ತುಮಕೂರು:

     ನಗರದ ಕೆಎಚ್​ಬಿ ಕಾಲೋನಿಯಲ್ಲಿ ವಾಸವಾಗಿದ್ದ ಪತಿ, ಪತ್ನಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

      ತುಮಕೂರು ಜಿಲ್ಲೆಯಲ್ಲಿ ಮೃತ ಪಿ-535 ಹಾಗೂ ಪಿ-553ರ ಸಂಪರ್ಕದಲ್ಲಿದ್ದ ಇಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ತಿಳಿಸಿದ್ದಾರೆ.

       ಮೃತ ಪಿ-535 ಹಾಗೂ ಪಿ-553ರ ಪಕ್ಕದ ಮನೆಯವರಾದ ಗಂಡ-ಹೆಂಡತಿ ಇಬ್ಬರಿಗೂ ಸೋಂಕು ತಗುಲಿದ್ದು, ಅವರನ್ನು ಐಸೋಲೇಶನ್ ಮಾಡಲಾಗಿದೆ. ಇವರನ್ನು ಪಿ-591 ಹಾಗೂ ಪಿ-592 ಎಂದು ಗುರುತಿಸಲಾಗಿದೆ.

         ಜಿಲ್ಲೆಯು ಆರೇಂಜ್ ವಯಲದಲ್ಲಿರುವುದರಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಆದ್ದರಿಂದ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗಡೆ ಹೋಗಬಾರದು. ಸಾರ್ವಜನಿಕರು ಸರ್ಕಾರದ ನಿರ್ದೇಶನಗಳನ್ನು ಪಾಲಿಸಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

 

(Visited 14 times, 1 visits today)