ತುಮಕೂರು:
ಮುಂಬೈನಿಂದ ವಾಪಾಸ್ಸಾಗಿರುವ 58 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ನಗರದ ಖಾದರ್ ನಗರದ ನಿವಾಸಿಯಾದ 58 ವರ್ಷದ ವ್ಯಕ್ತಿ ಲಾರಿ ಚಾಲಕನಾಗಿದ್ದು, ಮುಂಬೈನಿಂದ ವಾಪಾಸ್ಸಾಗಿ ಮನೆಯಲ್ಲಿದ್ದ ಇವರನ್ನ ಪತ್ತೆಹಚ್ಚಿ ಕ್ವಾರೆಂಟೈನ್ ಮಾಡಲಾಗಿತ್ತು. ಗುರುವಾರ ಆತನ ಪರೀಕ್ಷಾ ವರದಿ ಬಂದಿದ್ದು ಪಾಸಿಟೀವ್ ಇರುವುದು ದೃಡಪಟ್ಟಿದೆ.
ಸೋಂಕಿತ ವ್ಯಕ್ತಿ ಪಿ 1561 ಎಂದು ಗುರುತಿಸಲಾಗಿದ್ದು, ವ್ಯಕ್ತಿ ವಾಸವಿರುವ ಖಾದರ್ ನಗರವನ್ನ ಕಂಟೆನ್‍ಮೆಂಟ್ ಝೋನ್ ಗಿ ಪರಿವರ್ತಿಸಲಾಗಿದೆ. ಸೋಂಕಿತನ ಜೊತೆ ಹೆಂಡತಿ ಮಕ್ಕಳು ಮನೆಯಲ್ಲಿಯೇ ಇದ್ದು ಆವರನ್ನು ಕೂಡ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 16 ಸೋಂಕಿತರು ಪತ್ತೆಯಾಗಿದ್ದು 5 ಜನರು ಗುಣ ಮುಖರಾಗಿದ್ದಾರೆ ಇಬ್ಬರು ಮೃತಪಟ್ಟಿದ್ದಾರೆ. 9 ಜನರು ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೆಡೆ ಇಡೀ ವಿಶ್ವದಲ್ಲಿಯೇ ಪ್ರತಿದಿನ ಲಕ್ಷಾಂತರ ಜನರು ಕೊರೊನಾಕ್ಕೆ ಬಲಿಯಾಗುತ್ತಿದ್ದಾರೆ. ಇನ್ನೂ ದೇಶದಾದ್ಯಂತ ಕೂಡ ಇದೇ ಪರಿಸ್ಥಿತಿ ಎದುರಾಗಿದ್ದು, ಪ್ರತಿದಿನ ಸೋಂಕಿತರ ಸಖ್ಯೆ ಏರಿಕೆಯಾಗುತ್ತಲಿದೆ. ರಾಜ್ಯದಲ್ಲಿ ನಿನ್ನೆಗೆ ಒಂದೇ ದಿನ 116 ಸೋಂಕಿತರು ಕಂಡುಬಂದಿರುವುದು ಜನರಲ್ಲಿ ಆತಂಕಕ್ಕೀಡು ಮಾಡಿದೆ.
ಹೊರ ಜಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುತ್ತಿರುವವರ ಮೇಲೆ ಜಿಲ್ಲಾಡಳಿತ ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದು, ಜಿಲ್ಲೆಯ ಜನರು ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ಹೊರ ಜಿಲ್ಲೆಯಿಂದ ಬಂದವರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.