ಚಿಕ್ಕನಾಯಕನಹಳ್ಳಿ:
8 ವರ್ಷದ ಬಾಲಕೊನೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ತಾಲ್ಲೂಕಿನಲ್ಲಿ ಈವರೆಗೆ ಸೋಕಿತರ ಪ್ರಮಾಣ 10ಕ್ಕೇರಿದಂತಾಗಿದೆ.
ಕಳೆದ ವಾರ ಪಟ್ಟಣದ ಸಮೀಲದ ಕಾಡೇನಹಳ್ಳಿಯ 22ವರ್ಷದ ಯುವಕನೋರ್ವನಿಗೆ ಸೋಂಕು ದೃಢಪಟ್ಟಿದ್ದು ಸದರಿ ಯವಕನ ಸಮೀಪದ ಮನೆಯಲ್ಲಿನ 8 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಕಳೆದೆರಡು ದಿನದ ಹಿಂದೆ ಬಾಲಕನಿಗೆ ಜ್ವರಬಂದ ಹಿನ್ನಲೆಯಲ್ಲಿ ಗಂಟಲ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಅದು ದೃಢಪಟ್ಟಿದೆ. ಬಾಲಕನ ಮನೆಯಲ್ಲಿ ತಂದೆ, ತಾಯಿ, ಅಜ್ಜ, ಅಜ್ಜಿ ವಾಸವಿದ್ದಾರೆ. ಈಗಾಗಲೇ ಈ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿತ್ತು. ಬಾಲಕನ್ನು ಪಟ್ಟಣದ ಆಸ್ಪತ್ರೆಯಲ್ಲಿ ಐಸೋಲೇಸನ್ ವಾರ್ಡ್‍ಗೆ ಸೇರಿಸಲಾಗಿದೆ. ಕುಟುಂಬದವರನ್ನು ಕ್ವಾರಂಟೈನ್‍ಗೊಳಪಡಿಸಲಾಗಿದೆ.
ಹೊರಗಿನಿಂದ ಬಂದವರ ಆತಂಕ: ರಾಜ್ಯದ ಬಹುತೇಕ ನಗರಗಳನ್ನು ಕೊರೊನಾ ಸೋಂಕಿತರ ಪ್ರಮಾಣ ವಿಪರೀತವಾಗಿ ಏರುತ್ತಿರುವುದರಿಂದ ನಗÀರಗಳಿಂದ ಗ್ರಾಮಗಳಿಗೆ ತಂಡೋಪತಂಡವಾಗಿ ಬರುತ್ತಿರುವುದು ಗಾಬರಿ ಹುಟ್ಟಿಸಿದೆ. ಇವರಲ್ಲಿ ಸೋಂಕಿತರನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆಯಾಗದಿರುವುದು ದೊಡ್ಡ ತಲೆನೋವಾಗಿದೆ. ಜೊತೆಗೆ ಹೊರಗಡೆಯಿಂದ ಬಂದವರ ಮಾಹಿತಿಯನ್ನು ಜನರು ಹೆಚ್ಚಿನ ಪ್ರಮಾಣದಲ್ಲಿ ತಿಳಿಸುತ್ತಿಲ್ಲ.
ಈ ಕಾರಣದಿಂದ ಸೋಂಕು ಸಮುದಾಯಕ್ಕೆ ಹರಡುತ್ತಿದೆ. ಈಗಲೂಸಹ ಯಾರು ಹೊರಗಡೆಯಿಂದ ಬಂದವರು ತಕ್ಷಣ ಆರೋಗ್ಯ ತಪಾಸಣೆಗೆ ಸ್ವಯಂ ಮುಂದಾದರೆ ಆತಂಕ ಕಮ್ಮಿಯಾಗಲಿದೆ. ಜನರೂಸಹ ತಮ್ಮ ವಾಸಸ್ಥಳದಲ್ಲಿ ನೆರೆಹೊರೆ ಪ್ರದೇಶಕ್ಕೆ ಹೊರಗಡೆಯಿಂದ ಬಂದವರ ಮಾಹಿತಿಯನ್ನು ತಕ್ಷಣ ತಿಳಿಸುವುದು ಮೊದಲ ಕರ್ತವ್ಯವಾಗಬೇಕಿದೆ.