ಗುಬ್ಬಿ:
ನಾನು ಕಷ್ಟಪಟ್ಟು ದುಡಿದವ, ನನ್ನ ಶ್ರಮ ನನ್ನ ಜೊತೆ ಇದೆ. ಶ್ರಮಪಟ್ಟು ನಡೆಸಿದ ಉದ್ದಿಮೆಯೇ ಇಂದು ನನ್ನ ಜೀವನ ರೂಪಿಸಿದೆ. ಆಗಾಗಿ ನನಗೆ ಒಂದು ವೃತ್ತಿ ಎಂಬುದು ಇದೆ. ಆದರೆ, ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡಿ ಅಲ್ಲಿಯೇ ಪೆಟ್ರೋಲ್ ಕದ್ದ ಮಾಜಿ ಶಾಸಕ ಕೃಷ್ಣಪ್ಪರ ವೃತ್ತಿ ಜೀವನ ಎಂತಹದು ಎಂದು ಜನಕ್ಕೆ ತಿಳಿದಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಲೇವಡಿ ಮಾಡಿದರು.
ತಾಲ್ಲೂಕಿನ ಸಿ.ಎಸ್.ಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 15 ವರ್ಷಗಳಿಂದ ಜನಪರ ಕೆಲಸ ಮಾಡದೇ ಈಚೆಗೆ ನಾನು ಮಾಡಿದ ಅಭಿವೃದ್ಧಿ ಕೆಲಸವನ್ನು ನನ್ನದು ಎಂದು ಬಿಂಬಿಸಿಕೊಳ್ಳಲು ಮುಂದಾದ ಮಾಜಿ ಶಾಸಕ ಕೃಷ್ಣಪ್ಪ ದಲ್ಲಾಳಿ ಕೆಲಸವನ್ನು ಮಾಡಿ ಗುತ್ತಿಗೆದಾರರನ್ನು ಸುಲಿಗೆ ಮಾಡಿದ್ದು ಒಪನ್ ಸೀಕ್ರೇಟ್. ನನ್ನ ಬಗ್ಗೆ ಮಾತನಾಡುವ ಮುನ್ನ ಜವಾಬ್ದಾರಿ ಸ್ಥಾನದಲ್ಲಿದ್ದು ಹರಿದ ಬಾಯಿಗೆ ಮೊದಲು ಹೊಲಿಗೆ ಹಾಕಿಕೊಳ್ಳಲಿ ಎಂದು ಕಿಡಿಕಾರಿದರು.
ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲಾಗದ ಶಿಖಂಡಿಯಂತಹ ತಿಳಿಗೇಡಿಗಳ ಮುಂದಿಟ್ಟುಕೊಂಡು ಧರಣಿ ಮಾಡಿ ಸರ್ಕಾರಿ ನೌಕರರನ್ನು ಬೆದರಿಸುವ ಪ್ರವೃತ್ತಿ ಅವರಿಗೆ ಶೋಭೆ ತರುವುದಲ್ಲ. ಸಂಸ್ಕøತಿಹೀನ ಮಾಜಿ ಶಾಸಕ ಕೃಷ್ಣಪ್ಪ ಹಾಗೂ ಪುತ್ರರ ಬಗ್ಗೆ ಪತ್ರಿಕೆಗಳು ಮುಖಪುಟದಲ್ಲಿ ಬರೆದಿವೆ. ಫೆÇೀರ್ಜರಿ ಸಹಿ ಸೇರಿದಂತೆ ಹತ್ತುಹಲವು ಕೇಸುಗಳನ್ನು ಹಾಕಿಸಿಕೊಂಡಿರುವ ಅವರು ನನ್ನ ಬಗ್ಗೆ ಎಲ್ಲಾದರೂ ದೂರುಗಳಿದ್ದರೆ ತೋರಿಸಲಿ. ರೌಡಿಸಂ ಮಾಡಿದ ಅನುಭವದ ಹಿನ್ನಲೆಯಲ್ಲೇ ಅಧಿಕಾರಿಗಳನ್ನು ಬ್ಲಾಕ್‍ಮೇಲ್ ಮಾಡುವ ತಂತ್ರಗಾರಿಕೆ ಬಿಟ್ಟು ಕ್ಷೇತ್ರದ ಜನರ ಹಿತ ಕಾಯುವ ಕೆಲಸ ಮಾಡಲಿ ಎಂದರು.
ಸಿ.ಎಸ್.ಪುರ ಹೋಬಳಿಯಲ್ಲಿ ಬಹುತೇಕ ಕೆರೆಗಳಿಗೆ ಹೇಮೆ ಹರಿಸಿದ ಕಾರಣ ದ್ವೇಷ ರಾಜಕಾರಣ ಮಾಡಲು ಸಲ್ಲದ ಕಾರಣ ಹಿಡಿದು ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಗೌರವವಲ್ಲ. ಈಗಾಗಲೇ 100 ಕೋಟಿ ರೂಗಳ ಕೆಲಸ ಇಲ್ಲಿ ನಡೆದಿವೆ. ಒಟ್ಟಾರೆ ತುರುವೇಕೆರೆ ಕ್ಷೇತ್ರಕ್ಕೆ ಸಾವಿರ ಕೋಟಿ ರೂಗಳ ಅಭಿವೃದ್ದಿ ಕೆಲಸಕ್ಕೆ ತಯಾರಿ ನಡೆದಿದೆ. ಬಿಜೆಪಿ ಸರ್ಕಾರದಿಂದ ಹಲವಾರು ಯೋಜನೆ ಅನುಷ್ಠಾನಕ್ಕೆ ತರುವ ಬಗ್ಗೆ ಅಸೂಯೆ ಹುಟ್ಟಿಸಿಕೊಂಡ ಕೃಷ್ಣಪ್ಪ ಅವರು ಬುದ್ದಿಭ್ರಮಣೆಯಾದಂತೆ ನಡೆದುಕೊಳ್ಳುತ್ತಿದ್ದಾರೆ. ನೇರ ಚರ್ಚೆ ನಡೆಸಲು ವೇದಿಕೆ ಸೃಷ್ಟಿಸಿ ಅಭಿವೃದ್ದಿ ಕೆಲಸದ ಪಟ್ಟಿ ತೋರಲಿ ಎಂದು ಸವಾಲೆಸೆದರು.
ವಿಎಸ್‍ಎಸ್‍ಎನ್ ಅಧ್ಯಕ್ಷ ಬಿ.ಎಸ್.ನಾಗರಾಜು ಮಾತನಾಡಿ ಎಲೆ ಎತ್ತೋ ಗುಂಡ ಅಂದ್ರೆ ಉಂಡೋರೆಷ್ಟು ಜನ ಅನ್ನುವ ಗಾದೆಯಂತೆ ಮಾಜಿ ಶಾಸಕ ಕೃಷ್ಣಪ್ಪ ಅವರು ಧರಣಿಯಲ್ಲಿ ತಮ್ಮ ವಿಚಾರ ಬಿಟ್ಟು ಶಾಸಕರು ಮತ್ತು ಜಿಪಂ ಸದಸ್ಯರ ಕಾರ್ಯದ ಬಗ್ಗೆ ಚರ್ಚಿಸಿದ್ದಾರೆ. ಜಿಪಂ ಸದಸ್ಯರ ಓಡಾಟದ ಫಲ ಸಿ.ಎಸ್.ಪುರಕ್ಕೆ 7 ಕೋಟಿ ರೂಗಳ ಕೆಲಸ ತರಲಾಗಿತ್ತು. ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಈ 7 ಕೋಟಿ ರೂಗಳ ಕೆಲಸಕ್ಕೆ ಅಡ್ಡಿ ಪಡಿಸಲು ವಿಧಾನಸೌಧ ಸುತ್ತಿದ ಕೃಷ್ಣಪ್ಪ ಅವರ ಅಸೂಯೆ ಗುಣ ಜನಕ್ಕೆ ತಿಳಿದಿದೆ. ನನ್ನ ಸೋಲಿಗೆ ನನ್ನವರೇ ಕಾರಣ ಎನ್ನುತ್ತಿದ್ದ ನೀವು ಕೆಲಸಕ್ಕೆ ಬಾರದವರ ಮಾತು ಕೇಳಿ ಠಾಣೆ ಮುಂದೆ ಧರಣಿ ನಡೆಸಿದ್ದು ನಿಮ್ಮತನ ತೋರಿಸುತ್ತಿದೆ ಎಂದು ಛೇಡಿಸಿದರು.