ತುಮಕೂರು :
ಕ್ಯಾತ್ಸಂದ್ರ ಪೋಲಿಸ್ ಠಾಣಾ ವ್ಯಾಪ್ತಿಯ ಕ್ಯಾತ್ಸಂದ್ರ ಸರ್ಕಾರಿ ಉರ್ದು ಪಾಠ ಶಾಲೆಯ ಆವರಣದಲ್ಲಿ ಬಡವರ ಬಾಗಿಲು ಕಾರ್ಯಕ್ರಮ ಕ್ಕೆ ಇಂದು ಆರಂಭ.
ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮೊದಲಿಗೆ ಆರಂಭವಾದ ಬಡವರ ಬಾಗಿಲು ಎನ್ನುವ ವಿನೂತನ ಕಾರ್ಯಕ್ರಮ ನಗರ ಉಪಾಧೀಕ್ಷಕರ ವ್ಯಾಪ್ತಿಯ ಕ್ಯಾತ್ಸಂದ್ರ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆರಂಭವಾಗಿದೆ ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣರವರು ಬುಧವಾರ ಮಧ್ಯಾಹ್ನ 12.30ಕ್ಕೆ ಚಾಲನೆ ಮಾಡಿದರು.
ಕ್ಯಾತ್ಸಂದ್ರ ಠಾಣೆಯ ಪಿಎಸೈ ರಾಮ ಪ್ರಸಾದ್ ಸ್ಥಳಿಯರ ಸಹಕಾರ ಮತ್ತು ಪಿಎಸೈ ರವರು ಸ್ವತ ಹಣ ಹಾಕಿ ಬಡವರು ಮತ್ತು ನಿರ್ಗತಿಕರ ಸಹಾಯಕ್ಕಾಗಿ ಬಡವರ ಬಾಗಿಲು ಎನ್ನುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ.
ಉಳ್ಳವರು ಸಹಾಯ ಮಾಡಲು ಇಚ್ಚಿಸುವವರು ಯಾವುದೇ ರೀತಿಯ. ಅಗತ್ಯ ದಿನಸಿ ಪದಾರ್ಥಗಳು,ಹಣ್ಣು, ತರಕಾರಿಗಳು ಹಾಗೂ ಇತರೆ ವಸ್ತುಗಳನ್ನು ತಂದಿಡಬಹುದು ಬೇಕಾದವರು ಅಲ್ಲಿಂದ ಸ್ವತಃ ತೆಗೆದುಕೊಂಡು ಹೋಗಬಹುದು ಪ್ರಚಾರದ ಗೀಳಿಗೆ ಬೀಳದೇ ಸಹಾಯ ಹಸ್ತ ಚಾಚುವ ಅದೆಷ್ಟೋ ಕೈಗಳು ಮೊದಲ ದಿನವೆ ನಿಗದಿತ ಸ್ಥಳಕ್ಕೆ ತಂದಿಟ್ಟಿದ್ದರು ಈ ವಿಚಾರ ತಿಳಿದ ನೂರಾರು ಬಡವರು ಬಂದು ಎಸ್ಪಿ ರವರ ಸಮ್ಮುಖದಲ್ಲಿ ತೆಗೆದುಕೊಂಡು ಹೊದದ್ದು ವಿಶೇಷವಾಗಿತ್ತು.
ಪೋಲಿಸ್ ಇಲಾಖೆಯನ್ನು ಕಂಡರೆ ಮುಖ ತಿರುಗಿಸಿ ಹೊಗುತ್ತಿದ್ದ ಜನತೆ ಇಲಾಖೆಯ ವಿಶೇಷ ಕಾರ್ಯಕ್ರಮ ಕಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ
ಕ್ಯಾತ್ಸಂದ್ರ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮ ಪ್ರಸಾದ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ ಡಾ.ಕೆ ವಂಶಿಕೃಷ್ಣರವರು ಇಂತಹ ಇನ್ನು ಹಲವು ಬಡವರ ಬಾಗಿಲು ಮಳಿಗೆಗಳು ಇಲಾಖೆಯಿಂದ ತೆರೆಯಬೇಕು. ಅಗತ್ಯವಿರುವ ಬಡವರು ಮತ್ತು ನಿರ್ಗತಿಕರಿಗೆ ನೆರವಾಗಬೇಕು ಎಂದರು
ಕ್ಯಾತ್ಸಂದ್ರ ಪೋಲಿಸರ ಈ ಉತ್ತಮ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.