ಮಧುಗಿರಿ :
ರೈತರ ಮನೆ ಬಾಗಿಲಿಗೆ ತೆರಳಿ ನೇರವಾಗಿ ಜಾನುವಾರುಗಳ ಸಮಸ್ಯೆಗೆ ಸ್ಪಂದಿಸಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ವಿನೂತನ ಕಾರ್ಯಕ್ರಮ ಪಶು ಸಂಗೋಪನಾ ಇಲಾಖೆಯ ಈ ಗ್ರಾಮ ವಾಸ್ತವ್ಯ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ರೆ.ಮಾ.ನಾಗಭೂಷಣ್ ಎಂದು ತಿಳಿಸಿದರು.
ತಾಲೂಕಿನ ಮರಬಳ್ಳಿ-ರಂಗನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಾಲೂಕಿನ ಪ್ರಥಮ ಕಾರ್ಯಕ್ರಮ ಇದಾಗಿದ್ದು ಗ್ರಾಮದ ಪಶು ಸಾಕಣೆ, ರಕ್ಷಣೆ ಹಾಗೂ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವುದರ ಜೊತೆಗೆ,ಜಾನುವಾರುಗಳ ಆರೋಗ್ಯ ಅಭಿವೃದ್ಧಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು, ಇಂತಹ ಗ್ರಾಮ ವಾಸ್ತವ್ಯವನ್ನು 15 ದಿನಗಳಿಗೊಮ್ಮೆ ಪ್ರತಿ ಗ್ರಾಮದಲ್ಲೂ ನಡೆಸುತ್ತೇವೆ ಎಂದು ಡಾ.ನಾಗಭೂಷಣ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಸುಮಾರು 10 ಜಾನುವಾರುಗಳಿಗೆ ಬಂಜೆತನಕ್ಕೆ ಚಿಕಿತ್ಸೆ, 4 ಕ್ಕೆ ಗರ್ಭ ಪರೀಕ್ಷೆ, 5 ರಾಸುಗಳಿಗೆ ಸಾಮಾನ್ಯ ಪರೀಕ್ಷೆ ನೆಡೆಸಿದ್ದು, ಎಲ್ಲ ರಾಸುಗಳಿಗೆ ಜಂತು ನಿವಾರಕ ಔಷದಿಯನ್ನು ವಿತರಿಸಲಾಯಿತು. ನಂತರ ಬೆಳಿಗ್ಗೆ 8 ರಿಂದ 10 ರವರೆಗೂ 30 ಕರುಗಳ ಉತ್ತಮ ಬೆಳವಣಿಗೆಗೆ ಐವರ್‍ಮೆಕ್ಟಿನ್ ಚುಚ್ಚುಮದ್ದು ನೀಡಿ, ತಲಾ 1 ಕೆಜಿ ಲವಣಾಂಶ ಮಿಶ್ರಿತ ಆಹಾರ ವಿತರಣೆ ಮಾಡಲಾಯಿತು. ರಾತ್ರಿ ರೈತ ಅರುಣ್ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಮುದ್ದು ರಂಗಪ್ಪ, ಹನುಮಯ್ಯ, ಸಿಬ್ಬಂದಿಗಳಾದ ಕಿರಣ್, ರಮೇಶ್, ರೈತರು ಹಾಗೂ ಇತರರು ಇದ್ದರು.