ತುಮಕೂರು :
ತುಮಕೂರು ಜಿಲ್ಲೆ ದಾಸೋಹಕ್ಕೆ ಹೆಸರಾದ ಊರು. ಕೋವಿಡ್-19ನಂತಹ ಸಂಕಷ್ಟ ಕಾಲದಲ್ಲಿಯೂ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ ಮತ್ತು ಗೆಳೆಯರು, ನಿರ್ಗತಿಕರು, ಬಡವರು, ಕೋರೋನ ವಾರಿಯರ್ಸ್ಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕುಣಿಗಲ್ ರಸ್ತೆಯ ಬೀರೇಶ್ವರ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್ ಹಾಗೂ ಆರ್.ಆರ್.ಅಭಿಮಾನಿ ಬಳಗದಿಂದ ನಡೆಸುತ್ತಿರುವ ಉಚಿತ ದಾಸೋಹ ಸಿದ್ದಪಡಿಸುವ ಜಾಗಕ್ಕೆ ಭೇಟಿ ನೀಡಿ,ಖುದ್ದು ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಕೋರೋನ ದಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ.ನಗರ ಪ್ರದೇಶದಲ್ಲಿರುವ ಬಡವರು, ಕೂಲಿ ಕಾರ್ಮಿಕರು,ವಲಸೆ ಕಾರ್ಮಿಕರು,ಕೋವಿಡ್-19 ತಡೆಯಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್, ಹೋಂ ಗಾರ್ಡ್,ಹೆಲ್ತ್,ಕೆ.ಎಸ್.ಆರ್.ಟಿ.ಸಿ.,ಆಶಾ ಹೀಗೆ ಹಲವು ಇಲಾಖೆಗಳ ನೌಕರರಿಗೆ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟ ನೀಡಿ, ತುಮಕೂರಿನ ದಾಸೋಹ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದರು.
ಬಡವರಿಗೆ ನೀಡುವ ಅನ್ನದ ಬಗ್ಗೆ ತಾತ್ಸರ ತೋರದೆ, ಅನ್ನ ಸಿದ್ದಗೊಂಡ ತಕ್ಷಣ, ಆರೋಗ್ಯಾಧಿಕಾರಿಗಳಿಂದ ಪರೀಕ್ಷೆಗೆ ಒಳಪಡಿಸಿ, ಅವರು ಒಪ್ಪಿದ ನಂತರ ಜನರಿಗೆ ವಿತರಿಸಲಾಗುತ್ತಿದೆ.ರುಚಿ ಮತ್ತು ಶುಚಿಯಾದ ಆಹಾರ ಎಲ್ಲರಿಗೂ ತಲುಪಿಸುತ್ತಿರುವುದು,ನಿಜಕ್ಕೂ ಒಳ್ಳೆಯ ಕೆಲಸ. ಇವರಿಗೆ ಮತ್ತಷ್ಟು ಜನರ ಹಸಿವು ನೀಗಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ, ಕೇಂದ್ರ ಸರಕಾರ ಲಾಕ್ಡೌನ್ ಘೋಷಣೆಯಾದ ದಿನದಿಂದಲೂ ದಿನವೊಂದಕ್ಕೆ ಕನಿಷ್ಠ 1500 ಜನರಿಗೆ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದುವರೆಗೂ ಸುಮಾರು 75 ಸಾವಿರ ಜನರಿಗೆ ನಮ್ಮ ಸ್ವಯಂ ಸೇವಕರು ಊಟವನ್ನು ಹಂಚಿದ್ದಾರೆ.ಮೇ.03ರವರೆ ದಾಸೋಹ ಇರುತ್ತದೆ. ಒಂದು ವೇಳೆ ಸರಕಾರ ಲಾಕ್ಡೌನ್ ಮುಂದುವರೆಸಿದರೆ,ಮತ್ತಷ್ಟು ದಿನಗಳು ಮುಂದುವರೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಈ ವೇಳೆ ಜಿಲ್ಲಾ ಹೋಂ ಕಮಾಂಡೆಂಟ್ ಪಾತಣ್ಣ, ಆರ್.ಆರ್. ಅಭಿಮಾನಿ ಬಳಗದ ಯಶಸ್ಸ್, ದರ್ಶನ್, ರಾಘವೇಂದ್ರ ಸ್ವಾಮಿ,ಪುರುಷೋತ್ತಮ್, ರಾಜೇಶ್ ದೊಡ್ಡಮನೆ, ಟಿ.ಬಿ.ಮಲ್ಲೇಶ್, ಸುಶೀಲ್, ಗಣೇಶ್, ಶಿವಣ್ಣ,ಲೋಕೇಶ್,ಹೋಬಳಿ ಶ್ರೀನಿವಾಸ್, ಪುಡ್ ಸೇಪ್ಟಿ ಅಫೀಸರ್ ನಾರಾಯಣ