ಚಿಕ್ಕನಾಯಕನಹಳ್ಳಿ:

      ಇಂಜಿನ್‍ಲ್ಲಿ ಶಾರ್ಟ್ ಸಕ್ರ್ಯಟ್ ನಿಂದಾಗಿ ಒಮ್ನಿಕಾರೊಂದು ಮಾರ್ಗಮಧ್ಯದಲ್ಲಿ ಹೊತ್ತಿ ಉರಿದ ಘಟನೆ ಶೆಟ್ಟಿಕೆರೆ ಬಳಿ ನಡೆದಿದೆ.

      ಚಿಕ್ಕನಾಯಕನಹಳ್ಳಿ – ತಿಪಟೂರಿನ ಮಾರ್ಗದ ನಡುವೆ ಶೆಟ್ಟಿಕೆರೆ ಬಳಿ ಚಲಿಸುತ್ತಿದ್ದ ಮಾರುತಿ ಒಮ್ನಿಯ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿದ ಪರಿಣಾಮ ಚಲಿಸುತ್ತಿದ್ದಾಗಲೇ ಹೊತ್ತಿ ಉರಿಯಿತು. ಈ ಸಂದರ್ಭದಲ್ಲಿ ವಾಹನದಲ್ಲಿದ್ದವರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

      ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ವಾಹನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು. ವಾಹನ ಭಾಗಶಃ ಸುಟ್ಟುಹೋಗಿದ್ದು ಸುಮಾರು ರೂ.3 ಲಕ್ಷರೂ ನಷ್ಟ ಸಂಭವಿಸಿದೆ. ವಾಹನ ಶೆಟ್ಟಿಕೆರೆಯ ಲೋಕೇಶ್ ಎಂಬುವರದ್ದಾಗಿದ್ದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳದ ಜ್ಞಾನಮೂರ್ತಿ ತಂಡ ಕಾರ್ಯನಿರ್ವಹಸಿದರು.

(Visited 15 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp