯಕ್ಷೇತ್ರದ ಗೋಳು ಕೇಳೋರೇ ಇಲ್ಲವೇ.
ಸಿದ್ದಗಿರಿನಂಜುಂಡಸ್ವಾಮಿ. ಅಧ್ಯಕ್ಷ. ಪ್ರಕೃತಿ ಮತ್ತು ಸಂಸ್ಕøತಿ ಸಂರಕ್ಷಣಾ ವೇದಿಕೆ. ಸಿದ್ದರಬೇಟ್ಟ.
ಸಿದ್ದರಬೇಟ್ಟ ಕ್ಷೇತ್ರದಲ್ಲಿ ಮೂಲ ಸೌಕರ್ಯದ ಬಗ್ಗೆ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಕ್ಷೇತ್ರಕ್ಕೆ ತ್ವರಿತವಾಗಿ ಬೇಕಾದ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಗಾಗಿ ನಮ್ಮ ಮೇಲಾಧಿಕಾರಿ ಗಮನಕ್ಕೆ ತಂದು ಸರಿಪಡಿಸುತ್ತೇವೆ. ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಅನುಧಾನಕ್ಕೆ ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ.
ನಾಗರಾಜು. ತಹಶೀಲ್ದಾರ್. ಕೊರಟಗೆರೆ