ತುಮಕೂರು:

      ಹಾಡು ಹಗಲೇ ರೌಡಿಶೀಟರ್ ಒಬ್ಬನ ಸಹಚರರು ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಇರಿದು ಮಾಂಗಲ್ಯ ಸರಗಳು, ಮೋಬೈಲ್‍ಗಳನ್ನು ದೋಚುತ್ತಿದ್ದ ಖದೀಮರನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

      ತುಮಕೂರು ನಗರದ ಭಾರತಿ ನಗರದ ನಿವಾಸಿಯಾದ ರೌಡಿಶೀಟರ್ ರವಿ ಎಂಬುವನ ಹಿಂಬಾಲಕರಾದ ಆನಂತ್, ಪಾಪಣ್ಣಿ, ವಿಕ್ಕಿ ಎಂಬುವವರೆ ಬಂಧಿಸಲಾಗಿರುವ ಕಳ್ಳರು. ಮೊದಲೇ ಕದ್ದಿದ್ದ ಬೈಕಿನಲ್ಲಿ ಮೂರು ಜನ ತುಮಕೂರು ಕುಣಿಗಲ್ ಮಾರ್ಗದ ಹೊನ್ನುಡಿಕೆ ಹ್ಯಾಂಡ್ ಪೆÇೀಸ್ಟ್ ಬಳಿ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ ಮದ್ಯಪಾನ ಹಾಗೂ ಗಾಂಜಾ ಸೇವಿಸಿ ತುಮಕೂರು ಕಡೇ ಬರುವ ಜನರ ಬಳಿ ದರೋಡೆ ಮಾಡಿದ್ದಾರೆ. ಗೂಳೊರು ಬಳಿ ಬರುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಮಾಂಗಲ್ಯ ಸರವನ್ನು ಕಿತ್ತು ಕೊಂಡು ರಸ್ತೆ ತುಂಬಾ ಅಡ್ಡಾದಿಡ್ಡಿಯಾಗಿ ಬೈಕ್ ಓಡಾಡಿದ್ದಾರೆ.

      ಇತ್ತ ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರ ಬಾ ಆಸ್ಪತ್ರೆಯ ಸಮೀಪ ಮಹಿಳೆಯೂಬ್ಬರ ಸರ ಕಿತ್ತುಕೊಂಡು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ, ನಂತರ ವಾಸನ್ ಐ ಕೇರ್ ಆಸ್ಪತ್ರೆಯ ಮುಂಭಾಗ ಕಾರೂಂದನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರಿಂದ ಮೋಬೈಲ್ ಕಿತ್ತುಕೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

      ಮತ್ತೆ ಅಲ್ಲಿಂದ ಪರಾರಿಯಾದ ದುಷ್ಕರ್ಮಿಗಳು ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಕೌತುಮಾರನಹಳ್ಳಿ ಸೇರಿದಂತೆ ಕೆಲವು ಹಳ್ಳಿಗಳ ರಸ್ತೆಯಲ್ಲಿ ಸಾಗಿ ಕೆಲವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕ್ಯಾತ್ಸಂದ್ರ ಜಾಸ್ ಟೋಲ್ ಹತ್ತಿರ ಬಂದು ಕಾರೂಂದನ್ನು ಅಡ್ಡಗಟ್ಟಿ ಮೋಬೈಲ್ ಕಿತ್ತುಕೊಂಡು ಮತ್ತೆ ಚಾಕುವಿನಿಂದ ಇರಿದು ಕೋಳಿ ಹಳ್ಳಿ ಮೂಲಕ ಊರ್ಡಿಗೆರೆ ಕಡೆ ತೆರಳಿದ್ದಾರೆ. ಇದರ ನಡುವೆ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಚುಚ್ಚಲು ಯತ್ತಿಸಿದ್ದಾರೆ ಅಗ ಹಳ್ಳಿಗಳ ಜನರು ಇವರನ್ನು ಹಿಂಬಾಲಿಸಿ ಕೊಂಡು ಹೋಗುವಾಗ ಮಾರ್ಗದ ಮುಂದಿನ ಹಳ್ಳಿಗಳ ಜನರಿಗೆ ಮಾಹಿತಿ ನೀಡಿ ಊರ್ಡಿಗೆರೆ ಸಮೀಪ ಇರುವ ಕೊಡೀಗೆನಹಳ್ಳಿಯ ಬಳಿ ಹತ್ತಾರು ಜನ ಇವರ ಬೈಕ್‍ನಲ್ಲಿ ಮೂರು ಜನ ಅತಿವೇಗವಾಗಿ ಬಂದು ಜನರ ಮೇಲೆ ಬೈಕ್ ನುಗ್ಗಿಸಲು ಪ್ರಯತ್ನಿ ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಜನರು ಇವರನ್ನು ಕೆಳಗೆ ಬೀಳಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ಅಲ್ಲದೆ ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಕ್ಯಾತ್ಸಂದ್ರ ಪೊಲೀಸ್‍ರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಒಬ್ಬ ಸತ್ತಂತೆ ನಾಟಕ ಮಾಡಿಕೊಂಡು ಜನರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಇಬ್ಬರನ್ನು ಒಪ್ಪಿಸಿದ್ದಾರೆ. ನಂತರ ಪೊಲೀಸರು ಇಬ್ಬರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

      ಚಿಕ್ಕಪೇಟೆಯ ಬ್ರಾಹ್ಮಣರ ಬೀದಿಯಲ್ಲಿ ಇತ್ತಿಚೆಗೆ ಕೆಲವು ದುಷ್ಕರ್ಮಿಗಳು ನರಸಿಂಹಮೂರ್ತಿ ಎಂಬುವನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಅವನ ಮಗನಾದ ರೌಡಿಶೀಟರ್ ರವಿ ಎಂಬುವನ ಸಹಚರರಾದ ಈ ಮೂರು ಜನರಲ್ಲಿ ಪಾಪಣ್ಣಿ ಭಾರತಿ ನಗರದ ನಿವಾಸಿಯಾಗಿದ್ದಾನೆ, ಅನಂತ್ ಎಂಬವನ್ನು ಪಾವಗಡ ತಾಲೂಕಿನ ನಿವಾಸಿಯಾಗಿದ್ದು ಕಬ್ಬಿಣ ಕಟ್ಟುವ ಕೆಲಸ ಮಾಡುತ್ತಿದ್ದ. ಪ್ರಸ್ತುತ ಈಗ ತುಮಕೂರಿನ ಹನುಮಂತಪುರದ ನಿವಾಸಿಯಾಗಿದ್ದಾನೆ. ಮತ್ತೂಬ್ಬ ಮೂಲತಃ ಗುಬ್ಬಿ ತಾಲೂಕಿನ ಗೌರಿಪುರದ ನಿವಾಸಿಯಾಗಿದ್ದು, ಈತ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದವನು ಎಂದು ತಿಳಿದು ಬಂದಿದೆ.
ಈ ಸಂಬಂಧ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

      ಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶೇಷಾದ್ರಿ, ಹೊಸ ಬಡಾವಣೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಂಜುಳಾ, ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಪ್ರಸಾದ್, ಇವರುಗಳು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

      ಘಟನೆ ನಡೆದ ಸ್ಥಳಗಳಿಗೆ ಡಿವೈಎಸ್ಪಿ ತಿಪ್ಪೇಸ್ವಾಮಿ, ಇನ್ಸ್‍ಪೆಕ್ಟರ್‍ಗಳಾದ ಶ್ರೀಧರ್, ಪಾರ್ವತಮ್ಮ, ಇವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(Visited 38 times, 1 visits today)