ತುಮಕೂರು :
ತಿಲಕ್ ಪಾರ್ಕ್ ಪೋಲಿಸ್ ಠಾಣೆಯ ಹಿಂಬಾಗದಲ್ಲಿರುವ ಕೆ ಹೆಚ್ ಬಿ ಕಾಲೋನಿಯ ನಿವಾಸಿ ವೃದ್ದ ಕೊರೋನಾ ಸೋಂಕಿಗೆ ಬಲಿಯಾಗಿರುವ ಘಟನೆ ನಡೆದಿದೆ.
ವೃದ್ದ(74) ಮೃತಪಟ್ಟ ಗಂಟೆಯ ನಂತರ ವರದಿ ಬಂದಿದ್ದು ವೃದ್ದನ ಮನೆಯ ಸುತ್ತ ಮುತ್ತ ಕಂಟೋನ್ಮೆಂಟ್ ಏರಿಯಾ ಎಂದು ಜಿಲ್ಲಾಧಿಕಾರಿಗಳಾದ ರಾಕೇಶ್ ಕುಮಾರ್ ಅವರು ಘೋಷಣೆ ಮಾಡಿದ್ದಾರೆ.
ಸೋಂಕಿತನ ವಿವರ :
ತುಮಕೂರು ನಗರದ ಕೆ.ಹೆಚ್. ಬಿ ಕಾಲೋನಿಯ ನಿವಾಸಿಯೂಬ್ಬನಿಗೆ ನೆಗಡಿ, ಜ್ವರ, ಕೆಮ್ಮು, ಕಾಣಿಸಿಕೊಂಡಿದೆ, ಅಗ ಕೂಡಲೇ ಆರೋಗ್ಯ ಇಲಾಖೆಯ ಅಧಿಕಾರಿಗಳು ಕಳೆದ 24 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಜೊತೆಗೆ ಅತನ ಹೆಂಡತಿ, ಮಕ್ಕಳನ್ನು ದಾಖಲಿಸಿಕೊಂಡಿದ್ದರು.
ಹೆಚ್ಚಿದ ಆತಂಕ:
ತುಮಕೂರಿನ ಪಿ.ಹೆಚ್. ಕಾಲೋನಿಯಲ್ಲಿ ಇತ್ತಿಚೆಗಷ್ಟೇ ಗುಜರಾತ್ ಮೂಲದ ವ್ಯಕ್ತಿಗೆ ಕೊರೋನಾ ಸೋಂಕು ಪಾಸಿಟೀವ್ ಎಂದು ಬಂದಿತ್ತು. ಅದರ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ ಇದರಿಂದ ತುಮಕೂರು ನಗರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಆಸ್ಪತ್ರೆಗೆ ದಾಖಲಾದ ೨೪ ಗಂಟೆಯಲ್ಲಿ ಮೃತಪಟ್ಟ ವೃದ್ದ:
ತಿಲಕ್ ಪಾರ್ಕ್ ಪೋಲಿಸ್ ಠಾಣೆಯ ಹಿಂಗಾದಲ್ಲಿ ವೃದ್ದನ ಮನೆ ಇದೆ. ಈತನನ್ನು ಆಸ್ಪತ್ರೆಗೆ ದಾಖಲಿಸಿದ 24 ಗಂಟೆಯಲ್ಲಿ ವೃದ್ದ ಮೃತಪಟ್ಟಿದ್ದು ಈತನ ರಕ್ತ, ಗಂಟ್ಟಲು ದ್ರವ, ಮೂಗಿನ ದ್ರಾವಣವನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು.
ಈತನ ಶವವನ್ನು ತುಮಕೂರು ತಾಲ್ಲೂಕಿನ ನಾಗವಲ್ಲಿಗೆ ತೆಗೆದುಕೊಂಡು ಹೋಗಿ ರಾತ್ರೋರಾತ್ರಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈಗ ಅತನ ಪತ್ನಿ, ಮಕ್ಕಳು ಆಸ್ಪತ್ರೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ.
ವಾರ್ಡ್ ನಂ 8 ಕೆ ಹೆಚ್ ಬಿ ಕಾಲೋನಿಯ ವೃದ್ದ ಮೃತಪಟ್ಟ ದ್ದು ಅನತ ವರದಿ ತಡವಾಗಿ ಜಿಲ್ಲಾಧಿಕಾರಿಗಳ ಕೈ ಸೇರಿದೆ. ಮೃತಪಟ್ಟ ವೃದ್ದನಿಗೆ ಕೊರೋನಾ ಸೋಂಕು ಇರುವುದರ ಬಗ್ಗೆ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೂತೆ ತುರ್ತು ಸಭೆ ನೆಡೆಸಿದ್ದಾರೆ.
ಇಲ್ಲಿನ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳಿಗೆ ಏರಿಯಾದ ಸುತ್ತಮುತ್ತಲಿನ ಸ್ಥಿತಿಯ ವರದಿ ನೀಡುವಂತೆ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಚಂದ್ರಕಲಾ ಅವರು ಹಲವು ತುರ್ತು ಕ್ರಮಗಳನ್ನು ಕೈಗೊಂಡಿದ್ದಾರೆ.
ಕಂಟೋನ್ಮೆಂಟ್ ಏರಿಯಾ ಎಂದು ಜಿಲ್ಲಾಧಿಕಾರಿಗಳು ಘೋಷಣೆ :
ಮೃತಪಟ್ಟ ವೃದ್ದನ ಮನೆಯ 100 ಮೀಟರ್ ಸುತ್ತಮುತ್ತಲಿನ ಸ್ಥಳವನ್ನು ಕಂಟೋನ್ಮೆಂಟ್ ಏರಿಯಾ ಎಂದು ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ್ದಾರೆ. ಕಿಲೋಮೀಟರ್ ಸುತ್ತಮುತ್ತಲಿನ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆ.
ರಾತ್ರಿಯಿಂದಲೇ ವೃದ್ದನ ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಪಾಸಿಟಿವ್ ವರದಿ ಬಂದ ಕೂಡಲೇ ಕೆ ಹೆಚ್ ಬಿ ಕಾಲೋನಿಯ ಸುತ್ತಮುತ್ತಲಿನ ಸ್ಥಳವನ್ನು ಸೀಲ್ ಡೌನ್ ಮಾಡಲಾಗಿದೆ.
ವೃದ್ಧನ ಮನೆಯ ಸುತ್ತ ಮುತ್ತಲಿನ 100 ಮೀಟರ್ ಕಂಟೋನ್ಮೆಂಟ್ ಏರಿಯಾ ಎಂದು ಘೋಷಣೆ ಮಾಡಿದ್ದಾರೆ.
ಜನರಲ್ಲಿ ಹೆಚ್ಚಿದ ಆತಂಕ:
ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಶಿರಾದ ವೃದ್ದನೊಬ್ಬನಿಗೆ ಕಾಣಿಸಿ ಕೊಂಡು ಆತ ಮೃತಪಟ್ಟಿದ್ದ. ನಂತರ ಅತನ ಮಗನಿಗೆ ಸೋಂಕು ತಗುಲಿದ್ದು ಚಿಕಿತ್ಸೆ ಫಲಕಾರಿಯಾಗಿ ವರದಿ ನೆಗೆಟೀವ್ ಬಂದಿತ್ತು. ಇದು ಶಿರಾ ತಾಲೂಕಿನ ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಿಟ್ಟುಸಿರು ಬಿಡುವಂತಾಗಿತ್ತು.
ಆದರೆ, ಇದ್ದಕ್ಕಿದ್ದಂತೆ ಬರ ಸಿಡಿಲಿನಂತೆ ತುಮಕೂರು ನಗರದ ಪೂರ್ ಹೌಸ್ ಕಾಲೋನಿಯ ನಿಮ್ರಾ ಮಸೀದಿಯಲ್ಲಿ ಗುಜರಾತ್ ಮೂಲದ ಅಹಮದಾಬಾದ್ ಮೂಲದ ಇವರನ್ನು ಮಸೀದಿಯಲ್ಲಿ ಕ್ವಾರಂಟೈನ್ ನಲ್ಲಿ 14 ಜನರನ್ನು ಇಡಲಾಗಿತ್ತು, ಅದರಲ್ಲಿ ಒಬ್ಬನಿಗೆ ಕೊರೋನಾ ಸೋಂಕು ಇರುವುದರ ಬಗ್ಗೆ ಪಾಸಿಟೀವ್ ವರದಿ ಬಂದಿತ್ತು ಕೊಡಲೇ ಆ ಏರಿಯಾವನ್ನು ಜಿಲ್ಲಾಧಿಕಾರಿಗಳು ಸೀಲ್ ಡೌನ್ ಘೋಷಣೆ ಮಾಡಿದರು.
ಅದರ ಬೆನ್ನಲ್ಲೇ ಈಗ ತುಮಕೂರಿನ ನಿವಾಸಿ ಅಗಿದ್ದ ಮೃತಪಟ್ಟ ವೃದ್ದನಿಗೆ ಪಾಸಿಟೀವ್ ಇರುವುದು ಪತ್ತೆಯಾಗಿದ್ದು ಜಿಲ್ಲಾಡಳಿತಕ್ಕೆ ಸೋಂಕನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹರ ಸಾಹಸ ಪಡುವಂತಾಗಿದೆ.