ತುಮಕೂರು :
ರೈತನಿಂದ ಬೆಳೆ ಸಾಲ ಮಂಜೂರು ಮಾಡಲು ಲಂಚದ ಹಣ ಪಡೆಯುವಾಗ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮದಲ್ಲಿ ನಡೆದಿದೆ.
ಬೇಡತ್ತೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಿ.ಡಿ.ಅವಲಮೂರ್ತಿ 3 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಿಡಿಗೇಶಿ ಹೋಬಳಿಯ ಎಮ್ಮೆತಿಮ್ಮನಹಳ್ಳಿ ಗ್ರಾಮದ ದೊಡ್ಡರಂಗೇಗೌಡರು ತಮ್ಮ ತಾಯಿಯ ಹೆಸರಿನಲ್ಲಿದ್ದ ಜಮೀನಿನ ಮೇಲೆ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು, 50 ಸಾವಿರ ಹಣ ಮಂಜೂರು ಮಾಡಿಕೊಡಬೇಕಿದ್ದ ಸಹಕಾರ ಸಂಘದ ಕಾರ್ಯದರ್ಶಿ ಹಣಕ್ಕಾಗಿ ಬಡ ರೈತನಿಗೆ ಬೇಡಿಕೆಯಿಟ್ಟಿದ್ದು, ಹಣ ಕೊಡಲಾಗದ ಸ್ಥಿತಿಯಲ್ಲಿದ್ದ ಆತ ಕೋವಿಡ್-19 ಸಂದರ್ಭದಲ್ಲಿ ತನ್ನ ಕೆಲಸಕ್ಕಾಗಿ ಲಂಚಕ್ಕಾಗಿ ಬೇಡಿಕೆಯಿಟ್ಟಿರುವ ಬಿ.ಡಿ.ಅವಮೂರ್ತಿಯ ವಿರುದ್ಧ ತುಮಕೂರು ಭ್ರಷ್ಟಾಚಾರ ನಿಗ್ರಹ ದಳ ಕಛೇರಿಯಲ್ಲಿ ಎಸಿಬಿ ಡಿವೈಎಸ್ಪಿ ಬಿ.ಉಮಾಶಂಕರ್ ರವರಿಗೆ ದೂರು ನೀಡಿದ್ದು ಲಂಚಕ್ಕೆ ಬೇಡಿಕೆಯಿಟ್ಟಿರುವುದನ್ನು ಖಚಿತಪಡಿಸಿಕೊಂಡು ಡಿವೈಎಸ್ಪಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದಿ.24.4.2010 ರಂದು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಟ್ರಾಪ್ ಮಾಡಿರುತ್ತಾರೆ.
ಟ್ರಾಪ್ ನ ಸಂದರ್ಭದಲ್ಲಿ ಮಹತ್ತರವಾದ ವಿಚಾರ ಬೆಳಕಿಗೆ ಬಂದಿದ್ದು, 3 ಸಾವಿರ ಲಂಚ ಪಡೆದ ಕಾರ್ಯದರ್ಶಿ ಬಿ.ಡಿ.ಅಚಲಮೂರ್ತಿ ಮತ್ತೆ ಹೆಚ್ಚುವರಿ 2 ಸಾವಿರ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಇದೇ ದಿನ ಎಸಿಬಿ ಡಿವೈಎಸ್ಪಿ ಉಮಾಶಂಕರ್ ರವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್‍ಗಳಾದ ಇಮ್ರಾನ್ ಬೇಗ್, ಪ್ರವೀಣ್ ಕುಮಾರ್, ಸಿಬ್ಬಂಧಿಗಳಾದ ಚಂದ್ರಶೇಖರ್, ಶಿವಣ್ಣ, ನರಸಿಂಹರಾಜು ಇತರರು ಆರೋಪಿಯನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುತ್ತಾರೆ.
ಇಡೀ ದೇಶವೇ ಕೊರೊನಾ ಭೀತಿಯಲ್ಲಿ ಲಾಕ್ ಡೌನ್ ಸಮಸ್ಯೆ ಎದುರಿಸುತ್ತಿರುವಾಗ ಈ ದೇಶದ ಬೆನ್ನೆಲುಬಾದ ರೈತನಿಗೆ ಇಂತಹ ಸಂದರ್ಭದಲ್ಲೂ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಅದರ ನಡುವೆಯೂ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿರುವುದು ವಿಶೇಷವಾಗಿರುತ್ತದೆ.