ತುಮಕೂರು:
ಕೇವಲ ಕೊಳವೆ ಬಾವಿ ಕೊರೆಯುವುದಷ್ಟೇ ಆರ್.ಡಬ್ಲ್ಯಎಸ್ ಕೆಲಸವಲ್ಲ. ಆ ನಂತರದ ಎಲ್ಲಾ ಕೆಲಸಗಳನ್ನು ಮೇಲುಸ್ತುವಾರಿ ಮಾಡಿ, ಅಂತಿಮವಾಗಿ ಜನರಿಗೆ ಕುಡಿಯುವ ನೀರು ಒದಗಿಸುವವರು, ಗ್ರಾ.ಪಂ., ತಾ.ಪಂ. ಅಧಿಕಾರಿಗಳ ಜೊತೆಗೆ ಸಮನ್ವಯ ಸಾಧಿಸಿ,ಉದ್ದೇಶ ಈಡೇರಿಸುವಂತೆ ಜಿ.ಪಂ.ಉಪಾಧ್ಯಕ್ಷೆ ಶ್ರೀಮತಿ ಶಾರದ ನರಸಿಂಹ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿ.ಪಂ.ಸಭಾಂಗಣದಲ್ಲಿ ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಒಂದು ಒವರ್ ಹೆಡ್‍ಟ್ಯಾಂಕು ನಿರ್ಮಿಸುವ ಮುನ್ನ ಕೇವಲ ಕೊಳವೆ ಬಾವಿ ಕೊರೆದು,ಪೈಪ್ ಲೈನ್ ಅಳವಡಿಸಿದ ನಂತರ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಬೇಕು.ಇಲ್ಲದಿದ್ದರೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಸರಕಾರ ಲಕ್ಷಾಂತರ ರೂ ವೆಚ್ಚ ಮಾಡಿದರೂ ಉದ್ದೇಶ ಈಡೇರಿರುವುದಿಲ್ಲ. ಇದು ಸರಿಯಲ್ಲ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಸಂಬಂಧಿಸಿದಂತೆ ಗ್ರಾ.ಪಂ, ತಾ.ಪಂ,ಆರ್.ಡಬ್ಲು ಎಸ್ ಹಾಗೂ ಪಿಆರ್‍ಇಡಿ ಅಧಿಕಾರಿಗಳು ಪರಸ್ವರ ಪೂರಕವಾಗಿ ಕೆಲಸ ಮಾಡಬೇಕೆಂದು ಸ್ಪಷ್ಟ ನಿರ್ದೇಶನ ನೀಡಿದರು.
ತುಮಕೂರು ಜಿಲ್ಲೆಯಲ್ಲಿ 2018-19ರಲ್ಲಿ 39 ಓವರ್ ಹೆಡ್ ಟ್ಯಾಂಕ್‍ಗಳು ಮಂಜೂರಾಗಿದ್ದು,ಇವುಗಳಲ್ಲಿ 36 ಪೂರ್ಣ ಗೊಂಡಿವೆ.ಕುಣಿಗಲ್‍ನಲ್ಲಿ 2 ಮತ್ತು ತುಮಕೂರು ತಾಲೂಕಿನಲ್ಲಿ 1 ಕಾಮಗಾರಿ ಪ್ರಗತಿಯಲ್ಲಿದೆ.ಅಲ್ಲದೆ 2019-20ರಲ್ಲಿ 8 ಕಾಮಗಾರಿ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿವೆ. ಈಗಾಗಲೇ ಮುಕ್ತಾಯಗೊಂಡಿರುವ ಟ್ಯಾಂಕ್‍ಗಳನ್ನು ಗ್ರಾ.ಪಂ ವಶಕ್ಕೆ ನೀಡಲಾಗಿದೆ ಎಂದು ಆರ್.ಡಬ್ಲ್ಯಎಸ್ ಇಇ ಚನ್ನವೀರಸ್ವಾಮಿ ಸಭೆಗೆ ಮಾಹಿತಿ ನೀಡಿದರು.
ಅನುದಾನ ವಾಪಸ್ಸಾಗದಂತೆ ಎಚ್ಚರಿಕೆ ವಹಿಸಿ:
ತುಮಕೂರು ಪಿಆರ್‍ಇಡಿ ಯಲ್ಲಿ ಈ ವರ್ಷ ಸುಮಾರು 80 ಲಕ್ಷ ರೂಗಳು ಮಧುಗಿರಿ ಉಪವಿಭಾಗದಲ್ಲಿ ಪುಟ 2 ಕ್ಕೆ