ತುಮಕೂರು: 

      ಜಿಲ್ಲೆಯಲ್ಲಿ ಬುಧವಾರ 27 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 319 ತಲುಪಿದೆ.

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಈ ಕುರಿತು ಮಾಹಿತಿ ನೀಡಿದ್ದು, ಚಿಕ್ಕನಾಯಕನಹಳ್ಳಿ ತಾಲ್ಲೂಕೊಂದರಲ್ಲೇ 16 ಜನರಲ್ಲಿ ಸೋಂಕು ಕಾಣಿಸಿದೆ. ಕೊರಟಗೆರೆ 1, ಮಧುಗಿರಿ 5, ತಿಪಟೂರು 3, ತುಮಕೂರಿನಲ್ಲಿ 2 ಪ್ರಕರಣ ಪತ್ತೆಯಾಗಿದೆ.

ಚಿಕ್ಕನಾಯಕನಹಳ್ಳಿ – 16:

      ಚಿಕ್ಕನಾಯಕನಹಳ್ಳಿ ತಾಲೂಕಿನ ವಿಭಾಗದಲ್ಲಿ 38 ವರ್ಷ ಮತ್ತು 15 ವರ್ಷದ ಹೆಣ್ಣು, ಗೋಡೆ ಕೆರೆಯ 22 ವರ್ಷದ ಗಂಡು, 45 ವರ್ಷದ ಹೆಣ್ಣು, 50 ವರ್ಷದ ಗಂಡು, 70 ವರ್ಷದ ಹೆಣ್ಣು, 47 ವರ್ಷದ ಗಂಡು, 32 ವರ್ಷದ ಹೆಣ್ಣು, 18 ವರ್ಷದ ಹೆಣ್ಣು, ಹೆಸರಳ್ಳಿಯ 5 ವರ್ಷದ ಹೆಣ್ಣು, ಕಾಡೇನಹಳ್ಳಿಯ 19 ವರ್ಷದ ಗಂಡು, 45 ವರ್ಷದ ಗಂಡು, 19 ವರ್ಷದ ಗಂಡು, 62 ವರ್ಷದ ಹೆಣ್ಣು, 60 ವರ್ಷದ ಹೆಣ್ಣು ಮತ್ತು 20 ವರ್ಷದ ಹೆಣ್ಣುನಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ.

ಮಧುಗಿರಿ – 05

      ಮುತ್ತರಾಯನಹಳ್ಳಿಯ 42 ವರ್ಷದ ಹೆಣ್ಣು, ಟಿ ಡಿ ಹಳ್ಳಿಯ 39 ವರ್ಷದ ಹೆಣ್ಣು, ತೆರಿಯೂರಿನ 56 ವರ್ಷದ ಹೆಣ್ಣು, ಕಾಡಗತ್ತೂರಿನ 66 ವರ್ಷದ ಗಂಡು, ಮುದ್ದೇನಹಳ್ಳಿಯ 75 ವರ್ಷದ ಗಂಡಿನಲ್ಲಿ ಸೋಂಕು ಪಾಸಿಟಿವ್ ಬಂದಿದೆ.

ಕೊರಟಗೆರೆ – 01

      ಕೊರಟಗೆರೆ ತಾಲೂಕಿನಲ್ಲಿ 53 ವರ್ಷದ ಗಂಡಿಗೆ ಕರೋನಾ ಕಾಣಿಸಿಕೊಂಡಿದೆ.

ತಿಪಟೂರು – 03

      ಬುಲ್ಲೇನಹಳ್ಳಿಯ 45 ವರ್ಷದ ಹೆಣ್ಣು, ಚಟ್ಟೇನಹಳ್ಳಿ 20 ವರ್ಷದ ಹೆಣ್ಣು, ನಗರ ಪೊಲೀಸ್ ಠಾಣೆಯ 56 ವರ್ಷದ ಗಂಡಿಗೆ ಸೋಂಕು ಪಾಸಿಟಿವ್ ಬಂದಿದೆ.  

      ಇನ್ನು ಕುಣಿಗಲ್, ಪಾವಗಡ, ಗುಬ್ಬಿ ಮತ್ತು ತುರುವೇಕೆರೆ, ಶಿರಾ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗೇಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಇನ್ನೂ 240 ಮಂದಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗಾಗಲೇ 68 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

      ಇತ್ತೀಚೆಗೆ ಮಕ್ಕಳಿಗೆ ಕೊವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿಸಿದೆ. ತಂದೆ ತಾಯಿ ಗಳ ನಿರ್ಲಕ್ಷ್ಯದಿಂದ ಮಕ್ಕಳಿಗೆ ಕೊರೊನಾ ಸೊಂಕು ವ್ಯಾಪಿಸುತ್ತಿದೆ.
(Visited 147 times, 1 visits today)