ಮಧುಗಿರಿ:

       ತಾಲೂಕಿನ ಕೆ.ಸಿ.ರೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಧೃಢವಾಗಿತ್ತು.

      ಈ ವ್ಯಕ್ತಿಗೆ ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಪರಿಣಾಮ ಗುಣಮುಖನಾಗಿ ಸ್ವಗ್ರಾಮಕ್ಕೆ ಮರಳಿದಾಗ ತಹಶೀಲ್ದಾರ್ ಡಾ:ಜಿ.ವಿಶ್ವನಾಥ್ ನೇತೃತ್ವದ ತಂಡ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.

      ಈ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿತ್ತು . ಗ್ರಾಮಸ್ಥರಲ್ಲಿ ಕರೋನಾ ಆತಂಕ ಮನೆಮಾಡಿತ್ತು. ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಗುಣಮುಖನಾಗಿ ಬಿಡುಗಡೆಗೊಂಡ ಕಾರಣ ಗ್ರಾಮದಲ್ಲಿ ಸಂತಸದ ವಾತಾವರಣ ಕಂಡುಬಂದಿದೆ.

      ಇಡೀ ತಾಲೂಕು ಆಡಳಿತ ಗ್ರಾಮದಲ್ಲಿ ಸೋಂಕು ಮತ್ತೊಬ್ಬರಿಗೆ ಹರಡದಂತೆ ಸೋಂಕಿತ ವ್ಯಕ್ತಿಯ ಕುಟುಂಬ ವರ್ಗ ಮತ್ತು ಆತನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಹೌಸ್ ಕ್ವಾರಂಟೈನ್ ಮಾಡಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

       ಈ ಗ್ರಾಮಕ್ಕೆ ಶಾಸಕ ಎಂ.ವಿ.ವೀರಭಧ್ರಯ್ಯ, ಜಿ.ಪಂ ಸಿ.ಇ.ಒ ಶುಭಾ ಕಲ್ಯಾಣ್, ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಉಪವಿಭಾಗಾಧಿಕಾರಿ ಡಾ:ಕೆ.ನಂದಿನಿದೇವಿ, ತಾಲೂಕು ವೈದ್ಯಾಧಿಕಾರಿ ರಮೇಶ್ ಬಾಬು, ತಾ.ಪಂ ಇ.ಒ ದೊಡ್ಡಸಿದ್ದಯ್ಯ , ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ್, ಪೊಲೀಸ್ ಇಲಾಖೆ, ಕಂದಾಯ ಇಲಾಖೆ , ಡಿ.ವಿ.ಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಎನ್ ಶಿವಕುಮಾರ್, ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಅಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.

(Visited 12 times, 1 visits today)