ಪಾವಗಡ :
ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ದಿನಸಿ ವಸ್ತುಗಳ ಮಾರಾಟ ಮಾಡಲು ಮುಂದಾಗಿದ್ದ ಅಂಗಡಿ ಮಾಲಿಕನಿಗೆ ಸ್ಥಳೀಯರಿಂದ ಅಂಗಡಿ ಬಾಗಿಲು ಹಾಕಿ ತಹಶಿಲ್ದಾರ್ ಗೆ ದೂರ ಸಲ್ಲಿಸಿದ ಘಟನೆ ತಾಲೂಕಿನಲ್ಲಿ ಸಂಭವಿಸಿದೆ.
ಈ ಘಟನೆ ಪಾವಗಡ ತಾಲೂಕಿನ ಕಡಮಲಕುಂಟೆ ಗ್ರಾಮ ದಲ್ಲಿ ನಡೆದಿದೆ ಲಾಕ್ ಡೌನ್ ಆದ ಪರಿಣಾಮ ದಿಂದ ಎಲ್ಲಾ ಚಿಲ್ಲರೆ ಅಂಗಡಿ ಮಾಲೀಕರು ಅಗತ್ಯ ವಸ್ತುಗಳ MRP ದರಕ್ಕಿಂತ ಹೆಚ್ಚುವರಿ ಹಣ ಅಂದರೆ ಅದರ ದುಪ್ಪಟ್ಟು ಬೆಲೆ ಪಡೆದು ಸಾರ್ವಜನಿಕರ ಹಣವನ್ನು ಹಗಲು ದರೋಡೆಯಂತೆ ಲೂಟಿ ಮಾಡುತ್ತಿದ್ದಾರೆ.
ಕೆಲಸವಿಲ್ಲದೆ,ಆದಾಯವಿಲ್ಲದೆ, ಜನರು ಅಪಾರ ಕಷ್ಟದಲ್ಲಿ ಸಿಲುಕಿರುವ ಇಂತಹ ಸಂದರ್ಭದಲ್ಲಿ ಧರದ ಬಿಸಿಯು ಮುಟ್ಟಿ ಕಂಗಾಲಾಗಿದ್ದಾರೆ ಇದರಿಂದ ಜೀವನ ಹೇಗೆ ಮಾಡುವುದು ಎಂದು ಪರಿತಪಿಸುತ್ತಿದ್ದಾರೆ ಎಂದು ಕಡಮಲಕುಂಟೆ ಗೆಳೆಯರ ಬಳಗ ಅಂಗಡಿ ಮಾಲಿಕರನ್ನು ಪ್ರಶ್ನಿಸಿದಾಗ ಅವರು ಉಡಾಫೆಯ ಮಾತುಗಳನ್ನು ಹೇಳುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಲಕೃಷ್ಣ.ವೈ, ರಘುನಾಥ ಕೆ.ಎ, ಶ್ರೀನಿವಾಸ್ ಕುಮಾರ್ ಜೆ.ಆರ್, ಜೈಪಾಲ್, ಗಂಗಾಧರ್, ರಾಜು, ಪ್ರಭಾಸ್, ಅನಿಲ್ ಯಾದವ್, ಪೆದ್ದರಾಯುಡು, ಗುರುರಾಜು, ರಮೇಶ್ ಮೊದಲಾದವರು ಹಾಜರಿದ್ದರು.
(Visited 219 times, 1 visits today)