ತುಮಕೂರು:
ತುಮಕೂರು ತಾಲ್ಲೂಕಿನ (ಸಬ್ ರಿಜಿಸ್ಟ್ರಾರ್) ಉಪನೋಂದಣಾಧಿಕಾರಿಗಳ ಕಛೇರಿಯ ನಿರ್ವಹಣೆಯಲ್ಲಿರುವ ಲೋಪದಿಂದ ಸರ್ಕಾರಕ್ಕೆ ನಷ್ಟವಾಗುತ್ತಿದ್ದು, ಸರ್ಕಾರದ ಗಮನಹರಿಸಬೇಕೆಂದು ಮನವಿ ಮಾಡಿದ್ದಾರೆ.
ತುಮಕೂರು ತಾಲ್ಲೂಕಿನಲ್ಲಿನ (ಸಬ್‍ರಿಜಿಸ್ಟ್ರಾರ್) ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ 3 ಜನ ಸಬ್‍ರಿಜಿಸ್ಟ್ರಾರ್‍ಗಳು ಇರುವುದು ಸರಿಯಷ್ಟೆ. ಆದರೆ ಈ 3 ಸಬ್‍ರಿಜಿಸ್ಟ್ರಾರ್‍ಗಳಲ್ಲಿ ಒಬ್ಬರು ಶ್ರೀರಾಘವೇಂದ್ರ ಎಂಬುವುವರು ಮಾರ್ಚ್ ತಿಂಗಳಿನಿಂದ ಕರ್ತವ್ಯಕ್ಕೆ ಹಾಜರಾಗಿಲ್ಲ. ಪ್ರತಿಯೊಬ್ಬ ಅಧಿಕಾರಿಗಳಿಗೆ ಡಿಜಿಟಲ್ ಸಿಗ್ನೇಚರ್ ಸಾಧನವನ್ನು ನೀಡಿದ್ದು. ಮೇ20ರವರಿಗೂ ಇದನ್ನು ನವೀಕರಿಸಿಕೊಂಡಲ್ಲ ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ತುಮಕೂರು ತಾಲ್ಲೂಕಿನಲ್ಲಿ ಸುಮಾರು 3000-4000ರಷ್ಟು ಜನ ಋಣಭಾರ ದೃಡೀಕರಣ ಪತ್ರಕ್ಕೆ ಮನವಿಸಲ್ಲಿಸಿದ್ದು. ಸಾಫ್ಟ್‍ವೇರ್ ಸರಿಯಿಲ್ಲ, ಡಿಜಿಟಲ್ ಕೀ ಇಲ್ಲ ಎಂದು ಹೇಳುತ್ತಾ ಸುಮಾರು 4 ತಿಂಗಳ ಹಿಂದಿನಿಂದಲೂ ಇ.ಸಿ. ಕೊಡುತ್ತಿಲ್ಲ.
ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಕಳೆದ ಒಂದು ವಾರದಿಂದ ಪ್ರಾರಂಭ ಮಾಡಿರುತ್ತಾರೆ. ಡಿಜಿಟಲ್ ಕೀ ಇಲ್ಲ ಎಂದು ಇ.ಸಿ. ಕೊಡುತ್ತಿಲ್ಲ. ಸರ್ಕಾರ ರೈತರಿಗೆ ಕಿಸಾನ್ ಕಾರ್ಡು, ಬೆಳೆಸಾಲ, ಬೆಳೆ ನಷ್ಟ ಪರಿಹಾರ ಇಂತಹ ಕೊಡುಗೆ ನೀಡಿದ್ದು. ಇದಕ್ಕೆ ಅವಶ್ಯವಾಗಿ ಬೇಕಾಗುವ ಇ.ಸಿ. ಯನ್ನು ನೀಡದೆ ಇರುವುದರಿಂದ ತುಮಕೂರು ತಾಲ್ಲೂಕಿನಲ್ಲಿ ಜನತೆ ಮಧ್ಯವರ್ತಿಗಳ ಮೊರೆ ಹೋಗುವಂತಹ ಪರಿಸ್ಥಿತಿ ಉದ್ಭವವಾಗಿದೆ. ಇಲ್ಲಿನ ಕಂಪ್ಯೂಟರ್ ವ್ಯವಹಾರ ಹೊರಗುತ್ತಿಗೆ ಮೇಲೆ ನೀಡಿದ್ದು. ಇದುವರೆವಿಗೂ ನವೀಕರಣಗೊಂಡಿಲ್ಲ. ಅನಧಿಕೃತವಾಗಿ ವ್ಯವಹಾರ ನಡೆಯುತ್ತಿದೆ.
ತುಮಕೂರು ನಗರವು ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆಗೊಂಡಿದ್ದು. ಕಂಪ್ಯೂಟರ್ ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ. ಸರ್ಕಾರದ ಕಂದಾಯ ಇಲಾಖಾ ಆದೇಶದ ರೀತ್ಯಾ 2004-05 ರಿಂದ ಮುಂದಿನ ವರ್ಷಗಳ ಇ.ಸಿ.ಯನ್ನು ಅನ್‍ಲೈನ್‍ನಲ್ಲಿ ಕೊಡಬಹುದಾಗಿದ್ದು. ಈಗಲೂ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಬೆಂಗಳೂರಿನಂತೆ ಇಲ್ಲಿಯೂ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಅನ್‍ಲೈನ್ ರಿಜಿಸ್ಟ್ರೇಷನ್ ಹಾಗೂ ಇತರೆ ಸೌಲಭ್ಯಕ್ಕೆ ಅಳವಡಿಸಬೇಕಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ನೋಂದಣಾಧಿಕಾರಿಗಳು ರಾಜ್ಯ ಅದಾಯಕ್ಕೆ ಕೊರತೆ ಮಾಡುತ್ತಿರುವುದರ ಬಗ್ಗೆ ಗಮನಹರಿಸಿಲ್ಲ. ತುಮಕೂರು ತಾಲ್ಲೂಕಿನ ರೈತರ/ನಾಗರೀಕರ ಅರ್ಥಿಕ ವ್ಯವಹಾರಕ್ಕೆ ಧಕ್ಕೆಯುಂಟಾಗಿ ಅತ್ಮಹತ್ಯೆ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಉದ್ಭವಿಸಲಿದೆ ಎಂದರು.
ಅದುದರಿಂದ ರಾಜ್ಯದ ರಾಜಸ್ವ ಕೊರತೆಯುಂಟುಮಾಡಿದ ತುಮಕೂರು ಉಪನೊಂದಣಾಧಿಕಾರಿಗಳ ಕರ್ತವ್ಯ ನಿರ್ಲಕ್ಷತೆ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಲು ಹಾಗೂ ಈ ಕಛೇರಿಯ ಎಲ್ಲಾ ವ್ಯವಹಾರಗಳನ್ನು ಅನ್‍ಲೈನ್ ಮಾಡಬೇಕೆಂದು ಮನವಿ ಮಾಡಿದ್ದಾರೆ.