ತುಮಕೂರು :
ರಾಜ್ಯವ್ಯಾಪ್ತಿ ಕೊರೊನ ವೈರಸ್ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ರೈತರು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ನಿರ್ಬಂಧನೆ ಇರುವುದಿಲ್ಲ.
ಕೋವಿಡ್-19 ಹರಡದಂತೆ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮುನ್ನೆಚರಿಕೆ ಕ್ರಮಗಳ ಅನುಸರಿಸಿ ರೈತರು ತಮ್ಮ ಜಮೀನಿನಲ್ಲಿ ಕಾಮಗಾರಿಗಳನ್ನು ಮಾಡಿಕೊಳ್ಳಲು ಕೋರಿದೆ.
2020-21 ನೇ ಸಾಲಿನ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸ್ತ್ರೀ ಪ್ರಧಾನ ಕುಟುಂಬಗಳು, ಬಡತನ ರೇಖೆ ಕೆಳಮಟ್ಟದಲ್ಲಿ ಇರುವ ಇತರೆ ಕುಟುಂಬಗಳು, ವಿಕಲಚೇತನ ಪ್ರಧಾನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು, ಇಂದಿರಾ ಆವಾಜ್ ಯೋಜನೆ ಫಲಾನುಭವಿಗಳು, ಕೆಲಸ ನಿರ್ವಹಿಸುವ ಅಕುಶಲ ಕೂಲಿ ಕಾರ್ಮಿಕರ ವೇತನದ ದರ ಒಂದು ದಿನಕ್ಕೆ ಮೊತ್ತ 275 ರೂ. ನಿಗಧಿಪಡಿಸಲಾಗಿದೆ.
ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಯಡಿ ಸಹಾಯಧನ:-
ತೆಂಗು ಬೆಳೆಗೆ ರೂ. 62496/ಹೆ, ಗೇರು ಬೆಳೆಗೆ ರೂ. 72048/ಹೆ., ಮಾವು ಬೆಳೆಗೆ ರೂ. 44381/ಹೆ, ದಾಳಿಂಬೆ ಬೆಳೆಗೆ ರೂ. 59879/ಹೆ, ಸೀಬೆ ಬೆಳೆಗೆ ರೂ. 94704/ಹೆ, ಕಾಳುಮೆಣಸು(ತೆಂಗಿನ ತೋಟದಲ್ಲಿ ಅಂತರ ಬೆಳೆಗೆ) ಬೆಳೆಗೆ ರೂ. 20339/ಹೆ, ಹುಣಸೆ ಬೆಳೆಗೆ ರೂ. 90800/ಹೆ, ನೇರಳೆ ಬೆಳೆಗೆ ರೂ. 50413/ಹೆ, ಸೀತಾಫಲ ಬೆಳೆಗೆ ರೂ. 53330/ಹೆ, ನುಗ್ಗೆ ಬೆಳೆಗೆ ರೂ. 116996/ಹೆ, ಬಾಳೆ(ಅಂಗಾಂಶ) ಬೆಳೆಗೆ ರೂ. 211656/ಹೆ, ಪಪ್ಪಾಯ ಬೆಳೆಗೆ ರೂ. 119360/ಹೆ ನೀಡಲಾಗುವುದು.
ಹಳೆ ತೋಟಗಳ ನಿರ್ವಹಣೆಗೆ ಸಹಾಯಧನ:-
ಮಾವು ಹಾಗೂ ತೆಂಗು ತೋಟಗಳಲ್ಲಿ ಹಳೆಯ ಮತ್ತು ಅನುತ್ಪಾದಕ ಗಿಡಗಳು, ತೋಟಗಳ ನಿರ್ವಹಣೆ ನಿರ್ಲಕ್ಷತೆಯಿಂದ, ಕೀಟ ರೋಗಗಳ ಬಾಧೆ, ತೇವಾಂಶ ಮತ್ತು ಪೋಷಕಾಂಶಗಳ ಕೊರತೆ ಹಾಗೂ ಹವಮಾನ ವೈಪರಿತ್ಯ ಕಾರಣಗಳಿಂದಾಗಿ ಇಳುವರಿಯು ಕುಂಠಿತವಾಗುತ್ತಿದೆ. ಸದರಿ ತೋಟಗಳಲ್ಲಿ ಪುನಃ ಹೊಸದಾಗಿ ಸಸಿಗಳನ್ನು ನೇಡುವುದು, ಕಡಿಮೆ ಇಳುವರಿ/ಅನುತ್ಪಾದಕ ಮರಗಳಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಕೈಗೊಳ್ಳುವುದು. ವಯಸ್ಸಾದ/ಭಾದಿತವಾಗಿರುವ ತೆಂಗಿನ ಮರಗಳನ್ನು ಬುಡ ಸಮೇತ ತೆಗೆದು ಹೊಸ ಗಿಡಗಳನ್ನು ನಾಟಿ ಮಾಡಿ ಪುನಶ್ಚೇತನಗೊಳಿಸಲು ಪ್ರತಿ ಹೆಕ್ಟೇರಿಗೆ ಒಟ್ಟು ರೂ.23704-00, ವಯಸ್ಸಾದ/ಭಾದಿತವಾಗಿರುವ ತೆಂಗಿನ ಮರಗಳನ್ನು ಬುಡ ಸಮೇತ ತೆಗೆದು ಹೊಸ ಗಿಡಗಳನ್ನು ನಾಟಿ ಮಾಡಿ ಮಣ್ಣು ನೀರು ಸಂರಕ್ಷಣಾ ಕಾಮಗಾರಿಯೊಂದಿಗೆ ಪುನಶ್ಚೇತನಗೊಳಿಸಲು ಪ್ರತಿ ಹೆಕ್ಟೇರಿಗೆ ಒಟ್ಟು ರೂ.38939-00, ವಯಸ್ಸಾದ/ಭಾದಿತವಾಗಿರುವ ತೆಂಗಿನ ಮರಗಳನ್ನು ತೆಗೆಯದೆ ಅದರ ಪಕ್ಕದಲ್ಲಿ ಹೊಸ ಗಿಡ ನಾಟಿ ಮಾಡಿ ಮಣ್ಣು, ನೀರು ಸಂರಕ್ಷಣಾ ಕಾಮಗಾರಿಯೊಂದಿಗೆ ಪುನಶ್ಚೇತನಗೊಳಿಸಲು ಪ್ರತಿ ಹೆಕ್ಟೇರಿಗೆ ರೂ.38940-00 ಹಾಗೂ ಯಾವುದೇ ತೆಂಗಿನ ಮರಗಳನ್ನು ತೆಗೆಯದೆ ಹೊಸ ಗಿಡಗಳನ್ನು ನಾಟಿ ಮಾಡದೆ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಪುನಶ್ಚೇತನಗೊಳಿಸುವುದು. ಪ್ರತಿ ಹೆಕ್ಟೇರಿಗೆ ಒಟ್ಟು ರೂ.25550-00 ಮಾವು/ಸಪೋಟ ಪುನಶ್ಚೇತನದಲ್ಲಿ ಪ್ರತಿ ಹೆಕ್ಟೇರಿಗೆ ರೂ.46985-00 ಅನುದಾನ ನೀಡಲು ಅವಕಾಶವಿರುವುದರಿಂದ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪುನಶ್ಚೇತನ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಆಸಕ್ತ ರೈತ ಫಲಾನುಭವಿಗಳ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ತುಮಕೂರು ದೂ.0816-2279705; ಗುಬ್ಬಿ-08131-222659; ಶಿರಾ ದೂ. 08135-276310; ಕುಣಿಗಲ್ ದೂ. 08132-221981; ತಿಪಟೂರು ದೂ. 08134-251424; ಚಿಕ್ಕನಾಯಕನಹಳ್ಳಿ ದೂ. 08133-267457; ಮಧುಗಿರಿ ದೂ. 08137-282417; ತುರುವೇಕೆರೆ ದೂ. 08139-288350; ಕೊರಟಗೆರೆ ದೂ. 08138-232920; ಪಾವಗಡ ದೂ. 08136-244064 ನ್ನು ಆಯಾ ತಾಲ್ಲೂಕಿನ ತಾಲ್ಲೂಕು ಅನುಷ್ಟಾನಾಧಿಕಾರಿಗಳನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ರೈತರು ಭರಿಸುವ ಘಟಕವಾರು ವೆಚ್ಚಕ್ಕೆ ಅನುಗುಣವಾಗಿ ಅನುದಾನವನ್ನು ಪಾವತಿಸಲಾಗುವುದೆಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರಘು.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದೆ.