ಚಿಕ್ಕನಾಯಕನಹಳ್ಳಿ:

       ಪಟ್ಟಣದಲ್ಲಿ ಕೊರೊನಾ ಪ್ರಕರಣವೊಂದು ವರದಿಯಾದ ಐದು ದಿನದಲ್ಲಿಯೇ ತಾಲ್ಲೂಕಿನ ಗೋಡೆಕೆರೆ ಬಳಿ ಮತ್ತೊಂದು ಕೊರೊನಾ ಸೋಂಕಿನ ಪ್ರಕರಣ ಧೃಡಪಟ್ಟಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

       ತಾಲ್ಲೂಕಿನ ಗೋಡೆಕರೆಯ ಗೊಲ್ಲರಹಟ್ಟಿ ಯಲ್ಲಿನ 21ವರ್ಷ ಯುವಕನಿಗೆ ಕೊರೊನಾ ಧೃಡಪಟ್ಟಿದೆ. ಈತನು ನೆಲಮಂಗಲದ ಬಳಿಯಿರುವ ಎವಿವಿ ಎಲೆಕ್ಟ್ರಿಕಲ್ ಕಂಪನಿಯಲ್ಲಿ ಎಂಸಿಬಿ ಬಿಡಿಭಾಗದ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜೂನ್ 18 ರಂದು ಅನಾರೋಗ್ಯದ ನಿಮಿತ್ತ ತನ್ನ ಸ್ನೇಹಿತನೊಂದಿಗೆ ಊರಿಗೆ ಬಂದಿದ್ದಾನೆ. ಜ್ವರ ಹೆಚ್ಚಾದಾಗ ಜೂನ್ 19 ರಂದು ಸಮೀಪದ ಗೋಡೆಕೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದಾಗ ಅಲ್ಲಿನ ವೈದ್ಯರು ಗಂಟಲು ದ್ರವತೆಗೆಸಿಕೊಳ್ಳಲು ಸೂಚಿಸಿದ್ದಾರೆ, ಅದರಂತೆ ಆತನು 20 ರಂದು ಚಿ.ನಾ.ಹಳ್ಳಿಯ ಆರೋಗ್ಯಕೇಂದ್ರದಲ್ಲಿ ಗಂಟಲುದ್ರವ ನೀಡಿ ಬಂದಿದ್ದಾನೆ. ಇದೇ 23 ರಂದು ಬೆಳಿಗ್ಗೆ ಈತನಿಗೆ ಕೊರೊನಾ ಧೃಡಪಟ್ಟಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಯವರು ಗೋಡೆಕೆರೆಯ ಗೊಲ್ಲರ ಹಟ್ಟಿಯಲ್ಲಿರುವ ಈತನ ನಿವಾಸದಿಂದ ತುಮಕೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

      ಇವರು ವಾಸಿಸುತ್ತಿದ್ದ ಪ್ರದೇಶದಲ್ಲಿ ಸುಮಾರು 75 ಮನೆಗಳಿದ್ದು ಆತನು ವಾಸಿಸುತ್ತಿದ್ದು ಬೀದಿಯನ್ನು ತಕ್ಷಣ ಸೀಲ್‍ಡೌನ್ ಮಾಡಲಾಯಿತು. ಈತನ ಪ್ರಾಥಮಿಕ ಸಂಪರ್ಕದಲ್ಲಿರುವ ಆತನ ತಂದೆ ಹಾಗೂ ತಾಯಿಯನ್ನು ಐಸೋಲೇಷನ್ ಕ್ವಾರoಟೈನ್ ಮಾಡಲಾಗಿದ್ದು ಸ್ನೇಹಿತನನ್ನು ಕ್ವಾರಂಟೈನ್ ಮಾಡಲಾಗಿದೆ. ಈತನು ಬೆಂಗಳೂರಿನಿಂದ ಪ್ರಯಾಣಿಸಿದ ಬಸ್‍ಗಳ ವಿವರ ಹಾಗೂ ಸಹ ಪ್ರಯಾಣಿಕರ ಮಾಹಿತಿಯನ್ನು ಪಡೆಯಲು ಯತ್ನಿಸಲಾಗುತ್ತಿದೆ.

      ಐದು ದಿನದ ನಂತರ ದ್ರವಪರೀಕ್ಷೆ ಮಾಡಲಾಗುವುದು. ಈವರೆಗೆ ಬೆಳಕಿಗೆ ಬಂದ ಈ ಎರಡೂ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಿದ ವೈದ್ಯರಾದ ದಿವ್ಯ ಹಾಗೂ ಸವಿತ ರವರನ್ನು ಕ್ವಾರಂಟೈನ್‍ಗೆ ಒಳಪಟ್ಟಿದ್ದಾರೆ. ಸ್ಥಳಕ್ಕೆ ಡಿಎಚ್‍ಓ ನಾಗೇಂದ್ರಪ್ಪ, ತಹಸೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದರು.

 ಎಲ್ಲರಿಗೂ ನೆಗಟೀವ್:

      ಮೋದಲ ಕೊರೊನಾ ಪ್ರಕರಣ ಪಟ್ಟಣದಲ್ಲಿ ವರದಿಯಾದ ಹಿನ್ನಲೆಯಲ್ಲಿ ಸೋಕಿತ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರ ದ್ರವಪರೀಕ್ಷೆಯ ವರದಿ ಬಂದಿದ್ದು ಎಲ್ಲವೂ ನೆಗಟೀವ್ ಆಗಿರುವುದು ಆತಂಕದಲ್ಲಿದ್ದ ಪಟ್ಟಣದ ಜನತೆಗೆ ಸಮಾಧಾನ ತಂದಿದೆ.

(Visited 30 times, 1 visits today)