ತುಮಕೂರು:

    ನಗರದ ಜಿಲ್ಲಾಸ್ಪತ್ರೆಯಲ್ಲಿ  ಇಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕೊರೊನಾ ಶಂಕೆ ವ್ಯಕ್ತವಾಗಿದೆ.

      ವಿನೋಬಾ ನಗರದ 5 ನೇ ಕ್ರಾಸ್ ನಲ್ಲಿ ವಾಸವಿದ್ದ 56 ವರ್ಷದ ವ್ಯಕ್ತಿ ಟೈಲರ್ ವೃತ್ತಿ ಮಾಡಿಕೊಂಡಿದ್ದರು ಇವರಿಗೆ ಸಕ್ಕರೆ ಖಾಯಿಲೆ, ರಕ್ತದೊತ್ತಡ ಇತ್ತು ಎನ್ನಲಾಗಿದೆ. ಜ್ವರದಿಂದ ಬಳಲುತ್ತಿದ್ದ ಇವರು ಭಾನುವಾರ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಜ್ವರ ವಿದ್ದ ಕಾರಣ ಸಿದ್ದಗಂಗಾ ಆಸ್ಪತ್ರೆ ವೈಧ್ಯರು ಇವರನ್ನ ಕೋವಿಡ್ ಪರೀಕ್ಷೆ ಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

      ಸೋಮವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಇವರನ್ನ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದ್ದು ಗಂಟಲು ದ್ರವ ಪಡೆದು ಆರ್ ಟಿಪಿಸಿಆರ್ ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಇವರನ್ನ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದು ಕಳೆದ ರಾತ್ರಿ 10.30 ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

      ಮಂಗಳವಾರ ಮದ್ಯಾಹ್ನ 2.30 ಸುಮಾರಿಗೆ ಶಂಕಿತ ಮೃತವ್ಯಕ್ತಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ಪಾಸಿಟಿವ್ ಬಂದಿದೆ ಎಂದು ವೈದ್ಯರು ತಿಳಿಸಿದ್ದರಂತೆ. ಬಳಿಕ ಮತ್ತೊಮ್ಮೆ ಕೋವಿಡ್ 19 ಪರೀಕ್ಷೆಗೆ ಮಾದರಿಯನ್ನ ಕಳುಹಿಸಲಾಗಿದೆ ಸಂಜೆ 6 ಗಂಟೆ ವೆಳೆಗೆ ವರದಿ ಬರಲಿದೆ ಎಂದಿದ್ದರಂತೆ. ಇದೀಗ ಎರಡನೇ ಭಾರಿಗೆ ಕೋವಿಡ್ ತಪಾಸಣೆ ನಡೆಸಿದ ಬಳಿಕವೂ ಕೋರೊನಾ ಪಾಸಿಟಿವ್ ಇದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮೃತ ವ್ಯಕ್ತಿಯ ಸಂಬಂಧಿ ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಮುಜೀಬ್ ಅಹಮದ್  ತಿಳಿಸಿದ್ದಾರೆ.

       ಈ ಶಂಕಿತ ವ್ಯಕ್ತಿಯನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಬಳಿಕ ಅಧಿಕಾರಿಗಳು ವ್ಯಕ್ತಿ ವಾಸವಿದ್ದ ವಿನೋಭಾನಗರಕ್ಕೆ ತೆರಳಿ ಪರೀಶೀಲನೆ ನಡೆಸಿದ್ದು ಕುಟುಂಬದವರ ಮಾಹಿತಿ, ಹಾಗೂ ವ್ಯಕ್ತಿ ಓಡಾಡಿದ್ದ ಸ್ಥಳಗಳ ಟ್ರಾವೆಲ್ ಹಿಸ್ಟರಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಈ ವ್ಯಕ್ತಿ ಕಳೆದ ಬುದವಾರ ಮದುಗಿರಿಗೆ ಬೈಕಿನಲ್ಲೆ ತೆರಳಿದ್ದರು ಅಲ್ಲಿಂದ ಬಂದ ಬಳಿಕ ಇವರಿಗೆ ಜ್ವರ ಕಾಣಿಸಿಕೊಂಡಿತ್ತು ಎನ್ನಲಾಗಿದೆ.

      ಇಂದು ಸಂಜೆ ಶಂಕಿತನ ಮೃತದೇಹವನ್ನ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ  ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಇದುವೆರೆಗೂ ಅಧಿಕೃತವಾಗಿ ಮಾಹಿತಿ ನೀಡಿಲ್ಲದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 

(Visited 8 times, 1 visits today)