ಮಧುಗಿರಿ:
ತಾಲ್ಲೂಕಿನ ಕುಪ್ಪಾಚಾರಿರೊಪ್ಪ (ಕೆ.ಸಿ. ರೊಪ್ಪ)ದಲ್ಲಿ ವ್ಯಕ್ತಿಯೊಬ್ಬನಿಗೆ ಕೋರನ ಸೋಂಕು ದೃಢಪಟ್ಟಿದ್ದು ಈತ ಗೌರಿಬಿದನೂರು ತಾಲ್ಲೂಕಿನ ಅಲಿಪುರಕ್ಕೆ ಹೋಗಿ ಬಂದಿದ್ದೇನೆ ಎಂದು ತಿಳಿದು ಬಂದಿದೆ.
ಜೂನ್ ಒಂಬತ್ತು ರಂದು ಈತನಿಗೆ ಜ್ವರ ಕಾಣಿಸಿಕೊಂಡಿದ್ದು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದಾರೆ ,ನಂತರ ಈತನ ಗಂಟಲಿನ ದ್ರವವನ್ನು ಪಡೆಯಲಾಗಿದ್ದು ಜೂನ್ ಹನ್ನೊಂದು ರಂದು ಬೆಳಿಗ್ಗೆ ಕೋರನ ಪಾಸಿಟಿವ್ ಇರುವುದು ಪರೀಕ್ಷೆಯಿಂದ ತಿಳಿದು ಬಂದಿದೆ. ಈತನ ಕುಟುಂಬದ ಆರು ಜನ ಸದಸ್ಯರನ್ನು ಸಮೀಪದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಹೌಸ್ ಕ್ವಾರಂಟೈನ್ ಮಾಡಲಾಗಿದೆ.ಇತನನ್ನು ತುಮಕೂರಿಗೆ ಚಿಕಿತ್ಸೆ ಗೆ ಕಳುಹಿಸಲಾಗಿದೆ.
ಕೊಪ್ಪಚಾರಿರೊಪ್ಪಕ್ಕೆ ಉಪವಿಭಾಧಿಕಾರಿ ಡಾ. ಕೆ. ನಂದಿನಿ ದೇವಿ, ಡಿವೈಎಸ್ಪಿ ಎಂ. ಪ್ರವೀಣ್ ,ತಹಶೀಲ್ದಾರ್ ಡಾ.ಜಿ. ವಿಶ್ವನಾಥ್ , ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ ಹಾಗೂ ಆರೋಗ್ಯಾ ಧಿಕಾರಿ ಬಾಲಾಜಿ ತಾಲ್ಲೂಕು ವೈದ್ಯಾಧಿಕಾರಿ ರಮೇಶ್ ಬಾಬು ಹಾಗೂ ಹಲವು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಮುಂಜಾಗ್ರತಾ ಕ್ರಮ ಕ್ಯೆಗೊಂಡಿದ್ದಾರೆ.
ಗ್ರಾಮ ಸೀಲ್ ಡೌನ್:
ತಾಲೂಕಿನಲ್ಲಿ ಮತ್ತೊಬ್ಬರಿಗೆ ಕರೊನಾ ಸೋಂಕು ಧೃಡಪಟ್ಟಿದ್ದು ,, ಕೆ.ಸಿ.ರೊಪ್ಪ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಂಕಿತನು ಬೆಂಗಳೂರಿಗೆ ಹೋಗಿ ಬಂದಿರುವ ಬಗ್ಗೆ ಮಾಹಿತಿ ಇದ್ದು ಆತನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ತಾಲೂಕು ಆಡಳಿತ ಪತ್ತೆ ಹಚ್ಚುವ ಕಾರ್ಯಕ್ಕಿಳಿದಿದೆ. ಬೆಟ್ಟದ ತಪ್ಪಲಿನಲ್ಲಿರುವ ಯಾವುದೇ ಹೆಚ್ಚಿನ ಸಂಪರ್ಕಗಳಿರದ ಕುಗ್ರಾಮದಲ್ಲಿ ಕರೊನಾ ಸೋಂಕು ಪತ್ತೆಯಾಗಿದ್ದು ಸಾರ್ವಜನಿಕರ ಸಹಜವಾಗಿ ಆತಂಕಕ್ಕೀಡಾಗಿದ್ದಾರೆ.
ಸೋಂಕಿತ ಪಟ್ಟಣದ ನಾನಾ ಕಡೆ ಓಡಾದಿರುವುದರಿಂದ ಪಟ್ಟಣದ ಜನತೆ ಅತಂಕದಲ್ಲಿದ್ದಾರೆ.