ಚಿಕ್ಕನಾಯಕನಹಳ್ಳಿ:

    ಈವರೆಗೆ ತಾಲ್ಲೂಕಿನಲ್ಲಿ 12 ಮಂದಿಯನ್ನು ಮಾತ್ರ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಶ್ರೀನಿವಾಸಾಚಾರ್ಯ ತಿಳಿಸಿದರು.

      ಈಚೆಗೆ ತಾಲ್ಲೂಕಿನ ಹುಳಿಯಾರಿನಲ್ಲಿ ಕಾಣಿಸಿಕೊಂಡ ಹೊರಗಡೆಯಿಂದ ಬಂದಂತಹ ವ್ಯಕ್ತಿಗಳ ಬಗ್ಗೆ ತಾಲ್ಲೂಕಿನಾದ್ಯಂತ ಉಹಾಪೋಹ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಈ ಕುರಿತು ಸ್ಪಷ್ಣನೆ ನೀಡಿದರು. ಟ್ರಾವಲರ್ ಹಿಸ್ಟರಿಯಡಿ ಈ ನಾಲ್ವರನ್ನು ಕ್ವಾರಂಟೈನ್ ಮಾಡಲಾಗಿತ್ತು.

      ಇವರು ಶಂಕಿತರೇ ಹೊರತು ಸೋಂಕಿತರಲ್ಲ ಹಾಗೂ ಇವರಾರಿಗೂ ಯಾವುದೇ ಸೋಂಕಿನ ಲಕ್ಷಣಗಳೂ ಕಂಡುಬಂದಿಲ್ಲವೆಂದು ಸ್ಪಷ್ಣನೆ ನೀಡಿದರು. ಜನರು ವದಂತಿಗಳನ್ನು ನಂಬಬೇಡಿ ಹಾಗೂ ಯಾರೂ ಗಾಬರಿಪಡುವ ಅವಶ್ಯಕತೆಯಿಲ್ಲವೆಂದರು.

      ಈವರೆಗೆ ತಾಲ್ಲೂಕಿನಲ್ಲಿ 12 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಪಟ್ಟಣದ ಹಾಸ್ಟಲ್‍ನಲ್ಲಿ ನಾಲ್ವರು, ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಹಾಗೂ ಹುಳಿಯಾರಿನಲ್ಲಿ ನಾಲ್ಕು ಮಂದಿಯನ್ನು ಇರಿಸಲಾಗಿದೆ. ಬಾಲಕಿಯರ ಹಾಸ್ಟಲ್ ಪಟ್ಟಣದೊಳಗಿರುವುದರಿಂದ ಗಾಬರಿಪಡುವ ಅಗತ್ಯವಿಲ್ಲ ಈವರೆಗೆ ಯಾವುದೇ ಸೋಂಕಿನ ಪ್ರಕರಣವಾಗಿಲ್ಲವೆಂದರು.

      ಎರಡು ಪ್ರಕರಣಗಳಿಂದ ಗೊಂದಲ: ತಾಲ್ಲೂಕಿನಲ್ಲಿ ಯಾವುದೇ ಪಾಸಿಟೀವ್ ಪ್ರಕರಣ ವರದಿಯಾಗಿಲ್ಲ. ಈ ಹಿಂದೆ ಹುಳಿಯಾರು ಸಮೀಪದ ಚೆಕ್ ಪೋಸ್ಟನಲ್ಲಿ ಹಿಡಿದ ವ್ಯಕ್ತಿಗಳಲ್ಲಿ ಮೂವರು ತುರುವೇಕೆರೆ ಹಾಗೂ ಒಬ್ಬರು ಕೊರಟಗೆರೆಯವರಾಗಿದ್ದು ಇವರೆಲ್ಲರನ್ನೂ ತುಮಕೂರಿಗೆ ಕಳುಹಿಸಲಾಗಿದೆ. ಆದರೆ ಶಿರಾ ಹಾಸ್ಟಲ್‍ನಲ್ಲಿ ಕ್ವಾರಂಟೈನಲ್ಲಿರುವ ನಾಲ್ವರಲ್ಲಿ ಮೂವರು ತುರುವೇಕೆರೆಯವರಾಗಿದ್ದು ಇವು ಪಾಸಿಟೀವ್ ಆಗಿದೆ. ಇದು ನಮ್ಮ ತಾಲ್ಲೂಕಿನ ಕೇಸಲ್ಲ, ಇದೇ ಸಂದರ್ಭಲ್ಲಿ ಕೆಂಕೆರೆ ಚೆಕ್‍ಪೋಸ್ಟ್‍ನಲ್ಲಿ ನಾಲ್ವರನ್ನು ಹಿಡಿದ ಪ್ರಕರಣಕ್ಕೆ ಇದನ್ನು ಹೋಲಿಸಲಾಗುತ್ತಿದೆ. ಆದರೆ ಇದಕ್ಕೂ ಸಿರಾ ಪ್ರಕರಣಕ್ಕೂ ಸಂಬಂಧವಿಲ್ಲ ಇವರಾರೂ ಈ ತಾಲ್ಲೂಕಿನವರಲ್ಲವೆಂದು ತಹಸೀಲ್ದಾರ್ ತೇಜಸ್ವಿನಿ ಸ್ಪಷ್ಟಪಡಿಸಿದರು.

(Visited 12 times, 1 visits today)