ಮಧುಗಿರಿ:
ಪರಿಶಿಷ್ಟ ಜಾತಿಯ ವ್ಯಕ್ತಿ ತಮ್ಮ ಜಮೀನಿನಲ್ಲಿ ಬೋರ್‍ವೆಲ್ ಕೊರೆಸಿದಕ್ಕೆ ಖ್ಯಾತೆ ತೆಗೆದ ಪಕ್ಕದ ಜಮೀನಿನ ಸವರ್ಣಿಯನೊಬ್ಬ ಹಲ್ಲೆ ನಡೆಸಿರುವ ಘಟನೆ ಮದುಗಿರಿ ತಾಲ್ಲೂಕಿನ ತಿಪ್ಪಾಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಪರಿಶಿಷ್ಟ ಜಾತಿಯ ವ್ಯಕ್ತಿ ಹನುಮಂತರಾಯಪ್ಪ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸಿದ್ದಾನೆ. ಬೋರ್‍ವೆಲ್‍ನಲ್ಲಿ ನೀರು ಸಿಕ್ಕುತ್ತಿದ್ದಂತೆ ಪಕ್ಕದ ಜಮೀನಿನ ಮಾಲಿಕ ಸವರ್ಣಿಯ ವ್ಯಕ್ತಿ ಹಾಗೂ ಮಾಜಿ ಗ್ರಾ.ಪಂ.ಸದಸ್ಯ ನರಸಿಂಹಮೂರ್ತಿ ಎಂಬಾತ ತಮ್ಮ ಬೋರ್‍ವೆಲ್‍ನಲ್ಲಿ ನೀರು ಕಡಿಮೆಯಾಗುತ್ತದೆಂದು ಖ್ಯಾತೆ ತೆಗೆದು ಹನುಮಂತರಾಯಪ್ಪ ಮೇಲೆ ಹಲ್ಲೆ ನಡೆಸಿದ್ದಾನೆ. ಕಬ್ಬಿಣದ ರಾಡ್‍ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಲ್ಲೆ ಗೊಳಗಾದ ಹನುಮಂತರಾಯಪ್ಪನ ಕೈ ಹಾಗೂ ತೊಡೆಗೆ ಗಂಭೀರವಾಗಿ ಗಾಯಾ ಗಳಾಗಿದ್ದು ಮಧು ಗಿರಿ ತಾಲ್ಲೂಕು ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಕಳೆದ ತಿಂಗಳಷ್ಟೇ ಇಂತಹ ಘಟನೆ ನಡೆದಿತ್ತು. ಈ ಭಾಗದಲ್ಲಿ ಪದೆ ಪದೆ ಸವರ್ಣಿಯರಿಂದ ಪರಿಶಿಷ್ಟ ಜಾತಿಯ ಸಮುದಾಯಗಳ ಮೇಲೆ ಪ್ರಕರಣಗಳು ನಡೆಯುತ್ತಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.