ಕೊರಟಗೆರೆ:
ಕೊರೊನಾ ಮುಕ್ತವಾಗಿದ್ದ ಕೊರಟಗೆರೆ ಕ್ಷೇತ್ರದ ತಾಪಂ ಕಚೇರಿಯ ಸಿಬ್ಬಂದಿ ಸೇರಿ ಒಟ್ಟು 19 ಜನರಿಗೆ ಕೊರೊನಾ ಸೊಂಕು ಪ್ರಕರಣ ದೃಢಪಟ್ಟಿರುವ ಹಿನ್ನಲೆ ಗುರುವಾರ ಕೊರಟಗೆರೆಗೆ ಕರಾಳ ದಿನವಾಗಿದೆ. ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಜನರ ತನಿಖೆಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆಯಲ್ಲಿ ಜಂಟಿಯಾಗಿ ಕಾರ್ಯಚರಣೆ ನಡೆಸುತ್ತಿದೆ.
ಕೊರಟಗೆರೆ ಪಟ್ಟಣದ ತಾಪಂ ಕಚೇರಿಯ 39 ವರ್ಷದ ಸಿಬ್ಬಂದಿ, ಪಾತಗಾನಹಳ್ಳಿಯ 26 ವರ್ಷದ ಯುವಕ, ಎಲರಾಂಪುರದ 26ವರ್ಷದ ಮಹಿಳೆ, ಟಿ.ಗೊಲ್ಲಹಳ್ಳಿಯ 61ವರ್ಷದ ವೃದ್ಧ, ಕರೆಕಲ್ಲಹಟ್ಟಿ ತಾಂಡದ 32 ವರ್ಷದ ಮಹಿಳೆ, ಎನ್.ಜಿ.ಹಳ್ಳಿಯ 48ವರ್ಷದ ಪುರುಷ, ಗಟ್ಲಹಳ್ಳಿಯ 52ವರ್ಷದ ಪುರುಷ, ಕುರುಬರಪಾಳ್ಯದ 38ವರ್ಷದ ಪುರುಷ, ಎಂ.ಜಿ.ಗುಣಿಯ 33ವರ್ಷದ ಪುರುಷನಿಗೆ ಕೊರೊನಾ ಸೊಂಕು ದೃಡಪಟ್ಟಿದೆ.
ಜಂಪೇನಹಳ್ಳಿಯ 39ವರ್ಷದ ಪುರುಷ, ಎತ್ತಗಾನಹಳ್ಳಿಯ 78ವರ್ಷದ ವೃದ್ಧೆ, ಅಜ್ಜಿಹಳ್ಳಿ 23 ವರ್ಷದ ಯುವಕ, ಎಲೆರಾಂಪುರದ 10ವರ್ಷದ ಮಗು, ವೆಂಕಣ್ಣನಹಳ್ಳಿಯ 48ವರ್ಷದ ಪುರುಷ, ಮೀಣಸಂದ್ರದ 18ವರ್ಷದ ಯುವಕ, ಎಂ.ವೆಂಕಟಾಪುರದ 20ವರ್ಷದ ಯುವತಿ, ಕತ್ತಿನಾಗೇನಹಳ್ಳಿಯ 55ವರ್ಷದ ಪುರುಷ, ಮುದ್ದೇನಹಳ್ಳಿಯ 60ವರ್ಷದ ವೃದ್ದ ಮತ್ತು ಚಿಕ್ಕನಹಳ್ಳಿಯ 35ವರ್ಷ ಪುರುಷನಿಗೆ ಕೊರೊನಾ ಸೊಂಕು ವರದಿಯಲ್ಲಿ ಪಾಸಿಟಿವ್ ಬಂದಿದೆ.
ರೆಡ್ಡಿಕಟ್ಟೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ-15ಜನ, ಬೆಂಗಳೂರು-2, ಕೊರಟಗೆರೆ-1, ತುಮಕೂರು ಕೊರೊನಾ ಆಸ್ಪತ್ರೆಯಲ್ಲಿ ಒಬ್ಬರಿಗೆ ಚಿಕಿತ್ಸೆಗಾಗಿ ಈಗಾಗಲೇ ದಾಖಲು ಮಾಡಲಾಗಿದೆ. ಕೊರಟಗೆರೆ ತಾಪಂ ಕಚೇರಿ ಸೇರಿದಂತೆ ತಾಲೂಕಿನ 18 ಗ್ರಾಮಗಳನ್ನು ಮುನ್ನೇಚ್ಚರಿಕೆ ಕ್ರಮವಾಗಿ ಸಿಲ್‍ಡೌನ್ ಮಾಡಲಾಗಿದೆ.
19 ಜನ ಸೊಂಕಿತರ ಪ್ರಥಮ ಸಂಪರ್ಕದಲ್ಲಿದ್ದ 200ಕ್ಕೂ ಹೆಚ್ಚು ಜನರಿಗೆ ಆಯಾ ಗ್ರಾಮಗಳಲ್ಲಿಯೇ ಸ್ಥಾನೀಕ ಕ್ವಾರಂಟೈನ್ ಮಾಡಲಾಗಿದೆ. ರೆಡ್ಡಿಕಟ್ಟೆ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ ಮಧುಗಿರಿ ಎಸಿ ಡಾ.ನಂದಿನಿದೇವಿ, ಡಿವೈಎಸ್ಪಿ ಪ್ರವೀಣ್, ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು, ಟಿಎಚ್‍ಓ ವಿಜಯಕುಮಾರ್, ಸಿಪಿಐ ನದಾಫ್, ಪಿಎಸೈ ಮುತ್ತುರಾಜು, ಪಿಡಿಓ ಯಶೋಧ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.