ಮಧುಗಿರಿ:

      ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿರುವ “ಗುರುಭವನ’ದ ಆವರಣ ಅನೈರ್ಮಲ್ಯದ ಜೊತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿದ್ದನ್ನು ಮನಗಂಡು ಈ ಆವರಣದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಅರಿತ ತಹಸೀಲ್ದಾರ್ ಡಾ. ಜಿ. ವಿಶ್ವನಾಥ್ ರವರು ಸ್ವಚ್ಛತಾ ಕಾರ್ಯ ಹಾಗೂ ಶ್ರಮದಾನಕ್ಕೆ ಸ್ವತಃ ಮುಂದಾಗಿ ಸಮಾಜಕ್ಕೆ ಮಾದರಿಯಾದರು.

      ಈ ಆವರಣದ ತುಂಬಾ ಬಿಯರ್ ಬಾಟಲುಗಳು, ಮದ್ಯದ ಪ್ಯಾಕೆಟ್ ಗಳು, ಬೀಡಿ- ಸಿಗರೇಟಿನ ತುಂಡುಗಳು, ಅನೈತಿಕ ಚಟುವಟಿಕೆ ಬಳಸುವ ವಸ್ತುಗಳು ತುಂಬಿ ತುಳುಕಾಡುತ್ತಿದ್ದವು. ಗುರುಭವನದ ಹಿಂಭಾಗದ ಖಾಲಿ ಸ್ಥಳದಲ್ಲಿ ಕಸ ಕಡ್ಡಿಗಳು ತುಂಬಿಕೊಂಡಿದ್ದ ಲ್ಲದೆ, ಟ್ರಾನ್ಸ್ ಫಾರ್ಮರ್ ಗೆ ಬಳ್ಳಿಗಳು ಎತ್ತರಕ್ಕೆ ಬೆಳೆದು ವಿಷ ಜಂತುಗಳ ವಾಸ ಸ್ಥಳವಾಗಿ ಮಾರ್ಪಟ್ಟಿತ್ತು. ಜೊತೆಗೆ ಬಯಲು ಶೌಚಾಲಯವಾಗಿ ಪರಿವರ್ತನೆಗೊಂಡಿತ್ತು. ಈ ಬಗ್ಗೆ ಲಾಕ್ ಡೌನ್ ಸಂದರ್ಭದಲ್ಲಿ ಅನಿರೀಕ್ಷಿತ ಭೇಟಿ ನೀಡಿದ್ದ ತಹಶಿಲ್ದಾರರು ಗುರುಭವನದ ಆವರಣ ಅಪವಿತ್ರವಾಗಿರುವುದನ್ನು ಪವಿತ್ರಗೊಳಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಿದರು.

      ತಹಸೀಲ್ದಾರ್ ಜೊತೆಗೆ ಪುರಸಭೆಯವರು ,ರಕ್ತದಾನಿ ಶಿಕ್ಷಕರ ಸ್ನೇಹ ಬಳಗ ,ಗುಡ್ ನೈಬರ ಇಂಡಿಯಾ ಸಂಸ್ಥೆ, ಸ್ಕೌಟ್ಸ್ ಮತ್ತು ಗ್ಯೆಡ್ಸ್ ಸಂಸ್ಥೆ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು , ಪ್ರೌಢಶಾಲಾ ಶಿಕ್ಷಕರ ಸಂಘದವರು ,ಶಿಕ್ಷಕ ಸ್ನೇಹ ಬಳಗದವರು ಶ್ರಮದಾನದಲ್ಲಿ ಭಾಗಿಯಾದರು. ಪ್ರತಿನಿತ್ಯ ಸಂಜೆ ಶಿಕ್ಷಕರ ಗುಂಪೊಂದು ಈ ಆವರಣದಲ್ಲಿ ಕಾಫಿ ಟೀ ಕುಡಿಯುವ ನೆಪದಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಪರಿಪಾಠವನ್ನು ಸಾರ್ವಜನಿಕರು ನೋಡಿ ನೋಡಿ ಸಾಕಾಗಿ “ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬುವಂತೆ’ ಶಿಕ್ಷಕರೇ ಗುರುಭವನದಲ್ಲಿ ಅನೈರ್ಮಲ್ಯ ಗೊಳಿಸಬೇಕಾದರೆ ನಮ್ಮದೇನು ಕಡಿಮೆ ಎಂಬ ಮನೋಭಾವದಿಂದ ಸಾರ್ವಜನಿಕರಲ್ಲಿ ಮೂಡಿರುವ ಪರಿಣಾಮವೇ ಈ ಎಲ್ಲ ಅನೈರ್ಮಲ್ಯಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ಟಾಕ್ ಅಗಿತ್ತು. ಈ ಶ್ರಮದಾನ ಕಾರ್ಯದಲ್ಲಿ ಶಿಕ್ಷಕರ ಸ್ನೇಹ ಬಳಗದ ಶಶಿಕುಮಾರ್,ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಕಾರ್ಯದರ್ಶಿ ನಟರಾಜು ಇದ್ದರು.

(Visited 37 times, 1 visits today)