ಪಾವಗಡ:

      ಸಮಾಜಕಲ್ಯಾಣ ಇಲಾಖೆಯಿಂದ ಒಟ್ಟು 88 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಅಂಬೇಡ್ಕರ್ ಭವನ, ಸರ್ಕಾರಿ ಬಾಲಕರ ವಸತಿ ನಿಲಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವ ಗೋವಿಂದ ಕಾರಜೋಳ ಹೇಳಿದರು.

      ಶುಕ್ರವಾರ ಪಾವಗಡದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವರೂ ಅದ ಗೋವಿಂದ ಕಾರಜೋಳ ನಮ್ಮ ಬಿ.ಜೆ.ಪಿ. ಸರ್ಕಾರದ ಉದ್ದೇಶ ಮಕ್ಕಳಿಗೆ ಶಿಕ್ಷಣ ಕೊಡುವುದಾಗಿದೆ, ತಾಲ್ಲೂಕಿನಲ್ಲಿ ವಸತಿನಿಲಯಗಳು ಪ್ರಾರಂಭವಾಗಿದ್ದರಿಂದ 1600 ಮಕ್ಕಳಿಗೆ ಅನುಕೂಲವಾಗುತ್ತಿದೆ. ಸರ್ಕಾರದ ಮುಖ್ಯ ಆಧ್ಯತೆ ಶಿಕ್ಷಣ. ಬಜೆಟ್‍ನಲ್ಲಿ ಬಡವರ ಪರ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆ. 559 ಕೋಟಿ ಅನುದಾನವನ್ನು ಎಸ್.ಸಿ/ಎಸ್.ಟಿ. ಜನಾಂಗದ ಅಭಿವೃದ್ಧಿಗಾಗಿ ಹಾಗೂ 25.388 ಕೋಟಿ ಖರ್ಚು ಮಾಡಲಾಗಿದೆ.

      2019-20 ಸಾಲಿನಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ಪ್ರಗತಿ ಕುಂಟಿತವಾಗಿದೆ. ಆದರೂ ಸಹ ನಮ್ಮ ಸರ್ಕಾರ ಶೇ 90 ರಷ್ಟು ಸಾಧನೆಯನ್ನು ಮಾಡಿದ್ದೇವೆ ಎಂದರು.

      ಪಂಚಾಯತ್ ರಾಜ್ ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 9.012 ಕೋಟಿ ವೆಚ್ಚದಲ್ಲಿ 1.86 ಲಕ್ಷ ಎಸ್.ಸಿ. ಮತ್ತು 4.80. ಕೋಟಿ ವೆಚ್ಚದಲ್ಲಿ 15.66 ಸಾವಿರ ಮಹಿಳೆಯರು ಹಾಗೂ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗಿದೆ, 939 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಎಸ್.ಸಿ. ಮತ್ತು ಎಸ್.ಟಿ.23 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಸೈಕಲ್ ವಿತರಿಸಲಾಗಿದೆ, ಪಂಚಾಯತ್ ರಾಜ್ ಇಲಾಖೆಯಿಂದ 2230 ಕೋಟಿ ವೆಚ್ಚದಲ್ಲಿ ಸ್ವಚ್ಛಭಾರತ್ ಅಭಿಯಾನ ಯೋಜನೆ, ಶುದ್ಧ್ದ ಕುಡಿಯುವ ನೀರು, ನರೇಗಾ ಯೋಜನೆಯನ್ನು 6.ಲಕ್ಷ 11 ಸಾವಿರ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗಿದೆ. 25 ಲಕ್ಷ 36 ಸಾವಿರದ 615 ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯಲ್ಲಿ 2454 ಕೋಟಿ ವಿತರಿಸಲಾಗಿದೆ, ಇಂಧನ ಇಲಾಖೆಯಲ್ಲಿ 2183 ಕೋಟಿ ವೆಚ್ಚದಲ್ಲಿ ಎಸ್.ಸಿ.ಎಸ್.ಟಿ. ಜನಾಂಗಕ್ಕೆ ವಿದ್ಯುತ್ ಸೌಲಭ್ಯಕ್ಕಾಗಿ ನೀಡಲಾಗಿದೆ. ಎಸ್.ಸಿ. ಮತ್ತು ಎಸ್.ಟಿ. ವಸತಿನಿಲಯಗಳ ನಿರ್ವಹಣೆಗಾಗಿ, ವಿದ್ಯಾರ್ಥಿವೇತನಕ್ಕಾಗಿ 5607 ಕೋಟಿ ನೀಡಲಾಗಿದೆ, ವಸತಿಯೋಜನೆಯಲ್ಲಿ 1219 ಕೋಟಿ ವೆಚ್ಚದಲ್ಲಿ 29.668 ಮನೆಗಳ ನಿರ್ಮಾಣ ಮಾಡಲಾಗಿದೆ. ಸಣ್ಣ ನೀರಾವರಿ, ನಗರಾಭಿವೃದ್ಧಿ, ಮೂಲಭೂತ ಸೌಕರ್ಯಗಳಿಗಾಗಿ 4669 ಕೋಟಿ ಮೀಸಲಿಡಲಾಗಿದೆ. 2020-21ನಾಲಿನಲ್ಲಿ ಎಸ್.ಸಿ/ಎಸ್.ಟಿ ಜನಾಂಗದ ಅಭಿವೃದ್ಧಿಗಾಗಿ 27699 ಪುಟ 2 ಕ್ಕೆ

(Visited 33 times, 1 visits today)