ಕುಣಿಗಲ್:
ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಸರ್ಕಾರ ವಿವಿಧ ಸೌಲಭ್ಯಗಳನ್ನ ರೈತರಿಗೆ,ಬಡವರಿಗೆ,ಶೋಷಿತರಿಗೆ ನೀಡುತ್ತಿದ್ದರೂ ಸಹ ಅಧಿಕಾರಿಗಳು ತಲುಪಿಸುವಲ್ಲಿ ವಿಫಲಗೊಂಡಿದ್ದಾರೆ ಎಂದು ಬೆಂ.ಗ್ರ್ರಾ.ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸಂಪರ್ಕ ಸಭೆಯಲ್ಲಿ ಮಾತನಾಡುತ್ತಾ,ಸರ್ಕಾರ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಹಲವಾರು ಸೌಲಭ್ಯಗಳನ್ನ ನೀಡುತ್ತಿದ್ದರೂ ಸಹ ಅಧಿಕಾರಿಗಳು ಈ ವರ್ಗಧ ಜನರಿಗೆ ಸಮರ್ಪಕವಾಗಿ ತಲುಪಿಸಲು ಆಗುತ್ತಿಲ್ಲ.ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಂಡು ವಿವಿಧ ಸೌಲಭ್ಯಗಳನ್ನ ರೈತರಿಗೆ,ಬಡವರಿಗೆ ತಲುಪಿಸುವಂತಹ ಕಾರ್ಯವನ್ನ ಕೈಗೊಳ್ಳಬೇಕಾಗಿದೆ. ಗ್ರ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ಶುದ್ಧ ನೀರಿನ ಘಟಕಗಳನ್ನ ಆರಂಭಿಸಿದ್ದು,ಇವುಗಳ ನಿರ್ವಹಣೆಯನ್ನ ಪಂಚಾಯ್ತಿಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದರು.
ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ನೀರನ್ನ ವೈ.ಕೆ.ರಾಮಯ್ಯ ಹುಚ್ಚಮಾಸ್ತಿಗೌಡ ಸೇರಿದಂತೆ ಹಲವಾರು ಹೋರಾಟಗಾರರು ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಿರುತ್ತಾರೆ,ನಮ್ಮ ಪಾಲಿನ ಹಕ್ಕಿನ ಪ್ರಕಾರ ನೀರು ತೆಗೆದುಕೊಳ್ಳಲು ಯಾರ ಅಪ್ಪಣೆಯೂ ಬೇಕಾಗಿಲ್ಲ,ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದರು.
ರಾಜ್ಯದಲ್ಲಿ ಕಳೆದ 45 ವರ್ಷದಿಂದ ಆಗದಂತಹ ಮಳೆಯಿಂದಾಗಿ ಡ್ಯಾಂಗಳು ಯಥ್ಥೇಚವಾಗಿ ನೀರು ಸಂಗ್ರಹಿಸಿದ್ದರೂ ಸಹ ತಾಲ್ಲೂಕಿನ ನಮ್ಮ ಪಾಲಿನ ನೀರು ಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,ನಾನು ಹೇಮಾವತಿ ನೀರನ್ನ ರಾಮನಗರ,ಕನಕಪುರ,ಚನ್ನಪಟ್ಟಣಕ್ಕೆ ಒಂದು ಹನಿ ನೀರನ್ನು ಸಹ ತೆಗೆದುಕೊಂಡು ಹೋಗುವುದಿಲ್ಲ.ಕುಣಿಗಲ್ ತಾಲ್ಲೂಕಿನ ಜನತೆಗೆ ಯಾವುದೇ ಮೋಸ ಮಾಡುವುದಿಲ್ಲ,ನಮ್ಮ ತಾಲ್ಲೂಕಿನ ಹಕ್ಕಿನ ನೀರನ್ನ ಪಡೆಯಲಾಗುವುದು ಎಂದರು.
ಜಿಲ್ಲೆಯಲ್ಲಿ ಕುಣಿಗಲ್ ಹಾಗೂ ಪಾವಗಡ ತಾಲ್ಲೂಕಿಗಳನ್ನ ತಾರತಮ್ಯ ಧೋರಣೆಯಲ್ಲಿ ಜಿಲ್ಲಾಧಿಕಾರಿ, .ಸಿ.ಎಸ್. ಹಾಗೂ ರಾಜಕಾರಣಿಗಳು ಕಾಣುತ್ತಿರುವ ಧೋರಣೆಯನ್ನ ಕೈಬಿಡಬೇಕಾಗಿದ್ದು,ಮುಂದಿನ ದಿನಗಳಲ್ಲಿ ಈ ತಾಲೂಕಿನ ಸಮಗ್ರ ಅಭಿವೃಧ್ಧಿಗೆ ಮುಂದಾಗಬೇಕಾಗಿದೆ ಎಂದು ಸೂಚಿಸಿದರು.ರೈತರ ಜಮೀನುಗಳ ದಾಖಲೆಗಳನ್ನ ಸಣ್ಣಪುಟ್ಟ ತಪ್ಪುಗಳನ್ನ ಅಧಿಕಾರಿಗಳು ಸರಿಪಡಿಸುವ ಮೂಲಕ ರೈತರಿಗೆ ಖಾತೆ ಪಹಣಿ ಶಾಶ್ವತ ಪರಿಹಾರ ನೀಡಿ ನೆಮ್ಮದಿ ಜೀವನಕ್ಕೆ ಅವಕಾಶ ಮಾಡಿಕೊಡಬೇಕಾಗಿದೆ. ನರೇಗಾ ಸೇರಿದಂತೆ ಹಲವಾರು ಯೋಜನೆಗಳು ನಮ್ಮಲ್ಲಿ ಇವೆ ಬೇರೆ ಯೋಜನೆ ಮಾಡಲು ಅವಕಾಶವೇ ಇಲ್ಲದಂತಾಗಿದೆ,ಇದನ್ನ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಎಂದರು.
ಶಾಸಕ ಹೆಚ್ ಡಿ ರಂಗನಾಥ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮವಾಸ್ತವ್ಯ ಹಾಗೂ ಜನಸಂಪರ್ಕ ಸಭೆ ಮಾಡುತ್ತಿದ್ದೇನೆ,ಅಲ್ಲಿ ಹಲವಾರು ಸಮಸ್ಯೆಯನ್ನ ಅರಿತಿದ್ದು, ಸರಿಯಾದ ರೀತಿ ಸ್ಪಂದಿಸುತ್ತಿಲ್ಲ ಅಧಿಕಾರಿಗಳು ಉತ್ತಮ ರೀತಿ ಕೆಲಸ ಮಾಡಿದರೆ ಅಭಿವೃದ್ದಿ ಮಾಡಲು ಸಾಧ್ಯ ಎಂದರು .
ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಮಾತನಾಡಿ ಕಂದಾಯ ಇಲಾಖೆ ಸೇರಿದಂತೆ ಮೇಲುಸ್ತುವಾರಿ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿವೆ ಸ್ಮಶಾನದ ಅಭಿವೃದ್ದಿ ಹಾಗೂ ನಿವೆಶನಗಳಿಗಾಗಿ 1800 ಎಕರೆ ಪ್ರದೇಶವನ್ನು ಜಿಲ್ಲೆಯಲ್ಲಿ ಗುರುತಿಸಿದ್ದೇವೆ ಆದಷ್ಟು ಬೇಗ ಪೋಡಿ ಮುಕ್ತವನ್ನಾಗಿ ಕುಣಿಗಲ್ ತಾಲೂಕನ್ನು ಮಾಡುವ ಪ್ರಯತ್ನದಲ್ಲಿ ಇದ್ದೇವೆ ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಓ ಅನೀಸ್- ಕಣ್ಮಣಿ ಜಾಯ್,ಜಿಲ್ಲಾ ಪಂಚಾಯಿತಿ ಸದಸ್ಯರಾಧ ಅನುಸೂಯಮ್ಮ ವೈ.ಕೆ.ಆರ್,ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ್ಷರಾದ ಹರೀಶ್ ನಾಯಕ್,ತಹಸೀಲ್ದಾರ್ ನಾಗರಾಜು,ಅಲ್ಲಾ ಬಕ್ಷೀಸ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.