ತುಮಕೂರು:
ಜೂನ್-25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಪ್ರಾರಂಭವಾಗಲಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್ ಮಾಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.
ತುಮಕೂರು ಮಹಾನಗರ ಪಾಲಿಕೆಗೆ ಒಳಪಡುವ ಪರೀಕ್ಷಾ ಕೇಂದ್ರಗಳಿಗೆ ಮಹಾನಗರ ಪಾಲಿಕೆಯ ಮೇಯರ್ ಭೇಟಿ ನೀಡಿ ಪಾಲಿಕೆಯ ವತಿಯಿಂದ ಶಾಲಾ ಆವರಣವನ್ನು ಕೊಠಡಿಗಳನ್ನು ವೀಕ್ಷಿಸಿ ಸಾಹಿತ್ಯ ಮಾಡಿಸಿದರು ಈ ವೇಳೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕಾಮಾಕ್ಷಿ ಜೂನ್ 25ರಿಂದ ಎಸ್‍ಎಸ್‍ಎಲ್‍ಸಿಪರೀಕ್ಷೆ ಗಳು ಪ್ರಾರಂಭವಾಗುತ್ತಿದೆ ತುಮಕೂರಿನಲ್ಲಿ 33 ಪರೀಕ್ಷಾ ಕೇಂದ್ರಗಳು ಇವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು ಪೋಷಕರಲ್ಲಿ ಸಾರ್ವಜನಿಕರಲ್ಲಿ ಮನವಿ ಎಂದರೆ ಎಲ್ಲರೂ ಕೈಜೋಡಿಸುವ ಮೂಲಕ ಸರಾಗವಾಗಿ ನಡೆಯಲು ಸಹಕರಿಸಬೇಕೆಂದು ಕೋರಿದರು ಪೋಷಕರು ತಮ್ಮ ಮಕ್ಕಳ ಆತಂಕಪಡುವ ಅಗತ್ಯವಿಲ್ಲ ನಿಮ್ಮ ಮಕ್ಕಳು ನಮ್ಮ ಮಕ್ಕಳು ಇದ್ದಂತೆ ಎಲ್ಲರೂ ಜಾಗರೂಕತೆಯಿಂದ ಈ ಪರೀಕ್ಷೆಯನ್ನು ಯಶಸ್ವಿಗೊಳಿಸೋಣ ಎಂದರು.
ಮಹಾನಗರಪಾಲಿಕೆಯ ಮೇಯರ್ ಫರೀದಾ ಬೇಗಮ್ ಮಾತನಾಡಿ ಪಾಲಿಕೆಯ ವ್ಯಾಪ್ತಿಗೆ ಒಳಪಡುವ ಪರೀಕ್ಷಾ ಕೇಂದ್ರಗಳಿಗೆ ಪಾಲಿಕೆ ವತಿಯಿಂದ ಸ್ಯಾನಿಟೈಸರ್ ಮಾಡಲಾಗುತ್ತಿದೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕ ಪಡೆದೆ ನಿರಾಳವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆಯನ್ನು ಬರೆಯಬಹುದು ಅದೇರೀತಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆಯನ್ನು ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ನಂತರ ಮಾತನಾಡಿದ ನಗರಯೋಜನಾ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮಹಾನಗರ ಪಾಲಿಕೆಯು ಶಾಲಾ ಅವರಣವನ್ನು ಪೌರಕಾರ್ಮಿಕರಿಂದ ಸ್ಯಾನಿಟೈಸರ್ ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲಾಗಿದೆ, ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಶಶಿಕಲಾ ಉಪಮೇಯರ್ ಗಂಗಾಹನುಮಯ್ಯ, ನಿರೀಕ್ಷಕ ನಟೇಶ್ ಆರೋಗ್ಯ, ವಾಸವಿ ಶಾಲೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಜಿ., ಪರಿಸರ ಅಭಿಯಂತರರು ಕೃಷ್ಣಮೂರ್ತಿ, ಆರೋಗ್ಯಧಿಕಾರಿ ನಾಗೇಶ್ ಕುಮಾರ್ ಮಂತಾದವರು ಹಾಜರಿದ್ದರು.