ತುಮಕೂರು:
ತುಮಕೂರು ಜಿಲ್ಲಾ ಪಂಚಾಯ್ತಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಗೂ ಸದಸ್ಯರ 3 ನೇ ಅವಧಿಗೆ ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಚಿಕ್ಕನಾಯಕನಹಳ್ಳಿ ತಾಲೂಕು ಕಂದಿಕೆರೆ ಕ್ಷೇತ್ರದ ಸದಸ್ಯೆ ಮಂಜುಳಾ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಧುಗಿರಿ ತಾಲೂಕಿನ ದೊಡ್ಡೇರಿ ಕ್ಷೇತ್ರದ ಸದಸ್ಯ ಚೌಡಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಂದನಕೆರೆ ಕ್ಷೇತ್ರದ ರಾಮಚಂದ್ರಯ್ಯ ಆಯ್ಕೆಯಾಗಿದ್ದಾರೆ.
ಉಳಿದಂತೆ ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಲತಾ ರವಿಕುಮಾರ್ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಾರದ ನರಸಿಂಹಮೂರ್ತಿ ಮುಂದುವರೆದಿದ್ದಾರೆ.
ವಿವಿಧ ಸಮಿತಿಗಳಿಗೆ ಆಯ್ಕೆಯಾದ ಸದಸ್ಯರ ಪಟ್ಟಿ:
ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ : ಗೌರಮ್ಮ
ಎಸ್.ಟಿ.ಮಹಾಲಿಂಗಯ್ಯ, ಭಾರತಿ ಹಿತೇಶ್, ಜೆ.ಶಿವಮ್ಮ ಗಾಯಿತ್ರಿದೇವಿ. ಎಸ್. ಪದ್ಮ
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ :
ಎಸ್.ರಾಮಕೃಷ್ಣ. ತಿಮ್ಮಯ್ಯ, ಗಾಯಿತ್ರಿಬಾಯಿ, ಜಿ.ಎಚ್. ಜಗನ್ನಾರ್ಥ, ಎಚ್. ಕೆಂಚಮಾರಯ್ಯ, ಪಿ.ಮಂಜುಳ.
ಸಾಮಾಜಿಕ ನ್ಯಾ ಯ ಸ್ಥಾಯಿ ಸಮಿತಿ : ನಾರಾಯಣಮೂರ್ತಿ, ಎಚ್.ಕೆಂಚಮಾರಯ್ಯ, ಎಸ್.ಟಿ.ಮಹಾಲಿಂಗಯ್ಯ, ಯಶೋದಾ ಗಂಗರಾಜು, ಜಿ.ಆರ್.ಶಿವರಾಮಯ್ಯ, ಲಕ್ಷ್ಮೀನರಸಯ್ಯ.
ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ: ಎಸ್.ರಾಮಕೃಷ್ಣ, ವೈ.ಸಿದ್ದರಾಮಯ್ಯ, ವೈ,.ಎಚ್.ಹುಚ್ಚಯ್ಯ, ಬೊಮ್ಮಯ್ಯ, ಕೆ.ಆರ್.ಭಾರತಿ ಹಿತೇಶ್, ಚೆನ್ನಮಲ್ಲಪ್ಪ.
ಸಾಮಾನ್ಯ ಸ್ಥಾಯಿ ಸಮಿತಿ: ಯಶೋಧಾ ಗಂಗಾರಾಜು, ಕೆ.ನರಸಿಂಹಮೂರ್ತಿ, ಎಸ್.ಎಚ್.ರಾಜಣ್ಣ, ಡಾ.ಜಿ.ಸಿ.ನವ್ಯಬಾಬು ಜಿ.ವಿ.ರೇಣುಕಾ, ಎಚ್.ಆರ್.ಅನಿತಾ.